• Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
  • Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
No Result
View All Result
FinCore News
No Result
View All Result
Home Business

ಸೆಪ್ಟೆಂಬರ್‌ನಲ್ಲಿ ಏರ್‌ಟೆಲ್‌ಗಿಂತ 10 ಪಟ್ಟು ಹೆಚ್ಚು ಗ್ರಾಹಕರನ್ನು ಗಳಿಸಿದ ಜಿಯೋ!

fincorenews by fincorenews
October 30, 2026
in Business
0
Jio
189
SHARES
1.5k
VIEWS
Share on FacebookShare on Twitter

–ಸೆಪ್ಟೆಂಬರ್‌ನಲ್ಲಿ ಜಿಯೋಗೆ 19 ಲಕ್ಷ ಮತ್ತು ಏರ್‌ಟೆಲ್‌ಗೆ 2 ಲಕ್ಷ ಮೊಬೈಲ್ ಗ್ರಾಹಕರು ಹೆಚ್ಚಳ
– ಮೂಲ ಮೊಬೈಲ್ ಗ್ರಾಹಕರ ಒಟ್ಟು ಹೆಚ್ಚಳದಲ್ಲಿ ಜಿಯೋದ ಪಾಲು ಶೇಕಡಾ 86ಕ್ಕೆ ಹೆಚ್ಚಳ, ಆಕ್ಟಿವ್ ಬಳಕೆದಾರರಲ್ಲೂ ಏರಿಕೆ
– ಮೂಲ ಮೊಬೈಲ್ ಗ್ರಾಹಕರು ಅಂದರೆ ‘ಮೆಷಿನ್-ಟು-ಮೆಷಿನ್’ ಸಂಪರ್ಕಗಳನ್ನು ಹೊರತುಪಡಿಸಿ ಪರಿಗಣಿಸುವ ಗ್ರಾಹಕರು

ಮುಂಬಯಿ: ರಿಲಯನ್ಸ್ ಜಿಯೋ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ತಾನೇಕೆ ‘ಸರ್ವಾಧಿಕಾರಿ’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಟ್ರಾಯ್ ಬಿಡುಗಡೆ ಮಾಡಿರುವ ಸೆಪ್ಟೆಂಬರ್ ತಿಂಗಳ ವರದಿಯ ಪ್ರಕಾರ, ದೇಶದ ಮೂಲ ಮೊಬೈಲ್ ಚಂದಾದಾರರ ಶೇಕಡಾವಾರು ಬೆಳವಣಿಗೆಗೆ ಜಿಯೋವೇ ಚಾಲಕ ಶಕ್ತಿಯಾಗಿದೆ. ಇದೇ ಅವಧಿಯಲ್ಲಿ ಭಾರ್ತಿ ಏರ್‌ಟೆಲ್ ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಕನಿಷ್ಠ ಗ್ರಾಹಕರ ಸೇರ್ಪಡೆಯನ್ನು ದಾಖಲಿಸಿದೆ.

ವಿಶ್ಲೇಷಕರ ವರದಿಗಳ ಪ್ರಕಾರ, ‘ಮೆಷಿನ್-ಟು-ಮೆಷಿನ್’ ( ಎಂ2ಎಂ) ಸಂಪರ್ಕಗಳನ್ನು ಹೊರತುಪಡಿಸಿ, ಭಾರತದ ಮೂಲ ಮೊಬೈಲ್ ಚಂದಾದಾರರ ಸಂಖ್ಯೆ ತಿಂಗಳಿಂದ ತಿಂಗಳಿಗೆ 2.2 ಮಿಲಿಯನ್‌ (22 ಲಕ್ಷ) ಹೆಚ್ಚಳವಾಗಿ ಒಟ್ಟು 1.15 ಬಿಲಿಯನ್‌ಗೆ (115 ಕೋಟಿ) ತಲುಪಿದೆ. ಇದರಲ್ಲಿ ಜಿಯೋ ಸಿಂಹಪಾಲು ಪಡೆದಿದ್ದು, ಭರ್ಜರಿ 1.9 ಮಿಲಿಯನ್ (19 ಲಕ್ಷ) ಗ್ರಾಹಕರನ್ನು ಸೇರಿಸಿಕೊಂಡಿದ್ದರೆ, ಏರ್‌ಟೆಲ್ ಕೇವಲ 0.2 ಮಿಲಿಯನ್ (2 ಲಕ್ಷ) ಗ್ರಾಹಕರನ್ನಷ್ಟೇ ಗಳಿಸಲು ಸಾಧ್ಯವಾಯಿತು. ಅಂದರೆ, ಜಿಯೋ ಗ್ರಾಹಕರ ಸೇರ್ಪಡೆ ಏರ್‌ಟೆಲ್‌ಗಿಂತ ಸುಮಾರು ಹತ್ತು ಪಟ್ಟು ದೊಡ್ಡದಾಗಿದೆ! ಸೆಪ್ಟೆಂಬರ್ ಅಂತ್ಯಕ್ಕೆ ಜಿಯೋ ಒಟ್ಟು 511.14 ಮಿಲಿಯನ್ ಚಂದಾದಾರರೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಏರ್‌ಟೆಲ್ 494.29 ಮಿಲಿಯನ್ ಚಂದಾದಾರರೊಂದಿಗೆ ಎರಡನೇ ಸ್ಥಾನದಲ್ಲಿದೆ.

ಏರ್‌ಟೆಲ್ ಗೆ ಹಿನ್ನಡೆ:
ಏರ್‌ಟೆಲ್ ಕೇವಲ 2 ಲಕ್ಷ ಮೂಲ ಮೊಬೈಲ್ ಗ್ರಾಹಕರನ್ನು ಪಡೆದಿರುವುದು ಇತ್ತೀಚಿನ ಅವಧಿಯಲ್ಲಿ ಅದರ ಅತ್ಯಂತ ಕನಿಷ್ಠ ಸಾಧನೆಯಾಗಿದೆ. ಆಗಸ್ಟ್‌ನಲ್ಲಿ ತನ್ನ ಜನಪ್ರಿಯ ಹಾಗೂ ಕಡಿಮೆ ಬೆಲೆಯ ₹299 ಪ್ರಿಪೇಯ್ಡ್ ಪ್ಲಾನ್ ಅನ್ನು ಸ್ಥಗಿತಗೊಳಿಸಿದ್ದೇ ಈ ಹಿನ್ನಡೆಗೆ ಮುಖ್ಯ ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ನಿರ್ಧಾರದಿಂದಾಗಿ ಹಣದ ಬಗ್ಗೆ ಹೆಚ್ಚು ಯೋಚಿಸುವ ಗ್ರಾಹಕರನ್ನು ಉಳಿಸಿಕೊಳ್ಳಲು ಏರ್‌ಟೆಲ್‌ಗೆ ಸಾಧ್ಯವಾಗಲಿಲ್ಲ.

ಆಗಸ್ಟ್‌ನಲ್ಲಿ ಏರ್‌ಟೆಲ್‌ನ ಒಟ್ಟಾರೆ ವೈರ್‌ಲೆಸ್ ಗ್ರಾಹಕರ ಸೇರ್ಪಡೆ 2.69 ಮಿಲಿಯನ್ ಆಗಿದ್ದರೂ, ಮೂಲ ಮೊಬೈಲ್ ಬಳಕೆದಾರರ ಸಂಖ್ಯೆ ಮಾತ್ರ ತೀರಾ ಕಡಿಮೆಯಾಗಿದೆ. ಅಂದರೆ, ಕಂಪನಿಗೆ ಬಂದ ಹೊಸ ಚಂದಾದಾರರಲ್ಲಿ ಹೆಚ್ಚಿನವರು ನಿತ್ಯದ ಮೊಬೈಲ್ ಬಳಕೆದಾರರಿಗಿಂತ ಕಡಿಮೆ ಆದಾಯ ತಂದುಕೊಡುವ (Low-ARPU) ಎಂ2ಎಂ ಸಂಪರ್ಕ ಸೇವೆಯ ಗ್ರಾಹಕರಾಗಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ.

ಸಕ್ರಿಯ ಬಳಕೆದಾರರ ಆಟದಲ್ಲೂ ಜಿಯೋದ್ದೇ ಹವಾ!
ಖಾಲಿ ಸಿಮ್‌ಗಳಿಗಿಂತ ‘ಸಕ್ರಿಯ ಬಳಕೆದಾರರ’ ವಿಷಯಕ್ಕೆ ಬಂದರೆ ಜಿಯೋದ ಪ್ರಾಬಲ್ಯ ಇನ್ನಷ್ಟು ಸ್ಪಷ್ಟವಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಉದ್ಯಮದಾದ್ಯಂತ ಮೂಲ ವಿಸಿಆರ್ (ವಿಎಲ್‌ ಆರ್ – ಸಕ್ರಿಯ ಗ್ರಾಹಕರು) 0.6 ಮಿಲಿಯನ್ ಬೆಳೆದಿದ್ದರೆ, ಒಂದೇ ಜಿಯೋ ಸಂಸ್ಥೆ 1.3 ಮಿಲಿಯನ್ ಸಕ್ರಿಯ ಬಳಕೆದಾರರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ!

ಮತ್ತೊಂದೆಡೆ, ಇದೇ ಅವಧಿಯಲ್ಲಿ ಏರ್‌ಟೆಲ್ 0.2 ಮಿಲಿಯನ್ ಹಾಗೂ ವೊಡಾಫೋನ್ ಐಡಿಯಾ 0.3 ಮಿಲಿಯನ್ ಸಕ್ರಿಯ ಗ್ರಾಹಕರನ್ನು ಕಳೆದುಕೊಂಡಿವೆ. ಅಂದರೆ, ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಲ್ಲಿ ತನ್ನ ಸಕ್ರಿಯ ಬಳಕೆದಾರರ ಪಡೆಯನ್ನು ಹೆಚ್ಚಿಸಿಕೊಂಡ ಏಕೈಕ ‘ಕಿಂಗ್’ ಎಂದರೆ ಅದು ಜಿಯೋ ಮಾತ್ರ!

ರೇಸ್‌ನಲ್ಲಿ ಜಿಯೋವೇ ಸಾರ್ವಭೌಮ!
ಸೆಪ್ಟೆಂಬರ್ ತಿಂಗಳ ಟ್ರಾಯ್ ಅಂಕಿ-ಅಂಶಗಳು ಜಿಯೋ ತನ್ನ ಅಗ್ರಸ್ಥಾನವನ್ನು ಕೇವಲ ಕಾಯ್ದುಕೊಂಡಿಲ್ಲ, ಬದಲಿಗೆ ಮುನ್ನಡೆಯ ಅಂತರವನ್ನು ಮತ್ತಷ್ಟು ಹಿಗ್ಗಿಸಿಕೊಂಡಿದೆ ಎಂಬುದನ್ನು ಸ್ಪಷ್ಟಪಡಿಸಿವೆ. ಹೆಚ್ಚಿನ ಮೂಲ ಚಂದಾದಾರರು, ಗರಿಷ್ಠ ಸಕ್ರಿಯ ಬಳಕೆದಾರರು ಹಾಗೂ ಒಟ್ಟಾರೆ ಬೃಹತ್ ಗ್ರಾಹಕರ ಪಡೆಯೊಂದಿಗೆ ಜಿಯೋ ನಂ.1 ಪಟ್ಟದಲ್ಲಿ ಗಟ್ಟಿಯಾಗಿ ಕುಳಿತಿದೆ.

₹299 ಪ್ಲಾನ್ ಕೈಬಿಟ್ಟ ನಂತರ ಕುಸಿದಿರುವ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುವುದು ಏರ್‌ಟೆಲ್‌ಗೆ ಈಗ ದೊಡ್ಡ ಸವಾಲಾಗಿದೆ. ಆದರೆ ಜಿಯೋ ಪಾಲಿಗೆ, ಸೆಪ್ಟೆಂಬರ್‌ನಲ್ಲಿ ಇಡೀ ಟೆಲಿಕಾಂ ರಂಗ ಪಡೆದ ಪ್ರತಿ 10 ಹೊಸ ಗ್ರಾಹಕರಲ್ಲಿ 9 ಜನರನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ತಾನೇ ಭಾರತೀಯ ಮೊಬೈಲ್ ಮಾರುಕಟ್ಟೆಯ ನಿಜವಾದ ‘ರೇಸ್ ವಿನ್ನರ್’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ!

Tags: #AirtelvsJio#JioDominance#JioGrowth#mukeshambani#relianceindustrieslimited#TelecomNews#TRAIDatajio ipo listingJio Platforms IPO
Share76Tweet47
  • Trending
  • Comments
  • Latest
microsoft

60,000 ಟೆಕ್ಕಿಗಳಿಗೆ ತಾವಾಗಿಯೇ ಕೆಲಸ ಬಿಡಲು ಮೈಕ್ರೊಸಾಫ್ಟ್‌ ಆಫರ್!

October 27, 2026
Dhee masala

ಅಡುಗೆಮನೆಯಲ್ಲೇ ಹುಟ್ಟಿಕೊಂಡ ಬೆಂಗಳೂರಿನ ಹೆಮ್ಮೆಯ ಧೀ ಮಸಾಲ! Business Success

October 30, 2026
jio ipo

ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಎಂಟ್ರಿ! ಲಿಸ್ಟಿಂಗ್‌ನಲ್ಲಿ ಪ್ರತಿ ಷೇರಿಗೆ 239/- ಲಾಭ!

October 28, 2026
ನಂದಿನಿ ಹಾಲಿನ ದರ ಲೀಟರ್‌ಗೆ 8 ರೂಪಾಯಿ ಹೆಚ್ಚಳ, ನವೆಂಬರ್‌ 1ರಿಂದಲೇ ಜಾರಿ

ನಂದಿನಿ ಹಾಲಿನ ದರ ಲೀಟರ್‌ಗೆ 8 ರೂಪಾಯಿ ಹೆಚ್ಚಳ, ನವೆಂಬರ್‌ 1ರಿಂದಲೇ ಜಾರಿ

October 29, 2026
EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

0
ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ  ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

0
ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

0
ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

0
gold rate

ಅಕ್ಟೋಬರ್‌ನಲ್ಲಿ ಚಿನ್ನದ ಬೆಲೆ 7% ಕುಸಿತ, ಬೆಳ್ಳಿ 20% ಅಗ್ಗ

November 3, 2026
salary

ಸಂಬಳ ಸಾಲುತ್ತಿಲ್ಲ, ಆದಾಯದ ಮೂಲ ಹೆಚ್ಚಿಸಲು ಭಾರತೀಯರ ಪ್ರಯತ್ನ

November 2, 2026
sebi

ವಿದೇಶಿ ಹೂಡಿಕೆದಾರರಿಗೆ LTCG ತೆರಿಗೆ ರದ್ದುಗೊಳಿಸಲು ಸೆಬಿ ಸಲಹೆ

November 2, 2026
reliance

ರಿಲಯನ್ಸ್‌ನ 3 ತಿಂಗಳಿನ ಲಾಭ ದಾಖಲೆಯ ₹29,550 ಕೋಟಿಗೆ ಏರಿಕೆ !

October 31, 2026
FinCore News




Trusted Financial News & Market Insights. Empowering Smarter Investments for a Wealthier Tomorrow





Categories tes

  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Uncategorized
  • Wealth

ಅಕ್ಟೋಬರ್‌ನಲ್ಲಿ ಚಿನ್ನದ ಬೆಲೆ 7% ಕುಸಿತ, ಬೆಳ್ಳಿ 20% ಅಗ್ಗ

ಸಂಬಳ ಸಾಲುತ್ತಿಲ್ಲ, ಆದಾಯದ ಮೂಲ ಹೆಚ್ಚಿಸಲು ಭಾರತೀಯರ ಪ್ರಯತ್ನ

ವಿದೇಶಿ ಹೂಡಿಕೆದಾರರಿಗೆ LTCG ತೆರಿಗೆ ರದ್ದುಗೊಳಿಸಲು ಸೆಬಿ ಸಲಹೆ

Copyright © 2026 Fincore News. Designed by KIPL

No Result
View All Result
  • Contact Us
  • Homepages

Copyright © 2026 Finecore News. Designed by KIPL