• Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
  • Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
No Result
View All Result
FinCore News
No Result
View All Result
Home Companies

ರಿಲಯನ್ಸ್‌ನ 3 ತಿಂಗಳಿನ ಲಾಭ ದಾಖಲೆಯ ₹29,550 ಕೋಟಿಗೆ ಏರಿಕೆ !

fincorenews by fincorenews
October 31, 2026
in Companies
0
reliance
189
SHARES
1.5k
VIEWS
Share on FacebookShare on Twitter

-ರಿಲಯನ್ಸ್‌ನ ತ್ರೈಮಾಸಿಕ ಲಾಭ ದಾಖಲೆಯ ₹29,550 ಕೋಟಿಗೆ ಏರಿಕೆ
– ಜಿಯೋ ಹಾಗೂ ತೈಲ- ರಾಸಾಯನಿಕ ಉದ್ಯಮದಿಂದ ಆದಾಯ ಹೆಚ್ಚಳ
– ​ಕಂಪನಿಯ ತ್ರೈಮಾಸಿಕ ಒಟ್ಟಾರೆ ಆದಾಯ ಇದೇ ಮೊದಲ ಬಾರಿಗೆ ₹3.62 ಲಕ್ಷ ಕೋಟಿ ಗಡಿ ದಾಟಿದೆ.
– ನಿವ್ವಳ ಲಾಭದಲ್ಲಿ ಶೇ. 33.8 ರಷ್ಟು ಏರಿಕೆ
– ​ಆಯಿಲ್-ಕೆಮಿಕಲ್ ವಿಭಾಗದ ಇಬಿಐಟಿಡಿಎ ಸುಮಾರು ಶೇ. 68 ರಷ್ಟು ಹೆಚ್ಚಳವಾಗಿ ದಾಖಲೆಯ ₹25,203 ಕೋಟಿಗೆ ತಲುಪಿದೆ.
– ​ರಿಲಯನ್ಸ್‌ನ ಅರ್ಧವಾರ್ಷಿಕ ಲಾಭ ಇದೇ ಮೊದಲ ಬಾರಿಗೆ ₹50 ಸಾವಿರ ಕೋಟಿಯ ಗಡಿ ದಾಟಿದೆ

​ಮುಂಬಯಿ, ಅಕ್ಟೋಬರ್ 30, 2026: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲೆಯ ಸಾಧನೆ ಮಾಡಿದೆ. ಜಿಯೋ ಪ್ಲಾಟ್‌ಫಾರ್ಮ್ಸ್‌ನ ಹೆಚ್ಚಿದ ಆದಾಯ ಹಾಗೂ ತೈಲ- ರಾಸಾಯನಿಕ ಉದ್ಯಮದ ಸಾರ್ವಕಾಲಿಕ ಅತ್ಯುತ್ತಮ ಪ್ರದರ್ಶನವು ಕಂಪನಿಯ ಆರ್ಥಿಕ ಫಲಿತಾಂಶಕ್ಕೆ ಬಲ ನೀಡಿದೆ. ರಿಲಯನ್ಸ್‌ನ ಸಂಯೋಜಿತ ನಿವ್ವಳ ಲಾಭವು ವಾರ್ಷಿಕ ಆಧಾರದ ಮೇಲೆ ಶೇ. 33.8 ರಷ್ಟು ಹೆಚ್ಚಳವಾಗಿ ₹29,550 ಕೋಟಿಗೆ ತಲುಪಿದ್ದು, ಇದು ಇದುವರೆಗಿನ ಗರಿಷ್ಠ ತ್ರೈಮಾಸಿಕ ಲಾಭವಾಗಿದೆ. ಕಂಪನಿಯ ಒಟ್ಟು ಆದಾಯ ಕೂಡ ಶೇ. 27.8 ರಷ್ಟು ಏರಿಕೆಯಾಗಿ ದಾಖಲೆಯ ₹3,62,268 ಕೋಟಿಗೆ ಏರಿಕೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಮೊದಲ 6 ತಿಂಗಳಲ್ಲಿ) ರಿಲಯನ್ಸ್‌ನ ಒಟ್ಟು ನಿವ್ವಳ ಲಾಭವು ಇದೇ ಮೊದಲ ಬಾರಿಗೆ ₹50 ಸಾವಿರ ಕೋಟಿಯ ಗಡಿ ದಾಟಿದೆ.
​ರಿಲಯನ್ಸ್‌ನ ಈ ಅಭೂತಪೂರ್ವ ಸಾಧನೆಯಲ್ಲಿ ಅದರ ತೈಲ- ರಾಸಾಯನಿಕ ಉದ್ಯಮವು ಪ್ರಮುಖ ಪಾತ್ರ ವಹಿಸಿದೆ. ಈ ವಿಭಾಗದ ಇಬಿಐಟಿಡಿಎ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 67.9 ರಷ್ಟು ಹೆಚ್ಚಾಗಿ ದಾಖಲೆಯ ₹25,203 ಕೋಟಿಗೆ ತಲುಪಿದೆ. ಒ2ಸಿ ಉದ್ಯಮದ ಆದಾಯವೂ ಶೇ. 44.2 ರಷ್ಟು ಏರಿಕೆಯಾಗಿ ₹2,31,601 ಕೋಟಿಯಾಗಿದೆ. ಸಾರಿಗೆ ಇಂಧನದ ರಿಫೈನಿಂಗ್ ಮಾರ್ಜಿನ್‌ನಲ್ಲಾದ ತೀವ್ರ ಏರಿಕೆ ಹಾಗೂ ಪಾಲಿಯೆಸ್ಟರ್ ಉದ್ಯಮದ ಮಾರ್ಜಿನ್ ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿರುವುದು ಈ ಸಾರ್ವಕಾಲಿಕ ಸಾಧನೆಗೆ ಮುಖ್ಯ ಕಾರಣಗಳಾಗಿವೆ.

​ಈ ಅವಧಿಯಲ್ಲಿ ರಿಲಯನ್ಸ್ ಕಚ್ಚಾ ತೈಲ ಪೂರೈಕೆಗೆ ಸಂಬಂಧಿಸಿದ ಸವಾಲುಗಳನ್ನು ಕೂಡ ಸಮರ್ಥವಾಗಿ ಎದುರಿಸಿದೆ. ಸ್ಟ್ರೇಟ್ ಆಫ್ ಹೊರ್ಮುಜ್‌ನಲ್ಲಿನ ಅಡಚಣೆಗಳ ಹೊರತಾಗಿಯೂ, ಕಂಪನಿಯು ಲ್ಯಾಟಿನ್ ಅಮೆರಿಕ, ಉತ್ತರ ಅಮೆರಿಕ ಮತ್ತು ಮೆಡಿಟರೇನಿಯನ್ ಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದ ಕಚ್ಚಾ ತೈಲ ಪೂರೈಕೆಯನ್ನು ಖಚಿತಪಡಿಸಿಕೊಂಡು, ದಾಖಲೆ ಪ್ರಮಾಣದಲ್ಲಿ ಕಚ್ಚಾ ತೈಲ ಸಂಸ್ಕರಣೆ ಮಾಡಿದೆ. ಇದರಿಂದಾಗಿ ದೇಶೀಯ ಇಂಧನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಯಿತು.
​ರಿಲಯನ್ಸ್‌ನ ಇತರ ಉದ್ಯಮಗಳೂ ಸಹ ಕಂಪನಿಯ ಉತ್ತಮ ಪ್ರದರ್ಶನಕ್ಕೆ ಕೊಡುಗೆ ನೀಡಿವೆ. ಜಿಯೋ ಪ್ಲಾಟ್‌ಫಾರ್ಮ್ಸ್‌ನ ಆದಾಯ ಮತ್ತು ಲಾಭದಲ್ಲಿ ಗಮನಾರ್ಹ ಏರಿಕೆಯಾಗಿದ್ದರೆ, ರಿಲಯನ್ಸ್ ರಿಟೇಲ್ ಈ ತ್ರೈಮಾಸಿಕದಲ್ಲಿ 303 ಹೊಸ ಸ್ಟೋರ್‌ಗಳನ್ನು ಆರಂಭಿಸಿ, ಡಿಜಿಟಲ್ ಕಾಮರ್ಸ್ ವಿಸ್ತರಿಸಿದೆ. ಜಿಯೋಸ್ಟಾರ್ ಆದಾಯದಲ್ಲೂ ಬೆಳವಣಿಗೆ ದಾಖಲಾಗಿದೆ. ತೈಲ ಮತ್ತು ಅನಿಲ ವಿಭಾಗದ ಆದಾಯವು ಹೆಚ್ಚೂಕಡಿಮೆ ಸ್ಥಿರವಾಗಿದೆ. ಇನ್ನೊಂದೆಡೆ, ಕಂಪನಿಯು ತನ್ನ ನ್ಯೂ ಎನರ್ಜಿ (ಹೊಸ ಇಂಧನ) ಯೋಜನೆಗಳಲ್ಲಿ ಹೂಡಿಕೆಯನ್ನು ಮುಂದುವರಿಸಿದೆ.

Tags: #BusinessNewsKannada#RelianceIndustries#RILProfit#StockMarketIndia
Share76Tweet47
  • Trending
  • Comments
  • Latest
microsoft

60,000 ಟೆಕ್ಕಿಗಳಿಗೆ ತಾವಾಗಿಯೇ ಕೆಲಸ ಬಿಡಲು ಮೈಕ್ರೊಸಾಫ್ಟ್‌ ಆಫರ್!

October 27, 2026
Dhee masala

ಅಡುಗೆಮನೆಯಲ್ಲೇ ಹುಟ್ಟಿಕೊಂಡ ಬೆಂಗಳೂರಿನ ಹೆಮ್ಮೆಯ ಧೀ ಮಸಾಲ! Business Success

October 30, 2026
jio ipo

ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಎಂಟ್ರಿ! ಲಿಸ್ಟಿಂಗ್‌ನಲ್ಲಿ ಪ್ರತಿ ಷೇರಿಗೆ 239/- ಲಾಭ!

October 28, 2026
ನಂದಿನಿ ಹಾಲಿನ ದರ ಲೀಟರ್‌ಗೆ 8 ರೂಪಾಯಿ ಹೆಚ್ಚಳ, ನವೆಂಬರ್‌ 1ರಿಂದಲೇ ಜಾರಿ

ನಂದಿನಿ ಹಾಲಿನ ದರ ಲೀಟರ್‌ಗೆ 8 ರೂಪಾಯಿ ಹೆಚ್ಚಳ, ನವೆಂಬರ್‌ 1ರಿಂದಲೇ ಜಾರಿ

October 29, 2026
EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

0
ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ  ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

0
ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

0
ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

0
gold rate

ಅಕ್ಟೋಬರ್‌ನಲ್ಲಿ ಚಿನ್ನದ ಬೆಲೆ 7% ಕುಸಿತ, ಬೆಳ್ಳಿ 20% ಅಗ್ಗ

November 3, 2026
salary

ಸಂಬಳ ಸಾಲುತ್ತಿಲ್ಲ, ಆದಾಯದ ಮೂಲ ಹೆಚ್ಚಿಸಲು ಭಾರತೀಯರ ಪ್ರಯತ್ನ

November 2, 2026
sebi

ವಿದೇಶಿ ಹೂಡಿಕೆದಾರರಿಗೆ LTCG ತೆರಿಗೆ ರದ್ದುಗೊಳಿಸಲು ಸೆಬಿ ಸಲಹೆ

November 2, 2026
reliance

ರಿಲಯನ್ಸ್‌ನ 3 ತಿಂಗಳಿನ ಲಾಭ ದಾಖಲೆಯ ₹29,550 ಕೋಟಿಗೆ ಏರಿಕೆ !

October 31, 2026
FinCore News




Trusted Financial News & Market Insights. Empowering Smarter Investments for a Wealthier Tomorrow





Categories tes

  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Uncategorized
  • Wealth

ಅಕ್ಟೋಬರ್‌ನಲ್ಲಿ ಚಿನ್ನದ ಬೆಲೆ 7% ಕುಸಿತ, ಬೆಳ್ಳಿ 20% ಅಗ್ಗ

ಸಂಬಳ ಸಾಲುತ್ತಿಲ್ಲ, ಆದಾಯದ ಮೂಲ ಹೆಚ್ಚಿಸಲು ಭಾರತೀಯರ ಪ್ರಯತ್ನ

ವಿದೇಶಿ ಹೂಡಿಕೆದಾರರಿಗೆ LTCG ತೆರಿಗೆ ರದ್ದುಗೊಳಿಸಲು ಸೆಬಿ ಸಲಹೆ

Copyright © 2026 Fincore News. Designed by KIPL

No Result
View All Result
  • Contact Us
  • Homepages

Copyright © 2026 Finecore News. Designed by KIPL