• Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
  • Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
No Result
View All Result
FinCore News
No Result
View All Result
Home IPO/FPO

ದೇಶದ ಅತಿ ದೊಡ್ಡ ‘ಜಿಯೋ ಐಪಿಒ’ ಅಬ್ಬರದ ಆರಂಭ: 23 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ!

fincorenews by fincorenews
October 21, 2026
in IPO/FPO
0
JIO IPO
189
SHARES
1.5k
VIEWS
Share on FacebookShare on Twitter

ಮುಖ್ಯಾಂಶಗಳು:
– ಜಿಯೋ ಐಪಿಒಗೆ ಹೂಡಿಕೆದಾರರಿಂದ ಭರ್ಜರಿ ಬೇಡಿಕೆ, ಕ್ಯೂಐಬಿ ವಿಭಾಗವು 6.72 ಪಟ್ಟು ಸಬ್‌ಸ್ಕ್ರೈಬ್
– ಮೊದಲ ದಿನವೇ 23 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆ, ಆಂಕರ್ ಹೂಡಿಕೆದಾರರಿಂದ 30 ಪಟ್ಟು ಹೆಚ್ಚಿನ ಬೇಡಿಕೆ
– ರಿಲಯನ್ಸ್ ಷೇರುದಾರರಿಗಾಗಿ ₹2,500 ಕೋಟಿ ಮೀಸಲು, ಷೇರುಗಳನ್ನು ಪಡೆದುಕೊಳ್ಳಲು ಹೆಚ್ಚುವರಿ ಅವಕಾಶ.
– ರಿಲಯನ್ಸ್ ಉದ್ಯೋಗಿಗಳ ಕೋಟಾ ಶೇ. 100ರಷ್ಟು ಭರ್ತಿ, ಷೇರುದಾರರ ಕೋಟಾ ಕೂಡ ಶೇ. 89ರಷ್ಟು ಸಬ್‌ಸ್ಕ್ರೈಬ್
– ದೊಡ್ಡ ಸಾಂಸ್ಥಿಕ ಹೂಡಿಕೆದಾರರಿಂದ ಭಾರೀ ಬೇಡಿಕೆ, ಕ್ಯೂಐಬಿ (QIB) ವಿಭಾಗವು 6.72 ಪಟ್ಟು ಸಬ್‌ಸ್ಕ್ರೈಬ್

– GMP 23%

ಮುಂಬಯಿ, ಅಕ್ಟೋಬರ್ 21, 2026:
ದೇಶದ ಕಾರ್ಪೊರೇಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಜಿಯೋ ಪ್ಲಾಟ್‌ಫಾರ್ಮ್ಸ್‌ನ ₹30,213 ಕೋಟಿ ಮೊತ್ತದ ಭಾರಿ ಗಾತ್ರದ ಐಪಿಒ ಆರಂಭವಾಗಿದ್ದು, ಹೂಡಿಕೆದಾರರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಷೇರು ಮಾರುಕಟ್ಟೆಗೆ ತೆರೆದ ಕೇವಲ 100 ನಿಮಿಷಗಳಲ್ಲಿ ಶೇ. 100ರಷ್ಟು ಭರ್ತಿಯಾಗಿ ಹೊಸ ದಾಖಲೆ ಬರೆದ ಈ ಐಪಿಒ, ಕೇವಲ ನಾಲ್ಕು ಗಂಟೆಗಳ ಅಂತರದಲ್ಲಿ ಒಟ್ಟಾರೆಯಾಗಿ 1.66 ಪಟ್ಟು ಓವರ್‌ ಸಬ್‌ ಸ್ಕ್ರೈಬ್ ಆಗಿದೆ. ಬುಧವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ಬರೋಬ್ಬರಿ 23 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.

ಇದುವರೆಗೆ ಭಾರತದ ಅತಿ ದೊಡ್ಡ ಐಪಿಒ ಎನಿಸಿದ್ದ ಹುಂಡೈ ಮೋಟಾರ್ ಇಂಡಿಯಾ (₹27,870 ಕೋಟಿ) ದಾಖಲೆಯನ್ನು ಜಿಯೋ ಮುರಿದಿದೆ. ಈ ಐಪಿಒದ ಷೇರು ಬೆಲೆ ಶ್ರೇಣಿಯನ್ನು ₹1,065 ರಿಂದ ₹1,119 ರವರೆಗೆ ನಿಗದಿಪಡಿಸಲಾಗಿದೆ. ಅಕ್ಟೋಬರ್ 23ರವರೆಗೆ ಹೂಡಿಕೆಗೆ ಅವಕಾಶವಿರುವ ಈ ಐಪಿಒ ಕುರಿತ ಸಂಪೂರ್ಣ ವಿವರಗಳು ಇಲ್ಲಿವೆ.

ಆಂಕರ್ ಹೂಡಿಕೆದಾರರಿಂದ ನಿರೀಕ್ಷೆಗೂ ಮೀರಿದ ಬೇಡಿಕೆ
ಐಪಿಒ ಅಧಿಕೃತವಾಗಿ ಸಾರ್ವಜನಿಕರಿಗೆ ಮುಕ್ತಗೊಳ್ಳುವುದಕ್ಕೂ ಮುನ್ನವೇ ಬೃಹತ್ ಹೂಡಿಕೆದಾರರ ಒಲವು ಸ್ಪಷ್ಟವಾಗಿತ್ತು. ಆಂಕರ್ ಹೂಡಿಕೆದಾರರಿಗಾಗಿ ಮೀಸಲಿಟ್ಟಿದ್ದ ಸುಮಾರು ₹8,110 ಕೋಟಿ ಮೌಲ್ಯದ ಷೇರುಗಳಿಗೆ ಬರೋಬ್ಬರಿ ₹2.5 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಬಿಡ್‌ಗಳು ಬಂದಿವೆ. ಅಂದರೆ ನಿರೀಕ್ಷೆಗಿಂತ 30 ಪಟ್ಟು ಹೆಚ್ಚು ಬೇಡಿಕೆ ಲಭಿಸಿದೆ. ಇದರಲ್ಲಿ ಅತಿ ದೊಡ್ಡ ಪಾಲನ್ನು (ಸುಮಾರು ₹500 ಕೋಟಿ) ದೇಶದ ಪ್ರಮುಖ ವಿಮಾ ಸಂಸ್ಥೆಯಾದ ಎಲ್‌ಐಸಿ (LIC) ಪಡೆದುಕೊಂಡಿದೆ.

ಉದ್ಯೋಗಿಗಳು ಮತ್ತು ಷೇರುದಾರರ ಭರ್ಜರಿ ಉತ್ಸಾಹ
ಉದ್ಯೋಗಿಗಳ ಕೋಟಾ: ರಿಲಯನ್ಸ್ ಉದ್ಯೋಗಿಗಳಿಗಾಗಿ ಕಾಯ್ದರಿಸಿದ್ದ ಮೀಸಲು ಕೋಟಾವು ಕೇವಲ ಗಂಟೆಗಳ ಒಳಗೆ ಶೇ. 100ರಷ್ಟು ಸಂಪೂರ್ಣವಾಗಿ ಭರ್ತಿಯಾಗಿದೆ.

ಷೇರುದಾರರ ಕೋಟಾ: ರಿಲಯನ್ಸ್ ಇಂಡಸ್ಟ್ರೀಸ್‌ನ ಅರ್ಹ ಷೇರುದಾರರಿಗಾಗಿ ₹2,500 ಕೋಟಿವರೆಗೆ ಷೇರುಗಳನ್ನು ಕಾಯ್ದಿರಿಸಲಾಗಿದ್ದು, ಈ ಪೈಕಿ ಶೇ. 89ರಷ್ಟು ಕೋಟಾ ಈಗಾಗಲೇ ಸಬ್‌ಸ್ಕ್ರೈಬ್ ಆಗಿದೆ.

ಸಂಸ್ಥೆಗಳು ಮತ್ತು ಚಿಲ್ಲರೆ ಹೂಡಿಕೆದಾರರ ಪ್ರತಿಕ್ರಿಯೆ:
ದೊಡ್ಡ ಪ್ರಮಾಣದಲ್ಲಿ ಸಾಂಸ್ಥಿಕ ಹೂಡಿಕೆದಾರರಿಂದ ಬೇಡಿಕೆ ಕಂಡುಬಂದಿದ್ದು, ಕ್ಯೂಐಬಿ ವಿಭಾಗವು ಬುಧವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ 4.86 ಪಟ್ಟು (ಮತ್ತೊಂದು ವರದಿಯಂತೆ 3.68 ಪಟ್ಟು) ಅಧಿಕೃತವಾಗಿ ಓವರ್‌ ಸಬ್‌ಸ್ಕ್ರೈಬ್ ಆಗಿದೆ. ಚಿಲ್ಲರೆ ಹೂಡಿಕೆದಾರರ ವಿಭಾಗದಲ್ಲಿ ಶೇ. 49ರಷ್ಟು ಬಿಡ್‌ ಸಲ್ಲಿಕೆಯಾಗಿದೆ.

ರಿಲಯನ್ಸ್ ಷೇರುದಾರರಿಗೆ ವಿಶೇಷ ಅವಕಾಶ
ಈ ಐಪಿಒದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅರ್ಹ ಷೇರುದಾರರಿಗೆ ವಿಶೇಷ ಸೌಲಭ್ಯವಿದ್ದು, ಅವರು ಚಿಲ್ಲರೆ ಹಾಗೂ ಷೇರುದಾರರ ಎರಡೂ ವಿಭಾಗಗಳಲ್ಲಿ ಏಕಕಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಅವರಿಗೆ ಷೇರು ಹಂಚಿಕೆಯಾಗುವ ಸಂಭವನೀಯತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಉದ್ಯೋಗಿಗಳಿಗಾಗಿ ಪ್ರತ್ಯೇಕವಾಗಿ ₹500 ಕೋಟಿ ಮೌಲ್ಯದ ಕೋಟಾ ಮೀಸಲಿರಿಸಲಾಗಿದೆ. ದೇಶದ ಅತಿ ದೊಡ್ಡ ಜಿಯೋ ಐಪಿಒದಲ್ಲಿ ಹೂಡಿಕೆ ಮಾಡಲು ಅಕ್ಟೋಬರ್ 23 ಕೊನೆಯ ದಿನವಾಗಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ಮಟ್ಟದ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

 

 

 

 

 

 

 

Tags: anil ambanijio ipoJIO IPO subscribeJio Platforms IPOJio Platforms IPO anchor investorsmukesh ambani
Share76Tweet47
  • Trending
  • Comments
  • Latest
microsoft

60,000 ಟೆಕ್ಕಿಗಳಿಗೆ ತಾವಾಗಿಯೇ ಕೆಲಸ ಬಿಡಲು ಮೈಕ್ರೊಸಾಫ್ಟ್‌ ಆಫರ್!

October 27, 2026
Dhee masala

ಅಡುಗೆಮನೆಯಲ್ಲೇ ಹುಟ್ಟಿಕೊಂಡ ಬೆಂಗಳೂರಿನ ಹೆಮ್ಮೆಯ ಧೀ ಮಸಾಲ! Business Success

October 30, 2026
jio ipo

ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಎಂಟ್ರಿ! ಲಿಸ್ಟಿಂಗ್‌ನಲ್ಲಿ ಪ್ರತಿ ಷೇರಿಗೆ 239/- ಲಾಭ!

October 28, 2026
ನಂದಿನಿ ಹಾಲಿನ ದರ ಲೀಟರ್‌ಗೆ 8 ರೂಪಾಯಿ ಹೆಚ್ಚಳ, ನವೆಂಬರ್‌ 1ರಿಂದಲೇ ಜಾರಿ

ನಂದಿನಿ ಹಾಲಿನ ದರ ಲೀಟರ್‌ಗೆ 8 ರೂಪಾಯಿ ಹೆಚ್ಚಳ, ನವೆಂಬರ್‌ 1ರಿಂದಲೇ ಜಾರಿ

October 29, 2026
EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

0
ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ  ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

0
ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

0
ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

0
gold rate

ಅಕ್ಟೋಬರ್‌ನಲ್ಲಿ ಚಿನ್ನದ ಬೆಲೆ 7% ಕುಸಿತ, ಬೆಳ್ಳಿ 20% ಅಗ್ಗ

November 3, 2026
salary

ಸಂಬಳ ಸಾಲುತ್ತಿಲ್ಲ, ಆದಾಯದ ಮೂಲ ಹೆಚ್ಚಿಸಲು ಭಾರತೀಯರ ಪ್ರಯತ್ನ

November 2, 2026
sebi

ವಿದೇಶಿ ಹೂಡಿಕೆದಾರರಿಗೆ LTCG ತೆರಿಗೆ ರದ್ದುಗೊಳಿಸಲು ಸೆಬಿ ಸಲಹೆ

November 2, 2026
reliance

ರಿಲಯನ್ಸ್‌ನ 3 ತಿಂಗಳಿನ ಲಾಭ ದಾಖಲೆಯ ₹29,550 ಕೋಟಿಗೆ ಏರಿಕೆ !

October 31, 2026
FinCore News




Trusted Financial News & Market Insights. Empowering Smarter Investments for a Wealthier Tomorrow





Categories tes

  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Uncategorized
  • Wealth

ಅಕ್ಟೋಬರ್‌ನಲ್ಲಿ ಚಿನ್ನದ ಬೆಲೆ 7% ಕುಸಿತ, ಬೆಳ್ಳಿ 20% ಅಗ್ಗ

ಸಂಬಳ ಸಾಲುತ್ತಿಲ್ಲ, ಆದಾಯದ ಮೂಲ ಹೆಚ್ಚಿಸಲು ಭಾರತೀಯರ ಪ್ರಯತ್ನ

ವಿದೇಶಿ ಹೂಡಿಕೆದಾರರಿಗೆ LTCG ತೆರಿಗೆ ರದ್ದುಗೊಳಿಸಲು ಸೆಬಿ ಸಲಹೆ

Copyright © 2026 Fincore News. Designed by KIPL

No Result
View All Result
  • Contact Us
  • Homepages

Copyright © 2026 Finecore News. Designed by KIPL