• Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
  • Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
No Result
View All Result
FinCore News
No Result
View All Result
Home IPO/FPO

ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಇತಿಹಾಸ ಸೃಷ್ಟಿ: ವಿಶ್ವದಲ್ಲೇ 1 ಕೋಟಿಗೂ ಅಧಿಕ ಅರ್ಜಿಗಳನ್ನು ಪಡೆದ ಮೊದಲ ಐಪಿಒ!

fincorenews by fincorenews
October 23, 2026
in IPO/FPO
0
Jio IPO

JIO IPO RECORD

189
SHARES
1.5k
VIEWS
Share on FacebookShare on Twitter

ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಮುಕ್ತಾಯದ ದಿನದಂದು ಅಂದರೆ ಅಕ್ಟೋಬರ್ 23ರೊಳಗೆ ಬರೋಬ್ಬರಿ 1 ಕೋಟಿಗೂ ಅಧಿಕ ಅರ್ಜಿಗಳನ್ನು ಪಡೆದುಕೊಳ್ಳುವ ಮೂಲಕ ಹೂಡಿಕೆದಾರರ ಭಾಗವಹಿಸುವಿಕೆಯಲ್ಲಿ ಜಾಗತಿಕ ದಾಖಲೆ ಬರೆದಿದೆ. ಶುಕ್ರವಾರ ಮಧ್ಯಾಹ್ನ 12:36ರ ಸುಮಾರಿಗೆ ₹30,213 ಕೋಟಿ ಮೊತ್ತದ ಈ ಐಪಿಒ 7.49 ಪಟ್ಟು ಸಬ್ಸ್ಕ್ರೈಬ್ ಆಗಿದ್ದು, ಅರ್ಹ ಸಾಸ್ಥಿಕ ಖರೀದಿದಾರರು (QIBs) ಹಾಗೂ ಸಾಂಸ್ಥಿಕೇತರ ಹೂಡಿಕೆದಾರರಿಂದ (NIIs) ಭರ್ಜರಿ ಬೇಡಿಕೆ ವ್ಯಕ್ತವಾಗಿದೆ.

ಅಕ್ಟೋಬರ್ 23ರಂದು ಮಧ್ಯಾಹ್ನ 12:40ರ ವೇಳೆಗೆ, ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಮಾರಾಟಕ್ಕಿದ್ದ 19.75 ಕೋಟಿ ಷೇರುಗಳಿಗೆ 7.5 ಪಟ್ಟು ಬಿಡ್‌ಗಳನ್ನು ಪಡೆದುಕೊಂಡಿದೆ.

ವಿವಿಧ ವಿಭಾಗಗಳಲ್ಲಿ ಬೇಡಿಕೆ ಹೇಗಿದೆ?
ಅರ್ಹ ಸಾಸ್ಥಿಕ ಖರೀದಿದಾರರು (QIBs): ಈ ವಿಭಾಗದಲ್ಲಿ ಬೇಡಿಕೆ ಮುಂಚೂಣಿಯಲ್ಲಿದ್ದು, ಮೀಸಲಿಟ್ಟ 4.9 ಕೋಟಿ ಷೇರುಗಳಿಗೆ ಪ್ರತಿಯಾಗಿ 79.75 ಕೋಟಿ ಷೇರುಗಳಿಗೆ ಬಿಡ್ ಮಾಡಲಾಗಿದೆ. ಇದರೊಂದಿಗೆ ಈ ವಿಭಾಗವು ಬರೋಬ್ಬರಿ 16.27 ಪಟ್ಟು ಸಬ್ಸ್ಕ್ರೈಬ್ ಆಗಿದೆ.

ಸಾಂಸ್ಥಿಕೇತರ ಹೂಡಿಕೆದಾರರು (NIIs): ಈ ವಿಭಾಗದಲ್ಲಿ 3.64 ಕೋಟಿ ಷೇರುಗಳಿಗೆ 38.04 ಕೋಟಿ ಷೇರುಗಳಿಗಾಗಿ ಬಿಡ್ ಸಲ್ಲಿಕೆಯಾಗಿದ್ದು, ಇದು 10.44 ಪಟ್ಟು ಚಂದಾದಾರಿಕೆ ಪಡೆದಿದೆ.

ಚಿಲ್ಲರೆ ಹೂಡಿಕೆದಾರರು (Retail Investors): ಚಿಲ್ಲರೆ ಹೂಡಿಕೆದಾರರಿಗಾಗಿ ಮೀಸಲಿಟ್ಟ 8.5 ಕೋಟಿ ಷೇರುಗಳಿಗೆ 18.18 ಕೋಟಿ ಷೇರುಗಳಿಗೆ ಬಿಡ್ ಬಿದ್ದಿದ್ದು, ಇದು 2.14 ಪಟ್ಟು ಸಬ್ಸ್ಕ್ರೈಬ್ ಆಗಿದೆ.

ಮೈಲಿಗಲ್ಲುಗಳು ಮತ್ತು ಪ್ರಮುಖ ಮುಖ್ಯಾಂಶಗಳು:
ಈ ಹಿಂದೆ ವಾರಿ ಎನರ್ಜಿಸ್ (Waaree Energies) ಸುಮಾರು 97 ಲಕ್ಷ ಅರ್ಜಿಗಳನ್ನು ಪಡೆದುಕೊಂಡಿದ್ದೇ ದಾಖಲೆಯಾಗಿತ್ತು. ಈಗ ಜಿಯೋ ಪ್ಲಾಟ್‌ಫಾರ್ಮ್ಸ್ ಆ ದಾಖಲೆಯನ್ನು ಮುರಿದು ಮುನ್ನಡೆದಿದೆ. ಬಜಾಜ್ ಹೌಸಿಂಗ್ ಫೈನಾನ್ಸ್ ಮತ್ತು ಭಾರತ Coking Coal Ltd ತಲಾ ಸುಮಾರು 90 ಲಕ್ಷ ಅರ್ಜಿಗಳನ್ನು ಪಡೆದು ಈ ಪಟ್ಟಿಯಲ್ಲಿ ಮುಂದಿದ್ದವು. ಐಪಿಒ ಮುಕ್ತಾಯಗೊಳ್ಳುವಷ್ಟರಲ್ಲಿ ಅಂತಿಮ ಅರ್ಜಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಬುಧವಾರ ಐಪಿಒ ಆರಂಭವಾದ ಕೇವಲ 100 ನಿಮಿಷಗಳಲ್ಲಿ ಸಂಪೂರ್ಣ ಸಬ್ಸ್ಕ್ರೈಬ್ ಆಗುವ ಮೂಲಕ, ಇದು ಭಾರತದಲ್ಲಿ ಅತಿವೇಗವಾಗಿ ಪೂರ್ಣ ಪ್ರಮಾಣದ ಚಂದಾದಾರಿಕೆ ಪಡೆದ ಮೆಗಾ ಪಬ್ಲಿಕ್ ಇಶ್ಯೂ ಎಂಬ ಖ್ಯಾತಿಗೂ ಪಾತ್ರವಾಯಿತು.

ಜಿಯೋ ಪ್ಲಾಟ್‌ಫಾರ್ಮ್ಸ್, ಗರಿಷ್ಠ ಬೆಲೆ ಶ್ರೇಣಿಯಲ್ಲಿ (₹1,065 – ₹1,119) 212 ಆಂಕರ್ ಹೂಡಿಕೆದಾರರಿಗೆ ₹8,109.85 ಕೋಟಿ ಮೌಲ್ಯದ ಷೇರುಗಳನ್ನು ಹಂಚಿಕೆ ಮಾಡಿದೆ. ಆಂಕರ್ ಬುಕ್‌ನಲ್ಲಿ ಬೇಡಿಕೆ ₹2.5 ಲಕ್ಷ ಕೋಟಿ ತಲುಪಿತ್ತು (ಲಭ್ಯವಿರುವ ಪ್ರಮಾಣಕ್ಕಿಂತ 30 ಪಟ್ಟು ಹೆಚ್ಚು).

ಒಟ್ಟಾರೆ ಈ ಐಪಿಒಗೆ ಸಂಬಂಧಿಸಿದಂತೆ ಆಂಕರ್ ಬುಕ್‌ನಿಂದ ₹2.5 ಲಕ್ಷ ಕೋಟಿ ಹಾಗೂ ಸಾರ್ವಜನಿಕ ಬಿಡ್‌ಗಳಿಂದ ₹1..7 ಲಕ್ಷ ಕೋಟಿ ಸೇರಿದಂತೆ ಒಟ್ಟು ಬೇಡಿಕೆ ಬರೋಬ್ಬರಿ ₹4.2 ಲಕ್ಷ ಕೋಟಿಗಳನ್ನು ಮುಟ್ಟಿದೆ.

ಜಿಯೋ ಐಪಿಒ ಚಂದಾದಾರಿಕೆ ಅಕ್ಟೋಬರ್ 23ರಂದು ಮುಕ್ತಾಯಗೊಂಡಿದ್ದು, ಅಕ್ಟೋಬರ್ 28ರಂದು ಷೇರುಗಳು ಮಾರುಕಟ್ಟೆಯಲ್ಲಿ ಲಿಸ್ಟ್ (Listing) ಆಗುವ ನಿರೀಕ್ಷೆಯಿದೆ.

Tags: BusinessNewsIPO2026JioIPOJioPlatformniftysensexstock market news
Share76Tweet47
  • Trending
  • Comments
  • Latest
microsoft

60,000 ಟೆಕ್ಕಿಗಳಿಗೆ ತಾವಾಗಿಯೇ ಕೆಲಸ ಬಿಡಲು ಮೈಕ್ರೊಸಾಫ್ಟ್‌ ಆಫರ್!

October 27, 2026
Dhee masala

ಅಡುಗೆಮನೆಯಲ್ಲೇ ಹುಟ್ಟಿಕೊಂಡ ಬೆಂಗಳೂರಿನ ಹೆಮ್ಮೆಯ ಧೀ ಮಸಾಲ! Business Success

October 30, 2026
mutualfund

Mutual fund investment: ಮಾರುಕಟ್ಟೆ ಕುಸಿತದ ನಡುವೆಯೂ ಲಾಭ ನೀಡಿದ ಮ್ಯೂಚುವಲ್‌ ಫಂಡ್ಸ್

November 4, 2026
jio ipo

ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಎಂಟ್ರಿ! ಲಿಸ್ಟಿಂಗ್‌ನಲ್ಲಿ ಪ್ರತಿ ಷೇರಿಗೆ 239/- ಲಾಭ!

October 28, 2026
EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

0
ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ  ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

0
ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

0
ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

0
open ai

OpenAI IPO : ಓಪನ್‌ ಎಐ, ಕೋಲ್‌ ಐಪಿಒಗೆ ಸಿದ್ಧತೆ

November 5, 2026
sensex

ಸೆನ್ಸೆಕ್ಸ್ 2,000 ಅಂಕ ಜಿಗಿತ, 24,500 ಸಮೀಪಿಸಿದ ನಿಫ್ಟಿ, ತೈಲ ದರ ಇಳಿಮುಖ

November 5, 2026
bank fd

ಬ್ಯಾಂಕ್‌ FD ಹೂಡಿಕೆ ಕಣ್ಮರೆಯಾಗುತ್ತಿದೆಯೇ? ವಾಸ್ತವ ಏನು?

November 5, 2026
mutualfund

Mutual fund investment: ಮಾರುಕಟ್ಟೆ ಕುಸಿತದ ನಡುವೆಯೂ ಲಾಭ ನೀಡಿದ ಮ್ಯೂಚುವಲ್‌ ಫಂಡ್ಸ್

November 4, 2026
FinCore News




Trusted Financial News & Market Insights. Empowering Smarter Investments for a Wealthier Tomorrow





Categories tes

  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Uncategorized
  • Wealth

OpenAI IPO : ಓಪನ್‌ ಎಐ, ಕೋಲ್‌ ಐಪಿಒಗೆ ಸಿದ್ಧತೆ

ಸೆನ್ಸೆಕ್ಸ್ 2,000 ಅಂಕ ಜಿಗಿತ, 24,500 ಸಮೀಪಿಸಿದ ನಿಫ್ಟಿ, ತೈಲ ದರ ಇಳಿಮುಖ

ಬ್ಯಾಂಕ್‌ FD ಹೂಡಿಕೆ ಕಣ್ಮರೆಯಾಗುತ್ತಿದೆಯೇ? ವಾಸ್ತವ ಏನು?

Copyright © 2026 Fincore News. Designed by KIPL

No Result
View All Result
  • Contact Us
  • Homepages

Copyright © 2026 Finecore News. Designed by KIPL