• Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
  • Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
No Result
View All Result
FinCore News
No Result
View All Result
Home IPO/FPO

ಜಿಯೋ ಮಹಾಸುನಾಮಿ ಐಪಿಒ: 2 ದಿನದ ಅಂತ್ಯಕ್ಕೆ 3.73 ಲಕ್ಷ ಕೋಟಿ ರೂ.ಗಳ ದಾಖಲೆಯ ಬೇಡಿಕೆ!

fincorenews by fincorenews
October 22, 2026
in IPO/FPO
0
JIO IPO

JIO IPO

189
SHARES
1.5k
VIEWS
Share on FacebookShare on Twitter

ಮುಂಬಯಿ: ಭಾರತೀಯ ಷೇರುಮಾರುಕಟ್ಟೆಯ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ಖ್ಯಾತಿಯ ರಿಲಯನ್ಸ್ ಗ್ರೂಪ್‌ನ ‘ಜಿಯೋ ಪ್ಲಾಟ್‌ಫಾರ್ಮ್ಸ್’ ಐಪಿಒ, ಮಾರುಕಟ್ಟೆಯಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ! ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಈ ಐಪಿಒ ಒಟ್ಟು 5.6 ಪಟ್ಟು ಅಧಿಕ ಚಂದಾದಾರಿಕೆಯನ್ನು ಗಳಿಸುವ ಮೂಲಕ ಹೊಸ ದಾಖಲೆಗೆ ಪಾತ್ರವಾಗಿದೆ.

ಹೂಡಿಕೆದಾರರಿಂದ ಹರಿದುಬರುತ್ತಿರುವ ಬೇಡಿಕೆಯನ್ನು ನೋಡಿದರೆ, ಇದು ಕೇವಲ ಒಂದು ಐಪಿಒ ಅಲ್ಲ, ಬದಲಿಗೆ ಭಾರತೀಯ ಮಾರುಕಟ್ಟೆಯ ಶಕ್ತಿ ಏನೆಂಬುದನ್ನು ಜಗತ್ತಿಗೆ ತೋರಿಸುವ ಮತ್ತೊಂದು ಹಬ್ಬದಂತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಎರಡೇ ದಿನಗಳಲ್ಲಿ ಆಂಕರ್ ಬುಕ್ ಬಿಡ್‌ಗಳನ್ನೂ ಸೇರಿಸಿ ಒಟ್ಟು ಐಪಿಒ ಬೇಡಿಕೆ ಬರೋಬ್ಬರಿ 3.73 ಲಕ್ಷ ಕೋಟಿ ರೂ. ಗಡಿ ದಾಟಿರುವುದು ವಿಶೇಷ.
ಲಭ್ಯವಿರುವ ಷೇರುಗಳಿಗೆ ಪ್ರತಿಯಾಗಿ, ಆಂಕರ್‌ ಹೂಡಿಕೆದಾರರಿಂದ ಬರೋಬ್ಬರಿ 110 ಕೋಟಿಗೂ ಅಧಿಕ ಷೇರುಗಳಿಗೆ ಬೇಡಿಕೆ ಬಂದಿದ್ದು, ಇದರ ಮೌಲ್ಯ 1.23 ಲಕ್ಷ ಕೋಟಿ ರೂ.ಗಳಷ್ಟಿದೆ.
ಈ ಐಪಿಒದ ಮತ್ತೊಂದು ವಿಶೇಷವೇನೆಂದರೆ, ದೊಡ್ಡ ಹೂಡಿಕೆದಾರರಿಂದ ಹಿಡಿದು ಸಾಮಾನ್ಯ ಉದ್ಯೋಗಿಗಳವರೆಗೆ ಪ್ರತಿಯೊಂದು ವಿಭಾಗದಲ್ಲೂ ಮುಗಿಬಿದ್ದು ಹೂಡಿಕೆ ಮಾಡಲಾಗಿದೆ. ಮಾರುಕಟ್ಟೆಯ ದೈತ್ಯರೆಂದೇ ಕರೆಯಲ್ಪಡುವ ಕ್ಯೂಐಬಿಗಳು ಮುಗಿಬಿದ್ದು ಬಂಡವಾಳ ಹೂಡಿದ್ದು, ಇವರ ವಿಭಾಗವು ಬರೋಬ್ಬರಿ 13.3 ಪಟ್ಟು ಹೆಚ್ಚಳವಾಗಿದ್ದು, 72,898 ಕೋಟಿ ರೂ.ಗಳ ಬಿಡ್‌ಗಳನ್ನು ಪಡೆದುಕೊಂಡಿದೆ.
ಅಸ್ತಿತ್ವದಲ್ಲಿರುವ ರಿಲಯನ್ಸ್ (ಆರ್‌ ಐಎಲ್) ಷೇರುದಾರರು ತಮ್ಮ ಜಿಯೋ ಮೇಲಿನ ವಿಶ್ವಾಸವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಈ ಕೋಟಾ 4 ಪಟ್ಟು ಭರ್ತಿಯಾಗಿ ಒಟ್ಟು 10,107 ಕೋಟಿ ರೂ.ಗಳಿಗೂ ಅಧಿಕ ಬೇಡಿಕೆ ಸೃಷ್ಟಿಸಿದೆ.

ಸಣ್ಣ ಮತ್ತು ಸಾಂಸ್ಥಿಕೇತರ ಹೂಡಿಕೆದಾರರ (ಎನ್‌ ಐ ಐ) ಈ ವಿಭಾಗದಲ್ಲಿ ಸುಮಾರು 6 ಪಟ್ಟು ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ಒಟ್ಟು 24,330 ಕೋಟಿ ರೂ.ಗಳ ಬಿಡ್ ಸಲ್ಲಿಕೆಯಾಗಿದೆ. ಚಿಲ್ಲರೆ ಹೂಡಿಕೆದಾರರ ವಿಭಾಗದಲ್ಲಿ ಸಾಮಾನ್ಯ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ರಿಟೇಲ್ ಕೋಟಾ 1.54 ಪಟ್ಟು ಅಧಿಕಗೊಂಡು 14,652 ಕೋಟಿ ರೂ.ಗಳ ಮೊತ್ತ ತಲುಪಿದೆ. ರಿಲಯನ್ಸ್‌ ಇಂಡಸ್ಟ್ರೀಸ್ ಕಂಪನಿಯ ಉದ್ಯೋಗಿಗಳೂ ಹಿಂದೆ ಬಿದ್ದಿಲ್ಲ; ಲಭ್ಯವಿರುವ ಷೇರುಗಳಿಗಿಂತ ಎರಡು ಪಟ್ಟು ಹೆಚ್ಚು ಅಂದರೆ 1,103 ಕೋಟಿ ರೂ.ಗಳ ಅರ್ಜಿಗಳನ್ನು ಸಲ್ಲಿಸುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಮುಂಬರುವ ಪ್ರಮುಖ ದಿನಾಂಕಗಳು ಹೀಗಿವೆ. ಐಪಿಒ ಮುಕ್ತಾಯ ದಿನ: ಶುಕ್ರವಾರ, ಅಕ್ಟೋಬರ್ 23, 2026 ಆಗಿದೆ. ಷೇರು ಹಂಚಿಕೆ ಅಂತಿಮಗೊಳಿಸುವಿಕೆ, ಸೋಮವಾರ, ಅಕ್ಟೋಬರ್ 26, 2026 ಆಗಿದೆ. ಡಿಮ್ಯಾಟ್ ಖಾತೆಗೆ ಷೇರುಗಳ ಜಮೆ ಆಗುವ ದಿನ ಮಂಗಳವಾರ, ಅಕ್ಟೋಬರ್ 27, 2026 ಆಗಿದೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಅಥವಾ ನೋಂದಣಿಯಾಗುವ ದಿನವು ಬುಧವಾರ, ಅಕ್ಟೋಬರ್ 28, 2026 (ಬಿಎಸ್‌ ಇ ಮತ್ತು ಎನ್‌ ಎಸ್‌ ಇ) ಆಗಿದೆ.

ಮಾರುಕಟ್ಟೆಯಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಜಿಯೋ ಐಪಿಒ ಮಾರುಕಟ್ಟೆಗೆ ಕಾಲಿಡುವ ದಿನ ದಾಖಲೆಗಳನ್ನು ಮುರಿಯುತ್ತಾ ಅಥವಾ ಹೊಸ ಇತಿಹಾಸ ಸೃಷ್ಟಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ!

Tags: Akash AmbaniJIO IPO subscribeJio Platforms IPOJio Platforms IPO GMP todaymukesh ambani
Share76Tweet47
  • Trending
  • Comments
  • Latest
microsoft

60,000 ಟೆಕ್ಕಿಗಳಿಗೆ ತಾವಾಗಿಯೇ ಕೆಲಸ ಬಿಡಲು ಮೈಕ್ರೊಸಾಫ್ಟ್‌ ಆಫರ್!

October 27, 2026
Dhee masala

ಅಡುಗೆಮನೆಯಲ್ಲೇ ಹುಟ್ಟಿಕೊಂಡ ಬೆಂಗಳೂರಿನ ಹೆಮ್ಮೆಯ ಧೀ ಮಸಾಲ! Business Success

October 30, 2026
jio ipo

ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಎಂಟ್ರಿ! ಲಿಸ್ಟಿಂಗ್‌ನಲ್ಲಿ ಪ್ರತಿ ಷೇರಿಗೆ 239/- ಲಾಭ!

October 28, 2026
namma metro

ನಮ್ಮ ಮೆಟ್ರೊ ಪಿಂಕ್‌ ಲೈನ್‌ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ ಸಾಧ್ಯತೆ

October 29, 2026
EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

0
ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ  ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

0
ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

0
ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

0
mutualfund

Mutual fund investment: ಮಾರುಕಟ್ಟೆ ಕುಸಿತದ ನಡುವೆಯೂ ಲಾಭ ನೀಡಿದ ಮ್ಯೂಚುವಲ್‌ ಫಂಡ್ಸ್

November 4, 2026
Trump defeated in midterms, Democrats win—will this put a brake on a war with Iran?!

US midterm election results 2026: ಟ್ರಂಪ್‌ಗೆ ಸೋಲು, ಡೆಮಾಕ್ರಾಟ್ಸ್‌ಗೆ ಗೆಲುವು , ಇರಾನ್‌ ಯುದ್ಧಕ್ಕೆ ಬ್ರೇಕ್‌ ಸಿಗುತ್ತಾ?!

November 4, 2026
retail business

ಆನ್‌ಲೈನ್ ಉದ್ಯಮ ಅಭಿವೃದ್ಧಿಗೆ ರಿಲಯನ್ಸ್ ರಿಟೇಲ್ ಭಾರಿ ಹೂಡಿಕೆ

November 4, 2026
TATA GROUP

Tata row : ಸೌಹಾರ್ದವಾಗಿ ವಿವಾದ ಬಗೆಹರಿಸಲು ಟಾಟಾಗೆ ವಿತ್ತಸಚಿವರ ಸಲಹೆ, ಆಗಿದ್ದೇನು?

November 3, 2026
FinCore News




Trusted Financial News & Market Insights. Empowering Smarter Investments for a Wealthier Tomorrow





Categories tes

  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Uncategorized
  • Wealth

Mutual fund investment: ಮಾರುಕಟ್ಟೆ ಕುಸಿತದ ನಡುವೆಯೂ ಲಾಭ ನೀಡಿದ ಮ್ಯೂಚುವಲ್‌ ಫಂಡ್ಸ್

US midterm election results 2026: ಟ್ರಂಪ್‌ಗೆ ಸೋಲು, ಡೆಮಾಕ್ರಾಟ್ಸ್‌ಗೆ ಗೆಲುವು , ಇರಾನ್‌ ಯುದ್ಧಕ್ಕೆ ಬ್ರೇಕ್‌ ಸಿಗುತ್ತಾ?!

ಆನ್‌ಲೈನ್ ಉದ್ಯಮ ಅಭಿವೃದ್ಧಿಗೆ ರಿಲಯನ್ಸ್ ರಿಟೇಲ್ ಭಾರಿ ಹೂಡಿಕೆ

Copyright © 2026 Fincore News. Designed by KIPL

No Result
View All Result
  • Contact Us
  • Homepages

Copyright © 2026 Finecore News. Designed by KIPL