• Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
  • Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
No Result
View All Result
FinCore News
No Result
View All Result
Home Politics & News

ಸರ್ಕಾರಿ ಬಾಂಡ್ ಯೀಲ್ಡ್ 3 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ!

fincorenews by fincorenews
October 20, 2026
in Politics & News
0
ಸರ್ಕಾರಿ ಬಾಂಡ್ ಯೀಲ್ಡ್ 3 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ!
189
SHARES
1.5k
VIEWS
Share on FacebookShare on Twitter

ತಿಂಗಳ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ಮೂಲಕ ನಿರಂತರವಾಗಿ ಈಕ್ವಿಟಿಗಳಲ್ಲಿ ಹಣ ಹೂಡಿಕೆ ಮಾಡುತ್ತಿರುವ ಹೂಡಿಕೆದಾರರಿಗೆ, ಏರುತ್ತಿರುವ ಬಾಂಡ್ ಇಳುವರಿಯು ತಮ್ಮ ಪೋರ್ಟ್‌ಫೋಲಿಯೋವನ್ನು ಮರುಪರಿಶೀಲನೆ ಮಾಡಲು  ಕಾರಣವಾಗಬಹುದು. ಇದಕ್ಕೆ ಕಾರಣವಿದೆ.

 

ಅದೇನಪ್ಪಾ ಅಂದರೆ, ಭಾರತದ  10 ವರ್ಷಗಳ ಪ್ರಮುಖ ಸರ್ಕಾರಿ ಬಾಂಡ್ ಇಳುವರಿಯು ಶೇ. 7.28 ಕ್ಕೆ ತಲುಪಿದ್ದು, ಕಳೆದ ಮೂರು ವರ್ಷಗಳಲ್ಲೇ ಅತ್ಯುನ್ನತ ಮಟ್ಟವನ್ನು ಮುಟ್ಟಿದೆ. ಈ ಮಟ್ಟದಲ್ಲಿ, ಫಿಕ್ಸೆಡ್ ಇನ್‌ಕಮ್ ವಿಭಾಗದಲ್ಲಿ ಹೊಸದಾಗಿ ಹಣ ಹೂಡಿಕೆ ಮಾಡಲು ಬಯಸುವವರಿಗೆ ಸರ್ಕಾರಿ ಸೆಕ್ಯುರಿಟಿಗಳು ಹಾಗೂ ಡೆಟ್ ಮ್ಯೂಚುವಲ್ ಫಂಡ್‌ಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತಿವೆ.

 

 

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿ ಶೇ. 5.50 ಕ್ಕೆ ಏರಿಸಿರುವ ಮತ್ತು ತನ್ನ ನೀತಿಯ ನಿಲುವನ್ನು ‘ನ್ಯೂಟ್ರಲ್’ ನಿಂದ ‘ಕ್ಯಾಲಿಬ್ರೇಟೆಡ್ ಟೈಟನಿಂಗ್’ (ಕಟ್ಟುನಿಟ್ಟಿನ ನಿಯಂತ್ರಣ) ಗೆ ಬದಲಾಯಿಸಿರುವ ಈ ಸಂದರ್ಭದಲ್ಲೇ ಈ ವಿದ್ಯಮಾನ ಸಂಭವಿಸಿದೆ. ಹಣದುಬ್ಬರ ಮತ್ತು ಆರ್ಥಿಕ ಪ್ರಗತಿಯನ್ನು ಆಧರಿಸಿ ಮುಂದೆಯೂ ದರ ಏರಿಕೆಯಾಗುವ ಸೂಚನೆಯನ್ನು ಆರ್‌ಬಿಐ ನೀಡಿದೆ.

 

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯದ ಮೇಲಿನ ಒತ್ತಡ ಹಾಗೂ ಜಾಗತಿಕ ಸಾಲದ ವೆಚ್ಚ ಹೆಚ್ಚಿರುವುದು ಅನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆರ್‌ಬಿಐ ನಿರ್ಧಾರ ಹಾಗೂ ಬಾಂಡ್ ಇಳುವರಿಯ ಈ ಏರಿಕೆಯು, ಡೆಟ್ ಹೂಡಿಕೆದಾರರ ಭವಿಷ್ಯದ ಚಿತ್ರಣವನ್ನೇ ಬದಲಾಯಿಸಿದೆ.

 

ಈಗ ಚಿಲ್ಲರೆ (ರಿಟೇಲ್) ಹೂಡಿಕೆದಾರರ ಮುಂದಿರುವ ಪ್ರಶ್ನೆ ಏನೆಂದರೆ: ತಮ್ಮ ಈಕ್ವಿಟಿ SIP ಗಳ ಒಂದು ಭಾಗವನ್ನು ಡೆಟ್ ಫಂಡ್‌ಗಳ ಕಡೆಗೆ ತಿರುಗಿಸಬೇಕೇ? ಸರ್ಕಾರಿ ಬಾಂಡ್‌ಗಳ ಮೂಲಕ ಹೆಚ್ಚಿನ ಇಳುವರಿಯನ್ನು ಲಾಕ್ ಮಾಡಿಕೊಳ್ಳಬೇಕೇ? ಅಥವಾ ತಮ್ಮ ಸದ್ಯದ ಅಸ್ತಿತ್ವದಲ್ಲಿರುವ ಹೂಡಿಕೆ ಯೋಜನೆಯನ್ನೇ ಮುಂದುವರಿಸಬೇಕೇ? ಇದರ ಉತ್ತರವು ಕೇವಲ ‘ಹೆಚ್ಚಿನ ಇಳುವರಿ ಕೊಡುವ ಆಯ್ಕೆ’ಯನ್ನು ಆರಿಸಿಕೊಳ್ಳುವಷ್ಟು ಸರಳವಾಗಿಲ್ಲ!

 

ಈಕ್ವಿಟಿ ಮತ್ತು ಡೆಟ್ — ಇವೆರಡೂ ಪೋರ್ಟ್‌ಫೋಲಿಯೋದಲ್ಲಿ ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತವೆ. ಹೆಚ್ಚಿನ ಇಳುವರಿ ಸಿಕ್ಕಿದ ತಕ್ಷಣ ಡೆಟ್ ಫಂಡ್‌ಗಳು ಸಂಪೂರ್ಣವಾಗಿ ಅಪಾಯರಹಿತವಾಗುವುದಿಲ್ಲ. ಇಳುವರಿ ಏಕೆ ಏರುತ್ತಿದೆ, ಇದು ಬಾಂಡ್ ಬೆಲೆಗಳು ಹಾಗೂ ಡೆಟ್ ಫಂಡ್‌ಗಳ NAV (Net Asset Value) ಮೇಲೆಯಷ್ಟೇ ಅಲ್ಲದೆ ತಮ್ಮ ಹಣಕಾಸಿನ ಗುರಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹೂಡಿಕೆದಾರರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಿದೆ.

 

ಭಾರತದಲ್ಲಿ ಬಾಂಡ್ ಇಳುವರಿ ಏರುತ್ತಿರುವುದೇಕೆ?

ಬಾಂಡ್ ಇಳುವರಿ (Yield) ಮತ್ತು ಬಾಂಡ್ ಬೆಲೆಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಹೂಡಿಕೆದಾರರು ಬಾಂಡ್ ಹಿಡಿದಿಡಲು ಹೆಚ್ಚಿನ ಆದಾಯವನ್ನು ನಿರೀಕ್ಷಿಸಿದಾಗ, ಅದರ ಮಾರುಕಟ್ಟೆ ಬೆಲೆ ಬೀಳುತ್ತದೆ. ತದ್ವಿರುದ್ಧವಾಗಿ, ಚಾಲ್ತಿಯಲ್ಲಿರುವ ಬಾಂಡ್‌ಗೆ ಬೇಡಿಕೆ ಹೆಚ್ಚಿದಾಗ ಬೆಲೆ ಏರಿ, ಇಳುವರಿ ಕಡಿಮೆಯಾಗುತ್ತದೆ.

 

10 ವರ್ಷಗಳ ಭಾರತೀಯ ಸರ್ಕಾರಿ ಬಾಂಡ್ ಇಳುವರಿಯ ಏರಿಕೆಯು ದೇಶೀಯ ಮತ್ತು ಜಾಗತಿಕ ಒತ್ತಡಗಳ ಸಮ್ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ. ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗುವ ಭೀತಿಯಿಂದಾಗಿ ಹಣದುಬ್ಬರದ ಆತಂಕಗಳು ಹೆಚ್ಚಾಗಿವೆ. ಭಾರತವು ತನ್ನ ತೈಲದ ಬಹುಪಾಲು ಅಗತ್ಯವನ್ನು ಆಮದು ಮಾಡಿಕೊಳ್ಳುವುದರಿಂದ, ತೈಲ ಬೆಲೆ ಏರಿಕೆಯು ದೇಶದ ಆಮದು ವೆಚ್ಚವನ್ನು ಹೆಚ್ಚಿಸಿ ರೂಪಾಯಿ ಮೇಲೆ ಒತ್ತಡ ಹೇರುತ್ತದೆ ಮತ್ತು ಹಣದುಬ್ಬರಕ್ಕೆ ದಾರಿಯಾಗುತ್ತದೆ.

 

ಇದು ಆರ್‌ಬಿಐನ ಹಣಕಾಸು ನೀತಿಗೆ ಸವಾಲೊಡ್ಡುತ್ತದೆ. ಹಣದುಬ್ಬರ ಹೀಗೆಯೇ ಮುಂದುವರಿದರೆ, ಆರ್‌ಬಿಐ ಬಡ್ಡಿದರಗಳನ್ನು ದೀರ್ಘಕಾಲದವರೆಗೆ ಹೆಚ್ಚೇ ಇಡಬೇಕಾಗುತ್ತದೆ ಅಥವಾ ಇನ್ನಷ್ಟು ಏರಿಸಬೇಕಾಗುತ್ತದೆ. ಹೀಗಾಗಿ ಭವಿಷ್ಯದ ಹಣದುಬ್ಬರ ಮತ್ತು ಬಡ್ಡಿದರದ ಅನಿಶ್ಚಿತತೆಯನ್ನು ಸರಿದೂಗಿಸಲು ಹೂಡಿಕೆದಾರರು ಸರ್ಕಾರಿ ಬಾಂಡ್‌ಗಳ ಮೇಲೆ ಹೆಚ್ಚಿನ ಇಳುವರಿಯನ್ನು ಡಿಮ್ಯಾಂಡ್ ಮಾಡುತ್ತಾರೆ.

 

ಅಲ್ಲದೆ, ಇತ್ತೀಚೆಗೆ ಆರ್‌ಬಿಐ ರೆಪೋ ದರವನ್ನು ಶೇ. 5.50 ಕ್ಕೆ ಏರಿಸಿ, ಈ ಹಣಕಾಸು ವರ್ಷದ ಹಣದುಬ್ಬರ ಅಂದಾಜನ್ನು ಶೇ. 5.2 ಕ್ಕೆ ಹೆಚ್ಚಿಸಿದೆ. ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ. 7.1 ಕ್ಕೆ ಹೆಚ್ಚಿಸಿದ್ದರೂ, ಹಣದುಬ್ಬರ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆರ್‌ಬಿಐ ಸ್ಪಷ್ಟ ಸಂದೇಶ ನೀಡಿದೆ.

 

ಇದರ ಜೊತೆಗೆ ಪೂರೈಕೆ ಮತ್ತು ಬೇಡಿಕೆಯ ಅಂಶವೂ ಇಲ್ಲಿದೆ. ಸರ್ಕಾರವು ತನ್ನ ವೆಚ್ಚಗಳಿಗಾಗಿ ಬಾಂಡ್‌ಗಳ ಮೂಲಕ ಸಾಲ ಪಡೆಯುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಸರ್ಕಾರಿ ಬಾಂಡ್‌ಗಳ ಪೂರೈಕೆ ಹೆಚ್ಚಾದಾಗ, ಬೆಲೆಗಳು ಕುಸಿದು ಇಳುವರಿ ಏರುತ್ತದೆ. ಮಾರುಕಟ್ಟೆಯಲ್ಲಿನ ಹೆಚ್ಚುವರಿ ನಗದನ್ನು ಹಿಂತೆಗೆದುಕೊಳ್ಳಲು ಆರ್‌ಬಿಐ 25,000 ಕೋಟಿ ರೂ.ಗಳ ಬಾಂಡ್ ಮಾರಾಟ ಮತ್ತು CRR ನಿರ್ವಹಣಾ ಮಿತಿಯನ್ನು ಹೆಚ್ಚಿಸುವುದಾಗಿ ಪ್ರಕಟಿಸಿದೆ. ಇದು ನಗದು ಲಭ್ಯತೆಯನ್ನು ಬಿಗಿಗೊಳಿಸಿ ಬಾಂಡ್ ಬೆಲೆಗಳ ಮೇಲೆ ಒತ್ತಡ ಹೇರಬಹುದು.

 

ಅಮೆರಿಕದ ಬಾಂಡ್ ಇಳುವರಿ ಏರಿಕೆಯ ಪ್ರಭಾವ

ಭಾರತೀಯ ಬಾಂಡ್ ಇಳುವರಿ ಏರಿಕೆಯು ಜಾಗತಿಕ ಬಾಂಡ್ ಮಾರುಕಟ್ಟೆಯ ಕುಸಿತದ ಒಂದು ಭಾಗವೂ ಹೌದು. ಅಮೆರಿಕದ 10 ವರ್ಷಗಳ ಟ್ರೆಷರಿ ಇಳುವರಿ ಶೇ. 5.23 ಕ್ಕೆ ಹಾಗೂ 30 ವರ್ಷಗಳ ಇಳುವರಿ ಶೇ. 5.61 ಕ್ಕೆ ಏರಿದ್ದು, ಕಳೆದ ಎರಡು ದಶಕಗಳಲ್ಲೇ ಗರಿಷ್ಠ ಮಟ್ಟವನ್ನು ಮುಟ್ಟಿದೆ.

 

ಅಮೆರಿಕದ ಬಾಂಡ್ ಇಳುವರಿ ಹೆಚ್ಚಾದಾಗ, ಜಾಗತಿಕ ಹೂಡಿಕೆದಾರರಿಗೆ ಡಾಲರ್ ಆಧಾರಿತ ಆಸ್ತಿಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಇದರಿಂದ ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳ ಹೊರಹೋಗಬಹುದು ಅಥವಾ ಹರಿವು ಕಡಿಮೆಯಾಗಬಹುದು. ಇದು ಭಾರತೀಯ ಬಾಂಡ್‌ಗಳ ಬೇಡಿಕೆಯನ್ನು ತಗ್ಗಿಸಿ ಇಳುವರಿ ಏರಲು ಕಾರಣವಾಗಬಹುದು.

 

ಶೇ. 7.25 ಕ್ಕಿಂತ ಹೆಚ್ಚಿನ ಇಳುವರಿ ಸರ್ಕಾರಿ ಬಾಂಡ್‌ಗಳನ್ನು ಆಕರ್ಷಕವಾಗಿಸುತ್ತದೆಯೇ?

ಹೊಸದಾಗಿ ಫಿಕ್ಸ್ಡ್ ಇನ್‌ಕಮ್ ವಿಭಾಗದಲ್ಲಿ ಹಣ ತೊಡಗಿಸುವವರಿಗೆ ಹೆಚ್ಚಿನ ಇಳುವರಿಯು ಉತ್ತಮ ಆರಂಭಿಕ ಹಂತವನ್ನು ನೀಡುತ್ತದೆ. ಸರ್ಕಾರಿ ಬಾಂಡ್‌ಗಳು (G-Secs) ಮುಕ್ತಾಯದ ಅವಧಿಯವರೆಗೆ (Maturity) ಹಿಡಿದಿಟ್ಟುಕೊಂಡರೆ ಕ್ರೆಡಿಟ್ ರಿಸ್ಕ್ (ಸಾಲ ಮರುಪಾವತಿಯಾಗದಿರುವ ಅಭದ್ರತೆ) ಇರುವುದಿಲ್ಲ.

 

ಅನಂದ್ ರಾಠಿ ಗ್ಲೋಬಲ್ ಫೈನಾನ್ಸ್‌ನ ಟ್ರೆಷರಿ ಮುಖ್ಯಸ್ಥ ಹರ್‌ಸಿಮ್ರಾನ್ ಸಾಹ್ನಿ ಅವರ ಪ್ರಕಾರ, ಶೇ. 7.25 ಕ್ಕಿಂತ ಹೆಚ್ಚಿನ ಇಳುವರಿಯು ಸರ್ಕಾರಿ ಸೆಕ್ಯುರಿಟಿಗಳು ಮತ್ತು ಡೆಟ್ ಫಂಡ್‌ಗಳ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಆದರೆ ನಿಜವಾದ ಆದಾಯವು ಹೂಡಿಕೆದಾರರ ಹೂಡಿಕೆ ಅವಧಿ, ಬಡ್ಡಿದರದ ಏರಿಳಿತ ಮತ್ತು ಆಯ್ಕೆ ಮಾಡುವ ಫಂಡ್‌ನ ಪ್ರಕಾರವನ್ನು ಅವಲಂಬಿಸಿರುತ್ತದೆ.

 

ನೇರ ಬಾಂಡ್ ಖರೀದಿಗೂ ಮತ್ತು ಡೆಟ್ ಮ್ಯೂಚುವಲ್ ಫಂಡ್‌ಗೂ ಇರುವ ವ್ಯತ್ಯಾಸ:

 

ನೇರ ಬಾಂಡ್: ಒಂದು ಬಾಂಡ್ ಅನ್ನು ನೇರವಾಗಿ ಖರೀದಿಸಿ, ಅದನ್ನು ಮುಕ್ತಾಯದ ಅವಧಿಯವರೆಗೆ (Maturity) ಇಟ್ಟುಕೊಂಡರೆ ಮಾರುಕಟ್ಟೆಯ ಮಧ್ಯಂತರ ಬೆಲೆ ಏರಿಳಿತಗಳು ನಿಮ್ಮ ಅಂತಿಮ ಆದಾಯದ ಮೇಲೆ ಪರಿಣಾಮ ಬೀರವು. ಆದರೆ ಅವಧಿಗೂ ಮುನ್ನ ಮಾರಾಟ ಮಾಡಿದರೆ ಲಾಭ ಅಥವಾ ನಷ್ಟವಾಗಬಹುದು.

 

ಡೆಟ್ ಮ್ಯೂಚುವಲ್ ಫಂಡ್: ಇದರ NAV ಯು ಮಾರುಕಟ್ಟೆಯಲ್ಲಿನ ಬಾಂಡ್ ಬೆಲೆಗಳಿಗೆ ಅನುಗುಣವಾಗಿ ಪ್ರತಿದಿನ ಬದಲಾಗುತ್ತದೆ. ಬಡ್ಡಿದರ/ಇಳುವರಿ ಏರಿದಾಗ ಡೆಟ್ ಫಂಡ್‌ನ NAV ಕುಸಿಯಬಹುದು. ಅಂದರೆ, ಸರ್ಕಾರಿ ಬಾಂಡ್‌ಗಳಲ್ಲಿ ಕ್ರೆಡಿಟ್ ರಿಸ್ಕ್ ಇಲ್ಲದಿರಬಹುದು, ಆದರೆ ಬಡ್ಡಿದರದ ಅಪಾಯದಿಂದ (Interest-rate risk) ಅವು ಸಂಪೂರ್ಣ ಮುಕ್ತವಲ್ಲ!

 

ಬಾಂಡ್‌ಸ್ಕ್ಯಾನರ್ ಸಂಸ್ಥಾಪಕ ನಿಶ್ಚಯ್ ನಾಥ್ ಅವರ ಪ್ರಕಾರ, ಆರ್‌ಬಿಐ ಅಂದಾಜಿಸಿರುವ ಶೇ. 5.2 ಹಣದುಬ್ಬರಕ್ಕೆ ಹೋಲಿಸಿದರೆ ಶೇ. 7.25 ರಷ್ಟು ಇಳುವರಿಯು ಸುಮಾರು ಶೇ. 2 ರಷ್ಟು ಹೆಚ್ಚಿನ ರಿಯಲ್ ರಿಟರ್ನ್ (ತೋರಿಕೆಯ ಲಾಭ) ನೀಡುವ ಸಾಧ್ಯತೆ ತೋರುತ್ತದೆ. ಆದರೆ ತೆರಿಗೆ ಮತ್ತು ಭವಿಷ್ಯದ ನೈಜ ಹಣದುಬ್ಬರವನ್ನು ಲೆಕ್ಕಹಾಕಿದಾಗ ಅಂತಿಮ ಕೈಸೇರುವ ಲಾಭ ಬದಲಾಗಬಹುದು.

 

SIP ಹೂಡಿಕೆದಾರರು ಈಕ್ವಿಟಿಯಿಂದ ಡೆಟ್‌ಗೆ ಬದಲಾಗಬೇಕೇ?

ಹೆಚ್ಚಿನ ಬಾಂಡ್ ಇಳುವರಿ ಸಿಗುತ್ತದೆ ಎಂದಮಾತ್ರಕ್ಕೆ ಈಕ್ವಿಟಿ SIP ಗಳನ್ನು ನಿಲ್ಲಿಸುವುದು ಅಥವಾ ದೊಡ್ಡ ಭಾಗವನ್ನು ಡೆಟ್‌ಗೆ ವರ್ಗಾಯಿಸುವುದು ಸರಿಯಾದ ಕ್ರಮವಲ್ಲ!

 

ವಿಭಿನ್ನ ಪಾತ್ರಗಳು: ಈಕ್ವಿಟಿಗಳು ದೀರ್ಘಾವಧಿಯ ಸಂಪತ್ತು ಸೃಷ್ಟಿ ಮತ್ತು ಬೆಳವಣಿಗೆಗೆ ಸಹಕಾರಿ, ಆದರೆ ಅವುಗಳಲ್ಲಿ ಅಲ್ಪಾವಧಿ ಏರಿಳಿತ ಹೆಚ್ಚಿರುತ್ತದೆ. ಡೆಟ್ ಫಂಡ್‌ಗಳು ಪೋರ್ಟ್‌ಫೋಲಿಯೋಗೆ ಸ್ಥಿರತೆ ನೀಡುತ್ತವೆ.

 

ಸರಿಯಾದ ಅಸ್ಸೆಟ್ ಅಲೋಕೇಷನ್ (ಆಸ್ತಿ ಹಂಚಿಕೆ): ಹೂಡಿಕೆದಾರರು ತಮ್ಮ ವಯಸ್ಸು, ಗುರಿ ಮತ್ತು ರಿಸ್ಕ್ ತಡೆಯುವ ಸಾಮರ್ಥ್ಯಕ್ಕೆ ತಕ್ಕಂತೆ ಈಕ್ವಿಟಿ-ಡೆಟ್ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಉದಾಹರಣೆಗೆ, ನಿಮ್ಮ ಗುರಿ 60:40 (ಈಕ್ವಿಟಿ:ಡೆಟ್) ಎಂದಿದ್ದು, ಈಕ್ವಿಟಿ ಮಾರುಕಟ್ಟೆಯ ರ್‍ಯಾಲಿಯಿಂದಾಗಿ ಅದು 70:30 ಆಗಿದ್ದರೆ, ಆಗ ಈಕ್ವಿಟಿಯ ಶೇ. 10 ರಷ್ಟನ್ನು ಡೆಟ್‌ಗೆ ಮರುಸಮತೋಲನ (Rebalance) ಮಾಡುವುದು ಸೂಕ್ತ. ಇದು ನಿಯಮಿತ ಪ್ರಕ್ರಿಯೆಯೇ ಹೊರತು ಬಡ್ಡಿದರ ಏರಿತೆಂಬ ಕಾರಣಕ್ಕಲ್ಲ.

 

SIP ಮುಂದುವರಿಸಿ: ದೀರ್ಘಾವಧಿಯ ಈಕ್ವಿಟಿ SIP ಗಳು ಮಾರುಕಟ್ಟೆಯ ಪ್ರತಿಯೊಂದು ಹಂತದಲ್ಲೂ (ಕುಸಿತದಲ್ಲೂ ಸಹ) ಹೂಡಿಕೆ ಮಾಡಲು ವಿನ್ಯಾಸಗೊಳಿಸಲ್ಪಟ್ಟಿರುತ್ತವೆ. ಡೆಟ್ ಇಳುವರಿ ಏರಿದೆ ಎಂದು SIP ನಿಲ್ಲಿಸಿದರೆ, ಕಡಿಮೆ ಬೆಲೆಯಲ್ಲಿ ಈಕ್ವಿಟಿ ಯುನಿಟ್‌ಗಳನ್ನು  ಖರೀದಿಸುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ.

 

ನಿಮ್ಮ ನಿವೃತ್ತಿ ಅಥವಾ ನಿರ್ದಿಷ್ಟ ಗುರಿ ತೀರಾ ಹತ್ತಿರದಲ್ಲಿದ್ದರೆ ಡೆಟ್ ಕಡೆಗೆ ಹೆಚ್ಚಿನ ಹಣ ನೀಡುವುದು ಸರಿ. ಆದರೆ ಸುದೀರ್ಘ ಅವಧಿಯ ಗುರಿ ಹೊಂದಿರುವವರು SIP ಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.

 

ಬಡ್ಡಿದರಗಳು/ಇಳುವರಿ ಮತ್ತಷ್ಟು ಏರಿದರೆ ಡೆಟ್ ಫಂಡ್‌ಗಳ NAV ಗೆ ಏನಾಗುತ್ತದೆ?

ಇಳುವರಿ ಮತ್ತಷ್ಟು ಏರಿದರೆ, ಹಳೆಯ (ಕಡಿಮೆ ಬಡ್ಡಿದರದ) ಬಾಂಡ್‌ಗಳ ಬೆಲೆ ಕುಸಿಯುತ್ತದೆ. ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಲೆಕ್ಕ ಹಾಕುವುದರಿಂದ ಡೆಟ್ ಫಂಡ್‌ಗಳ NAV ಕುಸಿಯುತ್ತದೆ.

 

ದೀರ್ಘಾವಧಿ ಫಂಡ್‌ಗಳು (Long-Duration & Gilt Funds): ಇವುಗಳಲ್ಲಿ ಬಡ್ಡಿದರದ ಬದಲಾವಣೆಗೆ ತಕ್ಕಂತೆ ಬೆಲೆ ಬದಲಾಗುವ ಸೂಕ್ಷ್ಮತೆ (Duration Risk) ಹೆಚ್ಚಿರುತ್ತದೆ. ಇವುಗಳ NAV ಯಲ್ಲಿ ಹೆಚ್ಚಿನ ಕುಸಿತ ಕಾಣಬಹುದು.

 

ಅಲ್ಪಾವಧಿ ಫಂಡ್‌ಗಳು (Short-Duration Funds): ಇವು ಬಡ್ಡಿದರದ ಏರಿಳಿತಗಳಿಗೆ ಕಡಿಮೆ ಸೂಕ್ಷ್ಮವಾಗಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚು ಸುರಕ್ಷಿತವಾಗಿರಬಲ್ಲವು.

 

ಇಳುವರಿಯನ್ನು ಲಾಕ್ ಮಾಡಲು ಇದು ಸರಿಯಾದ ಸಮಯವೇ?

ಶೇ. 7.25 ರ ಹಂತವು ಹೂಡಿಕೆಗೆ ಉತ್ತಮ ಆರಂಭವಾಗಿದ್ದರೂ, ಇದೇ ಗರಿಷ್ಠ ಮಟ್ಟ (Peak) ಎಂದು ಹೇಳಲು ಬರುವುದಿಲ್ಲ. ತೈಲ ಬೆಲೆ ಮತ್ತು ಜಾಗತಿಕ ಸನ್ನಿವೇಶಗಳಿಂದಾಗಿ ಇಳುವರಿ ಇನ್ನು ಕೆಲಕಾಲ ಏರಿಳಿತ ಕಾಣಬಹುದು.

 

ಹಂತ-ಹಂತದ ಹೂಡಿಕೆ (Staggered Approach): ಸಂಪೂರ್ಣ ಹಣವನ್ನು ಒಂದೇ ಬಾರಿಗೆ ತೊಡಗಿಸುವ ಬದಲು ಮುಂದಿನ ಕೆಲವು ತಿಂಗಳುಗಳಲ್ಲಿ ಕಂತುಗಳ ರೂಪದಲ್ಲಿ ಹೂಡಿಕೆ ಮಾಡುವುದು ಜಾಣತನ.

 

ಇದರಿಂದ ಮುಂದೆ ಇಳುವರಿ ಇನ್ನಷ್ಟು ಏರಿದರೆ ಅದರ ಲಾಭವನ್ನೂ ಪಡೆಯಬಹುದು, ಕಡಿಮೆ ಆದಲ್ಲಿ ಈಗಾಗಲೇ ಮಾಡಿದ ಹೂಡಿಕೆಯ ಲಾಭವೂ ಸಿಗುತ್ತದೆ.

 

ಹೂಡಿಕೆದಾರರು ಈಗ ಏನು ಮಾಡಬೇಕು?

ಉದ್ದೇಶ ಸ್ಪಷ್ಟವಾಗಿರಲಿ: ಹಣವು ಅಲ್ಪಾವಧಿಗೆ ಬೇಕಿದ್ದರೆ, ಬಂಡವಾಳದ ಸುರಕ್ಷತೆಗೆ ಆದ್ಯತೆ ನೀಡಿ ಶಾರ್ಟ್-ಡ್ಯುರೇಷನ್ ಫಂಡ್‌ಗಳನ್ನು ಆಯ್ಕೆ ಮಾಡಿ.

 

ದೀರ್ಘಾವಧಿ ಯೋಜನೆ: ದೀರ್ಘಾವಧಿಗೆ ಹೂಡಿಕೆ ಮಾಡುವವರು ಮತ್ತು ಏರಿಳಿತ ತಡೆಯಬಲ್ಲವರು ಮೀಡಿಯಂ ಅಥವಾ ಲಾಂಗ್ ಡ್ಯುರೇಷನ್ ಫಂಡ್‌ಗಳನ್ನು ಪರಿಗಣಿಸಬಹುದು, ಆದರೆ NAV ಕುಸಿತದ ಅಪಾಯ ನೆನಪಿರಲಿ.

 

SIP ಬಂದ್ ಮಾಡಬೇಡಿ: ಈಕ್ವಿಟಿ SIP ಗಳನ್ನು ಎಂದಿನಂತೆ ಮುಂದುವರಿಸಿ. ಪೋರ್ಟ್‌ಫೋಲಿಯೋದಲ್ಲಿ ಈಕ್ವಿಟಿ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಿದ್ದರೆ ಮಾತ್ರ ಮರುಸಮತೋಲನ (Rebalance) ಮಾಡಿ.

 

ಹೊಸ ಹಣದ ಬಳಕೆ: ಹೊಸದಾಗಿ ಹೂಡಿಕೆ ಮಾಡಲು ಲಭ್ಯವಿರುವ ಹೆಚ್ಚುವರಿ ಹಣವನ್ನು ಡೆಟ್ ಫಂಡ್‌ಗಳು ಅಥವಾ ಸರ್ಕಾರಿ ಬಾಂಡ್‌ಗಳತ್ತ ಹಂತ-ಹಂತವಾಗಿ ಹೂಡಿಕೆ ಮಾಡಲು ಬಳಸಬಹುದು.

 

ಅಂತಿಮವಾಗಿ ಬಾಂಡ್ ಇಳುವರಿ ಏರಿಕೆಯು ಡೆಟ್ ಹೂಡಿಕೆಗೆ ಉತ್ತಮ ಅವಕಾಶ ತಂದಿದೆಯಾದರೂ, ಅದು ಅಪಾಯರಹಿತವಲ್ಲ. 7.25% ಇಳುವರಿಯನ್ನು ನೋಡಿ ಆತುರಪಟ್ಟು ಈಕ್ವಿಟಿ SIP ನಿಲ್ಲಿಸುವ ಬದಲು, ನಿಮ್ಮ ಹಣಕಾಸಿನ ಗುರಿಗಳಿಗೆ ತಕ್ಕಂತೆ ಪೋರ್ಟ್‌ಫೋಲಿಯೋವನ್ನು ಸಮತೋಲನಗೊಳಿಸುವುದೇ ಸರಿಯಾದ ಹೂಡಿಕೆ ತಂತ್ರ!

===========

ಸರ್ಕಾರಿ ಬಾಂಡ್‌ ಗಳಲ್ಲಿ ಹೂಡಿಕೆ ಮಾಡುವುದು ಹೇಗೆ?

ಭಾರತದಲ್ಲಿ ಸರ್ಕಾರಿ ಬಾಂಡ್‌ಗಳಲ್ಲಿ (Government Securities / G-Secs) ಹೂಡಿಕೆ ಮಾಡಲು ಚಿಲ್ಲರೆ (ರಿಟೇಲ್) ಹೂಡಿಕೆದಾರರಿಗೆ ಹಲವು ಅಧಿಕೃತ ಮತ್ತು ಸುಲಭ ಮಾರ್ಗಗಳಿವೆ. ನೀವು ನೇರವಾಗಿ ಅಥವಾ ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ಮಾಡಬಹುದು.

 

ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಪ್ರಮುಖ ವಿಧಾನಗಳು ಇಲ್ಲಿವೆ:

 

  1. ಆರ್‌ಬಿಐ ರಿಟೇಲ್ ಡೈರೆಕ್ಟ್ ಪ್ಲಾಟ್‌ಫಾರ್ಮ್ (RBI Retail Direct Portal) – ಅತ್ಯುತ್ತಮ ಮಾರ್ಗ

ಭಾರತೀಯ ರಿಸರ್ವ್ ಬ್ಯಾಂಕ್ ಚಿಲ್ಲರೆ ಹೂಡಿಕೆದಾರರಿಗಾಗಿಯೇ ‘RBI Retail Direct’ (rbiretaildirect.org.in) ಎನ್ನುವ ಆನ್‌ಲೈನ್ ಪೋರ್ಟಲ್ ಅನ್ನು ಒದಗಿಸಿದೆ.

ಹೇಗೆ ಮಾಡುವುದು: ಈ ವೆಬ್‌ಸೈಟ್‌ನಲ್ಲಿ ನಿಮ್ಮ ಪ್ಯಾನ್ ಕಾರ್ಡ್ (PAN), ಆಧಾರ್ ಕಾರ್ಡ್, ಬ್ಯಾಂಕ್ ಖುತೆ ವಿವರಗಳು ಮತ್ತು ಕೆವೈಸಿ (KYC) ದಾಖಲೆಗಳನ್ನು ಬಳಸಿ ಉಚಿತವಾಗಿ ‘ರಿಟೇಲ್ ಡೈರೆಕ್ಟ್ ಗಿಲ್ಟ್ (RDG) ಅಕೌಂಟ್’ ತೆರೆಯಬಹುದು.

 

ಲಾಭ: ಇದರ ಮೂಲಕ ನೀವು ನೇರವಾಗಿ ಕೇಂದ್ರ ಸರ್ಕಾರದ ಬಾಂಡ್‌ಗಳು, ರಾಜ್ಯ ಅಭಿವೃದ್ಧಿ ಲೋನ್‌ಗಳು (SDLs) ಮತ್ತು ಟ್ರೆಷರಿ ಬಿಲ್‌ಗಳನ್ನು ಪ್ರಾಥಮಿಕ ಹರಾಜಿನಲ್ಲಿ ಅಥವಾ ಸೆಕೆಂಡರಿ ಮಾರುಕಟ್ಟೆಯಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಖರೀದಿಸಬಹುದು.

 

ಡೆಟ್ ಮ್ಯೂಚುವಲ್ ಫಂಡ್‌ಗಳು (Debt Mutual Funds) / ಗಿಲ್ಟ್ ಫಂಡ್‌ಗಳು (Gilt Funds)

ನೀವು ನೇರವಾಗಿ ಬಾಂಡ್‌ಗಳನ್ನು ಖರೀದಿಸುವ ಬದಲು ಮ್ಯೂಚುವಲ್ ಫಂಡ್‌ಗಳ ಮೂಲಕವೂ ಹೂಡಿಕೆ ಮಾಡಬಹುದು.

 

ಹೇಗೆ ಮಾಡುವುದು: ಗ್ರೋ (Groww), ಜಿರೋಧಾ ಕಾಯಿನ್ (Zerodha Coin), ಅಥವಾ ನೇರವಾಗಿ ಮ್ಯೂಚುವಲ್ ಫಂಡ್ ಕಂಪನಿಗಳ ಆ್ಯಪ್‌ಗಳ ಮೂಲಕ ‘Gilt Funds’ (ಇವು ಶೇ. 100 ರಷ್ಟು ಸರ್ಕಾರಿ ಸೆಕ್ಯುರಿಟಿಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತವೆ) ಅಥವಾ ‘Constant Maturity Gilt Funds’ ಗಳಲ್ಲಿ ಹೂಡಿಕೆ ಮಾಡಬಹುದು.

 

ಲಾಭ: ಇದರಲ್ಲಿ ಕೇವಲ ನೂರು ರೂಪಾಯಿಗಳಿಂದಲೂ SIP ಅಥವಾ ಒಟ್ಟು ಮೊತ್ತದ (Lumpsum) ಹೂಡಿಕೆಯನ್ನು ಆರಂಭಿಸಬಹುದು. ಫಂಡ್ ಮ್ಯಾನೇಜರ್‌ಗಳು ನಿಮಗಾಗಿ ಬಾಂಡ್‌ಗಳನ್ನು ನಿರ್ವಹಿಸುತ್ತಾರೆ.

 

  1. ಸ್ಟಾಕ್ ಬ್ರೋಕರ್ ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು (Stock Brokers / Bond Platforms)

ಕೆಲವು ಆನ್‌ಲೈನ್ ಬಾಂಡ್ ಪ್ಲಾಟ್‌ಫಾರ್ಮ್‌ಗಳು (ಉದಾಹರಣೆಗೆ: BondScanner, IndiaBonds ಇತ್ಯಾದಿ) ಅಥವಾ ನಿಮ್ಮ ಡಿಮ್ಯಾಟ್ (Demat) ಮತ್ತು ಟ್ರೇಡಿಂಗ್ ಅಕೌಂಟ್ ಒದಗಿಸುವ ಸ್ಟಾಕ್ ಬ್ರೋಕರ್‌ಗಳ (Zerodha, Groww, ICICI Direct ಇತ್ಯಾದಿ) ಮೂಲಕವೂ ಸೆಕೆಂಡರಿ ಮಾರುಕಟ್ಟೆಯಿಂದ ಸರ್ಕಾರಿ ಬಾಂಡ್‌ಗಳನ್ನು ಖರೀದಿಸಬಹುದು.

 

ಹೇಗೆ ಮಾಡುವುದು: ನಿಮ್ಮ ಡಿಮ್ಯಾಟ್ ಖಾತೆಯ ಮೂಲಕ ಸ್ಟಾಕ್ ಮಾರುಕಟ್ಟೆಯಲ್ಲಿ ಷೇರುಗಳನ್ನು ಖರೀದಿಸಿದಂತೆಯೇ ಎಕ್ಸ್‌ಚೇಂಜ್‌ಗಳ (NSE/BSE) ಮೂಲಕ ಬಾಂಡ್‌ಗಳನ್ನು ಖರೀದಿಸಬಹುದು.

ಗಮನಿಸಬೇಕಾದ ಪ್ರಮುಖ ಅಂಶಗಳು:

ಮುಕ್ತಾಯದವರೆಗೆ ಹಿಡಿದಿಡುವುದು (Hold to Maturity): ನೀವು ಆರ್‌ಬಿಐ ರಿಟೇಲ್ ಡೈರೆಕ್ಟ್ ಮೂಲಕ ನೇರವಾಗಿ ಸರ್ಕಾರಿ ಬಾಂಡ್ ಖರೀದಿಸಿ ಅದನ್ನು ಮುಕ್ತಾಯದವರೆಗೆ (Maturity – ಉದಾಹರಣೆಗೆ 10 ವರ್ಷ) ಇಟ್ಟುಕೊಂಡರೆ, ನಿಮಗೆ ಸರ್ಕಾರದ ವತಿಯಿಂದ ಬಡ್ಡಿ ಮತ್ತು ಅಂತಿಮ ಅಸಲು ಸಂಪೂರ್ಣವಾಗಿ ಸುರಕ್ಷಿತವಾಗಿ ಮರಳುತ್ತದೆ.

 

ಮಧ್ಯಂತರ ಮಾರಾಟ: ಮ್ಯೂಚುವಲ್ ಫಂಡ್‌ಗಳು ಅಥವಾ ಸೆಕೆಂಡರಿ ಮಾರುಕಟ್ಟೆಯಲ್ಲಿ ಖರೀದಿಸಿದ ಬಾಂಡ್‌ಗಳನ್ನು ಮೆಚ್ಯೂರಿಟಿಗಿಂತ ಮುಂಚೆಯೇ ಮಾರಾಟ ಮಾಡಲು ಹೋದರೆ, ಮಾರುಕಟ್ಟೆಯ ಬಡ್ಡಿದರದ ಏರಿಳಿತಕ್ಕೆ ತಕ್ಕಂತೆ ಲಾಭ ಅಥವಾ ನಷ್ಟವಾಗಬಹುದು.

Share76Tweet47
  • Trending
  • Comments
  • Latest
ಜಿಯೋ ಪ್ಲಾಟ್‌ಫಾರ್ಮ್ಸ್ IPO ಭರಾಟೆ! ಆಂಕರ್ ಬುಕ್‌ನಲ್ಲಿ ದಾಖಲೆಯ ₹2.5 ಲಕ್ಷ ಕೋಟಿ ಬಿಡ್ ಸಲ್ಲಿಕೆ

ಜಿಯೋ ಪ್ಲಾಟ್‌ಫಾರ್ಮ್ಸ್ IPO ಭರಾಟೆ! ಆಂಕರ್ ಬುಕ್‌ನಲ್ಲಿ ದಾಖಲೆಯ ₹2.5 ಲಕ್ಷ ಕೋಟಿ ಬಿಡ್ ಸಲ್ಲಿಕೆ

October 20, 2026
ಸರ್ಕಾರಿ ಬಾಂಡ್ ಯೀಲ್ಡ್ 3 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ!

ಸರ್ಕಾರಿ ಬಾಂಡ್ ಯೀಲ್ಡ್ 3 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ!

October 20, 2026
Bengaluru-Mumbai Vande Bharat Sleeper Train

ಬೆಂಗಳೂರು-ಮುಂಬಯಿ ವಂದೇ ಭಾರತ್ ಸ್ಲೀಪರ್ ರೈಲು: ನವೆಂಬರ್ 1ರಿಂದ ಆರಂಭ ಸಾಧ್ಯತೆ

October 20, 2026
ಮಿಡ್‌ ಮತ್ತು ಸ್ಮಾಲ್‌-ಕ್ಯಾಪ್‌ಗಳಲ್ಲಿ 1 ಲಕ್ಷ ಕೋಟಿ ಭಾರಿ ಹೂಡಿಕೆ!

ಮಿಡ್‌ ಮತ್ತು ಸ್ಮಾಲ್‌-ಕ್ಯಾಪ್‌ಗಳಲ್ಲಿ 1 ಲಕ್ಷ ಕೋಟಿ ಭಾರಿ ಹೂಡಿಕೆ!

October 20, 2026
EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

0
ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ  ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

0
ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

0
ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

0
Bengaluru-Mumbai Vande Bharat Sleeper Train

ಬೆಂಗಳೂರು-ಮುಂಬಯಿ ವಂದೇ ಭಾರತ್ ಸ್ಲೀಪರ್ ರೈಲು: ನವೆಂಬರ್ 1ರಿಂದ ಆರಂಭ ಸಾಧ್ಯತೆ

October 20, 2026
ಜಿಯೋ ಪ್ಲಾಟ್‌ಫಾರ್ಮ್ಸ್ IPO ಭರಾಟೆ! ಆಂಕರ್ ಬುಕ್‌ನಲ್ಲಿ ದಾಖಲೆಯ ₹2.5 ಲಕ್ಷ ಕೋಟಿ ಬಿಡ್ ಸಲ್ಲಿಕೆ

ಜಿಯೋ ಪ್ಲಾಟ್‌ಫಾರ್ಮ್ಸ್ IPO ಭರಾಟೆ! ಆಂಕರ್ ಬುಕ್‌ನಲ್ಲಿ ದಾಖಲೆಯ ₹2.5 ಲಕ್ಷ ಕೋಟಿ ಬಿಡ್ ಸಲ್ಲಿಕೆ

October 20, 2026
ಸರ್ಕಾರಿ ಬಾಂಡ್ ಯೀಲ್ಡ್ 3 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ!

ಸರ್ಕಾರಿ ಬಾಂಡ್ ಯೀಲ್ಡ್ 3 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ!

October 20, 2026
ಮಿಡ್‌ ಮತ್ತು ಸ್ಮಾಲ್‌-ಕ್ಯಾಪ್‌ಗಳಲ್ಲಿ 1 ಲಕ್ಷ ಕೋಟಿ ಭಾರಿ ಹೂಡಿಕೆ!

ಮಿಡ್‌ ಮತ್ತು ಸ್ಮಾಲ್‌-ಕ್ಯಾಪ್‌ಗಳಲ್ಲಿ 1 ಲಕ್ಷ ಕೋಟಿ ಭಾರಿ ಹೂಡಿಕೆ!

October 20, 2026
FinCore News




Trusted Financial News & Market Insights. Empowering Smarter Investments for a Wealthier Tomorrow





Categories tes

  • Business
  • Companies
  • Gold/Silver
  • IPO/FPO
  • Market
  • Mutual Fund
  • Politics & News
  • Wealth

ಬೆಂಗಳೂರು-ಮುಂಬಯಿ ವಂದೇ ಭಾರತ್ ಸ್ಲೀಪರ್ ರೈಲು: ನವೆಂಬರ್ 1ರಿಂದ ಆರಂಭ ಸಾಧ್ಯತೆ

ಜಿಯೋ ಪ್ಲಾಟ್‌ಫಾರ್ಮ್ಸ್ IPO ಭರಾಟೆ! ಆಂಕರ್ ಬುಕ್‌ನಲ್ಲಿ ದಾಖಲೆಯ ₹2.5 ಲಕ್ಷ ಕೋಟಿ ಬಿಡ್ ಸಲ್ಲಿಕೆ

ಸರ್ಕಾರಿ ಬಾಂಡ್ ಯೀಲ್ಡ್ 3 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ!

Copyright © 2026 Fincore News. Designed by KIPL

No Result
View All Result
  • Contact Us
  • Homepages

Copyright © 2026 Finecore News. Designed by KIPL