ಎಲ್ಲರ ಮನೆಯಲ್ಲೂ ಅಡುಗೆ ಮನೆ ಇದ್ದೇ ಇರುತ್ತದೆ. ತಾಯಿ, ಪತ್ನಿ, ಸೋದರಿಯರು ಅಚ್ಚುಕಟ್ಟಾಗಿ ರುಚಿಕರವಾದ ಸಾಂಬಾರ್ ಪುಡಿ, ಚಟ್ನಿ ಪುಡಿ, ಸಿಹಿ ತಿಂಡಿ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಇತ್ಯಾದಿಗಳನ್ನು ತಯಾರಿಸುತ್ತಾರೆ. ಮನಸ್ಸು ಮಾಡಿದರೆ ಅದನ್ನೇ ಜನಪ್ರಿಯ ಫುಡ್ ಬ್ರಾಂಡ್ ಆಗಿ ಬೆಳೆಸಬಹುದು. ಆದಾಯ, ಲಾಭ ಗಳಿಸಬಹುದು. ಆಹಾರೋದ್ಯಮಿಯಾಗಿ ಸಮಾಜದಲ್ಲಿ ಹೆಸರು ಗಳಿಸಬಹುದು! ಅರೆ, ಇದೆಲ್ಲ ಹೇಗೆ ಸಾಧ್ಯ ಎನ್ನುತ್ತೀರಾ? ಹಾಗಾದರೆ ತಪ್ಪದೆ ಕೊನೆಯ ತನಕ ಧೀ ಮಸಾಲದ ಯಶೋಗಾಥೆಯನ್ನು ಓದಲೇಬೇಕು. ಇದು ಬೆಂಗಳೂರಿನಲ್ಲಿ ಮನೆಮಾತಾಗಿರುವ ಹೋಮ್ ಮೇಡ್ ಪ್ರಾಡಕ್ಟ್ ಬ್ರ್ಯಾಂಡ್. ಧೀ ಅಂದ್ರೆ ಶಕ್ತಿ. ಈ ಧೀ ಮಸಾಲದ ಹಿಂದಿರುವ ಶಕ್ತಿ ಯಾರು ಎಂದರೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಯುವ ಆಹಾರೋದ್ಯಮಿ ರಂಜಿತ್. ಕೇವಲ ಎರಡೂವರೆ ವರ್ಷದಲ್ಲಿ ಧೀ ಮಸಾಲ ಗಳಿಸಿರುವ ಯಶಸ್ಸು ಅತ್ಯಂತ ಸ್ಪೂರ್ತಿದಾಯಕವಾಗಿದೆ. 2020 ರ ನವೆಂಬರ್ನಲ್ಲಿ ರಂಜಿತ್ ಅವರು ಹೋಮ್ ಮೇಡ್ ಮಸಾಲಾ ಉತ್ಪನ್ನಗಳನ್ನು ತಯಾರಿಸುವ ಉದ್ದೇಶದಿಂದ ಧೀ ಮಸಾಲವನ್ನು ಸ್ಥಾಪಿಸಿದರು. ಮನೆಯಲ್ಲೇ ತಯಾರಿಸುವ ಮಸಾಲ ಪುಡಿಗಳನ್ನು ಜಾಗತಿಕ ಮಟ್ಟದ ಆಹಾರ ಬ್ರ್ಯಾಂಡ್ ಆಗಿಸುವ ಮಹತ್ತ್ವಾಕಾಂಕ್ಷೆಯೊಂದಿಗೆ ರಂಜಿತ್ ಅವರ ಕುಟುಂಬ ಅಭೂತಪೂರ್ವ ಯಶಸ್ಸು ಗಳಿಸಿದೆ.
“ಇವತ್ತಿನ ದಿನಗಳಲ್ಲಿ ಮಸಾಲ ಪುಡಿಗಳನ್ನು ತಯಾರಿಸುವ ಅನೇಕ ಕಂಪನಿಗಳು ಇವೆ. ಆದರೆ ಹತ್ತರಲ್ಲಿ ಮತ್ತೊಂದು ಎನ್ನುವುದು ಒಳ್ಳೆಯದೇ, ಮೌಲ್ಯಯುತವಾದ ಹೊಸ ಬ್ರ್ಯಾಂಡ್ ಮಾಡುವುದು ಒಳ್ಳೆಯದೇ ಎಂಬ ಆಲೋಚನೆ ನನ್ನಲ್ಲಿತ್ತು. ಏಕೆಂದರೆ ಹೋಮ್ ಮೇಡ್ ಪ್ರಾಡಕ್ಟ್ಗಳಿಗೆ ಅದರದ್ದೇ ಆದ ಬೆಲೆ ಇದೆ. ಗುಣಮಟ್ಟ ಇರುತ್ತದೆ. ರುಚಿಕರವಾಗಿರುತ್ತದೆ. ಇದನ್ನೇ ಯಾಕೆ ದೊಡ್ಡ ಬ್ರ್ಯಾಂಡ್ ಮಾಡಬಾರದು? ಸಾಮಾನ್ಯವಾಗಿ ಹೋಮ್ ಮೇಡ್ ಸಾಂಬಾರ್ ಪುಡಿಗಳ ತಯಾರಕರು ಯಾವುದಾದರೂ ಬಡಾವಣೆ, ಗಲ್ಲಿಗಳಿಗೆ, ಸೀಮಿತವಾಗಿರುತ್ತಾರೆ. ಆದ್ದರಿಂದ ನಾನು, ನನ್ನ ತಾಯಿ, ಪತ್ನಿ, ತಮ್ಮ, ತಮ್ಮನ ಪತ್ನಿ ಹೀಗೆ ಎಲ್ಲರೂ ಸೇರಿಕೊಂಡು ಅತ್ಯುತ್ತಮ ಗುಣಮಟ್ಟದ ಬ್ರ್ಯಾಂಡ್ ಮಾಡಲು ನಿರ್ಧಾರ ಮಾಡಿದೆವು. ಧೀ ಮಸಾಲ ಸೇವಿಸುವ ಪ್ರತಿಯೊಬ್ಬ ಬಳಕೆದಾರರಿಗೂ ಹೊಸ ಚೈತನ್ಯ, ಹೊಸ ಶಕ್ತಿ ಸಿಗಲಿ ಎಂಬ ಉದ್ದೇಶದಿಂದ ಧೀ ಎಂಬ ಹೆಸರನ್ನು ನಾಮಕರಣ ಮಾಡಿದ್ದೇವೆ. ನಿಮ್ಮ ಮನೆಯಲ್ಲಿ ನಿಮ್ಮ ತಾಯಿ ಮಾಡಿಕೊಡುವಷ್ಟೇ ರುಚಿಕರ, ಆರೋಗ್ಯಕರ ಪದಾರ್ಥ ಇಲ್ಲಿ ಸಿಗುತ್ತದೆ. ನಮ್ಮಲ್ಲಿ ಯಾವುದೇ ಪ್ರಿಸರ್ವೇಟಿವ್ಸ್, ಕಲರಿಂಗ್ ಏಜೆಂಟ್ಸ್, ಟೇಸ್ಟಿಂಗ್ ಪೌಡರ್ಸ್ ಬಳಸುವುದಿಲ್ಲ. ಸಂಪೂರ್ಣ ಆರೋಗ್ಯಕರವಾಗಿರುತ್ತದೆ. ಇದು ನಮ್ಮ ಧ್ಯೇಯವೂ ಹೌದು ʼʼ ಎನ್ನುತ್ತಾರೆ ರಂಜಿತ್.
ಮ್ಯಾನೇಜರ್ ಹುದ್ದೆ ಬಿಟ್ಟು ಉದ್ಯಮಿಯಾದರು:
ಮೂರು ವರ್ಷದ ಹಿಂದೆ ರಂಜಿತ್ ಅವರಿಗೂ ಆಹಾರೋದ್ಯಮಕ್ಕೂ ಸಂಬಂಧವೇ ಇದ್ದಿರಲಿಲ್ಲ! ಎಂಜಿನಿಯರಿಂಗ್ ಓದಿ ಖಾಸಗಿ ಕಂಪನಿಯೊಂದರ ಮಾರುಕಟ್ಟೆ ವಿಭಾಗದಲ್ಲಿ ಸತತ 14 ವರ್ಷಗಳ ಕಾಲ ಉನ್ನತ ಅಧಿಕಾರಿಯಾಗಿದ್ದರು. ಉತ್ತಮ ಸಂಬಳ, ಮ್ಯಾನೇಜರ್ ಹುದ್ದೆ, ಉದ್ಯೋಗ ಭದ್ರತೆ ಎಲ್ಲವೂ ಅವರಿಗಿತ್ತು. ಆದರೆ ಸ್ವಂತ ಉದ್ದಿಮೆ ಮಾಡಬೇಕು, ಒಂದು ಉತ್ತಮ ಉತ್ಪನ್ನವನ್ನು ಕೊಡಬೇಕು ಎಂಬ ಕನಸು ನನಸು ಮಾಡಲು ಕಂಪನಿಗೆ ವಿದಾಯ ಹೇಳಿದರು. ಸಂಪೂರ್ಣ ಹೊಸ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು.
ಆರಂಭದಲ್ಲಿ ಸುಮಾರು 20 ಲಕ್ಷ ರುಪಾಯಿ ಬಂಡವಾಳದಲ್ಲಿ ಧೀ ಮಸಾಲವನ್ನು ಆರಂಭಿಸಿದರು. ಸರಕಾರದ ಯೋಜನೆಗಳನ್ನು ಅಧ್ಯಯನ ಮಾಡಿದರು. ಇವತ್ತು ಸ್ವಂತ ಉದ್ದಿಮೆ ಮಾಡಬೇಕು ಎಂದು ಬಯಸುವವರಿಗೆ ಸರಕಾರದ ಯೋಜನೆಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳಿರುತ್ತದೆ. ಆದರೆ ಸರಿಯಾಗಿ ತಿಳಿದುಕೊಂಡು ಅನುಸರಿಸಿದರೆ ಸರಕಾರದ ನಾನಾ ಯೋಜನೆಗಳ ಪ್ರಯೋಜನ ಪಡೆದು ಬಿಸಿನೆಸ್ ಶುರು ಮಾಡಬಹುದು ಎನ್ನುತ್ತಾರೆ ರಂಜಿತ್ ಅವರು. ಅದೇ ರೀತಿ ಪ್ರಧಾನಮಂತ್ರಿ ಎಂಪ್ಲಾಯಿಮೆಂಟ್ ಡೆವಲಪ್ಮೆಂಟ್ ಸ್ಕೀಮ್ ಅಡಿಯಲ್ಲಿ ( Pradhan Mantri Employment Generation Programme- PMEGP) ಸಾಲವನ್ನು ಪಡೆದು, ಯಂತ್ರೋಪಕರಣಗಳನ್ನು ಖರೀದಿಸಿ ಧೀ ಮಸಾಲ ಸ್ಥಾಪಿಸಿದೆ ಎಂದು ಅವರು ವಿವರಿಸುತ್ತಾರೆ.
ನೇರವಾಗಿ ಗ್ರಾಹಕರ ಕೈ ಸೇರುವ ಧೀ ಮಸಾಲ :
ಯಾವುದೇ ಬಿಸಿನೆಸ್ ಮಾಡಲು ಹಲವಾರು ಪೂರ್ವ ಸಿದ್ಧತೆಗಳು ಬೇಕಾಗುತ್ತದೆ. ಸಣ್ಣ ಪ್ರಮಾಣದಲ್ಲಿಯೇ ಆರಂಭಿಸುವುದು ಉತ್ತಮ. ಮಸಾಲ ಫುಡ್ ಬ್ರ್ಯಾಂಡ್ ಕಟ್ಟಲು 20 ಲಕ್ಷ ರುಪಾಯಿಗಳಿಂದ ಸಣ್ಣ ಉತ್ಪಾದನಾ ಘಟಕವನ್ನು ಸ್ಥಾಪಿಸಬಹುದು. ಒಳ್ಳೆಯ ಉತ್ಪನ್ನ ತಯಾರಿಸುವುದು, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ಮುಖ್ಯವಾಗುತ್ತದೆ. ಆರಂಭದಲ್ಲಿ ಏಳು ಬಗೆಯ ಮಾರ್ಕೆಟಿಂಗ್ ವಿಧಾನವನ್ನು ರಂಜಿತ್ ಅನುಸರಿಸಿದರು. ಪ್ರಾಡಕ್ಟ್ ಮಾಡುವುದು ಎಷ್ಟು ಮುಖ್ಯವೋ, ಜನಕ್ಕೆ ಮುಟ್ಟಿಸುವುದು ಕೂಡ ದೊಡ್ಡ ಚಾಲೆಂಜ್.
ಸಾಮಾನ್ಯವಾಗಿ ಎಫ್ಎಂಸಿಜಿ ವಲಯದಲ್ಲಿ ಉತ್ಪನ್ನವನ್ನು ಶಾಪಿಂಗ್ ಮಾಲ್ಗಳಲ್ಲಿ, ರಿಟೇಲ್ ಸ್ಟೋರ್ಗಳಲ್ಲಿ ಇಟ್ಟು ಮಾರಾಟ ಮಾಡಬಹುದು. ಆದರೆ ಇವತ್ತು ತಂತ್ರಜ್ಞಾನದ ಕಾಲ. ಹೀಗಾಗಿ ಹೊಸ ವಿಧಾನದಲ್ಲಿ ಗ್ರಾಹಕರನ್ನು ತಲುಪಲು ಬಯಸಿದೆವು. ನೇರವಾಗಿ ಗ್ರಾಹಕರನ್ನೇ ಭೇಟಿಯಾಗಿ ಉತ್ಪನ್ನವನ್ನು ನೀಡಲು ಶುರು ಮಾಡಿದೆವು. ಇದರಿಂದ ಗ್ರಾಹಕರ ಅಭಿರುಚಿ ಗೊತ್ತಾಯಿತು. ಅದಕ್ಕೆ ತಕ್ಕಂತೆ ಮಾರ್ಪಾಟುಗಳನ್ನು ಮಾಡಿದೆವು. ಜತೆಗೆ ನಾನಾ ವಸ್ತು ಪ್ರದರ್ಶನಗಳಲ್ಲಿ ನಮ್ಮ ಪ್ರಾಡಕ್ಟ್ಗಳನ್ನು ಮಾರಾಟ ನಡೆಯಿತು. ಇದರಿಂದ ನಮ್ಮ ಬಂಡವಾಳ ಎಲ್ಲೂ ವ್ಯರ್ಥವಾಗುವುದಿಲ್ಲ. ಎಲ್ಲೂ ನನೆಗುದಿಗೆ ಬೀಳುವುದಿಲ್ಲ. ಗ್ರಾಹಕರು ನೇರವಾಗಿ ಹಣ ನೀಡುವುದರಿಂದ ವ್ಯಾಪಾರವೂ ಹೆಚ್ಚುತ್ತದೆ. ಯಾವ ಪದಾರ್ಥ ಗ್ರಾಹಕರಿಗೆ ಇಷ್ಟವಾಗುತ್ತದೆ ಎಂಬುದು ನೇರವಾಗಿ ತಿಳಿಯಲು ಸಾಧ್ಯವಾಯಿತು. ಜನರೂ ತಮಗೆ ಇಷ್ಟವಾದ ಪದಾರ್ಥವನ್ನು ಬೇರೆಯವರಿಗೆ ತಿಳಿಸುವುದರಿಂದ ಮನೆಮಾತಾಗಿದೆ. ಮೊದಲು ಎರಡು ಮೂರು ಗ್ರಾಮ್ ಸ್ಯಾಂಪಲ್ ತೆಗೆದುಕೊಂಡವರು ಬಳಿಕ ಕೇಜಿಗಟ್ಟಲೆ ಖರೀದಿಸಿದವರು ಇದ್ದಾರೆ. ಎನ್ನುತ್ತಾರೆ ರಂಜಿತ್.
ಕಚ್ಚಾ ವಸ್ತುಗಳು, ಯಂತ್ರೋಪಕರಣ ವ್ಯವಸ್ಥೆ ಹೇಗೆ?
ಯಾವುದೇ ಉದ್ದಿಮೆಯಲ್ಲಿ ಯಂತ್ರೋಪಕರಣಗಳು ಮತ್ತು ಗುಣಮಟ್ಟದ ಕಚ್ಚಾ ವಸ್ತುಗಳನ್ನು ಹೊಂದಿಸುವುದು ಮತ್ತು ಮಾರುಕಟ್ಟೆಯನ್ನು ಕಂಡುಕೊಳ್ಳುವುದು ಮುಖ್ಯ. ಹೀಗಾಗಿ ರಂಜಿತ್ ಅವರು ಯಂತ್ರೋಪಕರಣಗಳು, ಕಚ್ಚಾ ವಸ್ತುಗಳು ಮತ್ತು ಮಾರುಕಟ್ಟೆ ಎಂದು ವಿಭಾಗ ಮಾಡಿಕೊಂಡರು. ಮೊದಲು ಎಲ್ಲಿ ಯಂತ್ರೋಪಕರಣಗಳು ಸಿಗುತ್ತವೆ? ಅದರಲ್ಲಿ ಎಷ್ಟು ವಿಧಗಳಿವೆ, ದರ ಎಷ್ಟು ಎಂಬುದನ್ನು ತಿಳಿದುಕೊಂಡರು. ಕಿಚನ್ ಎಕ್ವಿಪ್ಮೆಂಟ್ ತಯಾರಕರ ಬಳಿ ಚರ್ಚಿಸಿದರು. ಎರಡನೆಯದ್ದು ಕಚ್ಚಾ ಸಾಮಾಗ್ರಿಗಳು. ಕರ್ನಾಟಕದಲ್ಲಿ ಎಲ್ಲೆಲ್ಲಿ ಕಚ್ಚಾ ಸಾಮಾಗ್ರಿಗಳಾದ ಸಂಬಾರ ಬೆಳೆಗಳನ್ನು ಬೆಳೆಸುತ್ತಾರೆ ಎಂಬುದನ್ನು ಪಟ್ಟಿ ಮಾಡಿದರು. ಬಳಿಕ ರೈತ ಉತ್ಪಾದಕ ಸಂಸ್ಥೆಗಳನ್ನು ಕೂಡ ಸಂಪರ್ಕಿಸಿದರು. ರಾಜ್ಯದಲ್ಲಿ ಈಗ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಲು ತಮ್ಮದೇ ರೈತ ಉತ್ಪಾದಕ ಸಂಸ್ಥೆಗಳನ್ನು (FPO) ಹೊಂದಿದ್ದಾರೆ. ಅವುಗಳನ್ನು ಸಂಪರ್ಕಿಸಿ ಉತ್ತಮ ಗುಣಮಟ್ಟದ ಕಚ್ಚಾ ಸಾಮಾಗ್ರಿಗಳನ್ನು, ಅಂದರೆ ಮೆಣಸಿನಕಾಯಿ, ಅರಿಷಿನ, ಬೇಳೆ ಕಾಳುಗಳು ಇತ್ಯಾದಿಗಳನ್ನು ರೈತರಿಂದ ನೇರವಾಗಿ ಖರೀದಿಸಿದರು. ಇವತ್ತು ಒಂದು ಫೋನ್ ಕರೆ ಮಾಡಿದರೆ ಸಾಕು, ಅವರಿಗೆ ಅವಶ್ಯವಿರುವ ಕಚ್ಚಾ ಸಾಮಾಗ್ರಿಗಳು ಸಾಗಣೆಯಾಗುತ್ತವೆ. ಸಾಂಬಾರ್ ಪುಡಿಗಳ ಜತೆಗೆ ಚಟ್ನಿ ಪುಡಿಗಳನ್ನೂ ಮಾಡುತ್ತಾರೆ.
ಚಟ್ನಿಪುಡಿಗಳಿಗೆ ಭಾರಿ ಬೇಡಿಕೆ:
ಮಾರುಕಟ್ಟೆಯ ವೈಶಿಷ್ಟವೇನೆಂದರೆ, ಅದುವೇ ಏನು ಬೇಕು ಎಂಬುದನ್ನು ಅನುಭವದ ಮೂಲಕ ತಿಳಿಸಿಕೊಡುತ್ತದೆ. ಅದನ್ನು ಗ್ರಹಿಸುವ ಸೂಕ್ಷ್ಮತೆ ಬೇಕು. ಧೀ ಮಸಾಲ ಸಂಸ್ಥೆಯಲ್ಲಿ ಆರಂಭದಲ್ಲಿ ಸಾಂಬಾರ್ ಪುಡಿ, ರಸಂ ಪುಡಿ, ವಾಂಗಿ ಬಾತ್, ಬಿಸಿಬೇಳೆ ಬಾತ್, ಪುಳಿಯೋಗರೆಗೆ ಆದ್ಯತೆ ನೀಡಲಾಗಿತ್ತು. ಇದರ ಜತೆಗೆ ನಾನಾ ಚಟ್ನಿ ಪುಡಿಗಳನ್ನು ಶುರು ಮಾಡಲಾಯಿತು. ಈಗ ಧೀ ಮಸಾಲದ ಚಟ್ನಿ ಪುಡಿಗಳು ಭಾರಿ ಜನಪ್ರಿಯವಾಗಿದೆ. ” ನಾವು ಯಾವುದೋ ಒಂದು ಪದಾರ್ಥವನ್ನು ಮುಂದಿಟ್ಟುಕೊಂಡು ಹೋಗಬಹುದು ಎಂದು ಭಾವಿಸುತ್ತೇವೆ. ಆದರೆ ನಮಗೆ ಗೊತ್ತೇ ಆಗದಂತೆ ಮತ್ತೊಂದು ಪದಾರ್ಥವನ್ನು ಜನರು ಇಷ್ಟಪಡಬಹುದು. ಮಾರುಕಟ್ಟೆ ಹೀಗೆ ನಮಗೆ ತನ್ನದೇ ಅನುಭವವನ್ನು ನೀಡುತ್ತಿರುತ್ತದೆ. ಅದನ್ನು ಕಲಿತುಕೊಳ್ಳಬೇಕುʼʼ ಎನ್ನುತ್ತಾರೆ ರಂಜಿತ್ ಅವರು. ನ ಆರಂಭದಲ್ಲಿ ಸಾಂಪ್ರದಾಯಿಕ ಕಡ್ಲೆಕಾಯಿ ಬೀಜದ ಚಟ್ನಿಪುಡಿ ಮಾಡಿದರು. ಕಡ್ಲೆಕಾಯಿ ಜತೆಗೆ ಬೆಳ್ಳುಳ್ಳಿ, ನೆಲಗಡಲೆಯ ಚಟ್ನಿ ಪುಡಿ, ಕರಿಬೇವು, ಅಗಸೆ,
ನುಗ್ಗೆ ಸೊಪ್ಪಿನ ಚಟ್ನಿಪುಡಿ, ದೋಸೆ, ಇಡ್ಲಿ ಮೇಲೆ ಬಳಸುವ ಚಟ್ನಿಪುಡಿ ಮಾಡಿದರು. ಬೆಂಗಳೂರಿನಲ್ಲಿ ಸುಮಾರು 30 ಕ್ಕೂ ಹೆಚ್ಚು ರೆಸ್ಟೊರೆಂಟ್ಗಳು ಧೀ ಮಸಾಲ ಉತ್ಪನ್ನಗಳನ್ನು ಬಳಸುತ್ತಿವೆ. ಕೊಚ್ಚಿನ್, ಧರ್ಮಶಾಲಾ, ಮುಂಬಯಿನಲ್ಲಿರುವ ರೆಸ್ಟೊರೆಂಟ್ಗಳೂ ಧೀ ಮಸಾಲಾ ಪ್ರಾಡಕ್ಟ್ಗಳನ್ನು ಬಳಸುತ್ತಿವೆ.
ಆರೋಗ್ಯದಾಯಕ ರಾಗಿ ಸರಿ :
ಸಾಂಪ್ರದಾಯಿಕ ಮತ್ತು ಆರೋಗ್ಯಕರ ಆಹಾರವನ್ನು ಜನರಿಗೆ ನೀಡಲು ಧೀ ಮಸಾಲ ಆದ್ಯತೆ ನೀಡಿದ್ದು, ಅದಕ್ಕೆ ಅಭೂತಪೂರ್ವ ಸ್ಪಂದನೆ ಲಭಿಸಿದೆ. ಜನರಿಗೆ ಆರೋಗ್ಯದಾಯಕ ಉತ್ಪನ್ನಗಳನ್ನು ಕೊಡಬೇಕು ಎಂಬುದು ಧೀ ಮಸಾಲದ ಅಶಯ. ಹೀಗಾಗಿ ರಾಗಿ ಧಾನ್ಯದಿಂದ ತಯಾರಿಸುವ ಸಾಂಪ್ರದಾಯಿಕ ಪೌಷ್ಟಿಕಾಹಾರವಾದ ರಾಗಿ ಸರವನ್ನು ಪರಿಚಯಿಸಿದರು. ರಂಜಿತ್ ಅವರ ತಾಯಿ ಇದಕ್ಕೆ ಸಹಕಾರ ನೀಡಿದ್ದಾರೆ. ರಾಗಿ ಸರಿ ಮತ್ತು ರಾಗಿ ಮಿಲೆಟ್ಸ್ ಎಂಬ ಎರಡು ಉತ್ಪನ್ನಗಳನ್ನು ಸಂಸ್ಥೆಯು ಪರಿಚಯಿಸಿದೆ. 4 ತಿಂಗಳಿನಿಂದ 1 ವರ್ಷ ವಯಸ್ಸಿನ ಮಕ್ಕಳಿಗೆ ರಾಗಿ ಸರಿಯನ್ನು ಕೊಡಬಹುದು. 1 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ರಾಗಿ ಮಿಲೆಟ್ ಮಿಕ್ಸ್ ಅನ್ನು ಬಳಸಬಹುದು. ರಾಗಿ ಮಿಲೆಟ್ ಮಿಕ್ಸ್ನಲ್ಲಿ ಮೊಳಕೆ ಕಾಳು, ಗೋಧಿ, ಒಣ ಹಣ್ಣುಗಳು, ಜೀರಿಗೆ ಇತ್ಯಾದಿಗಳನ್ನು ಸೇರಿಸಿ ನೀಡುತ್ತಿದ್ದಾರೆ. ಭವಿಷ್ಯದ ದಿನಗಳಲ್ಲಿ ಅಡುಗೆ ಕೋಣೆಗೆ ಬೇಕಾಗುವ ಮತ್ತು ಜನರ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅನೇಕ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಮಹತ್ತ್ವಾಕಾಂಕ್ಷೆಯನ್ನು ಧೀ ಮಸಾಲ ಹೊಂದಿದೆ.
ಪ್ಲಾನ್ ಮಾಡಿ ರಿಸ್ಕ್ ತೆಗೆದುಕೊಂಡರೆ ಯಶಸ್ಸು:
ರಂಜಿತ್ ಅವರು ಅಡುಗೆಮನೆಯಲ್ಲಿ ಸಣ್ಣದಾಗಿ ಆರಂಭಿಸಿದ ಮಸಾಲ ಪುಡಿಗಳ ವ್ಯಾಪಾರವನ್ನು ಇಪ್ಪತ್ತು ಲಕ್ಷ ಬಂಡವಾಳದಲ್ಲಿ ಉದ್ದಿಮೆ ಘಟಕವಾಗಿ ಪರಿವರ್ತಿಸಿದಾಗ ಮಾರುಕಟ್ಟೆಯ ಎಲ್ಲ ರಿಸ್ಕ್ಗಳೂ, ಸವಾಲುಗಳೂ ಇದ್ದವು. ಆದರೆ ಪ್ರತಿಯೊಂದು ಅಂಶವನ್ನೂ ಪಟ್ಟಿ ಮಾಡಿಕೊಂಡು, ಪ್ಲಾನ್ ಮಾಡಿಕೊಂಡು ರಿಸ್ಕ್ ತೆಗೆದುಕೊಂಡು ಅದ್ಭುತವಾದ ಯಶಸ್ಸು ಗಳಿಸಿದರು. ಈ ಹಿಂದೆ ಟೀ-ಕಾಫಿ ಮಾಡಲೂ ಗೊತ್ತಿರದಿದ್ದ ರಂಜಿತ್ ಅವರು ಅಪಾರವಾದ ಶ್ರದ್ಧೆಯಿಂದ ವಿದ್ಯಾರ್ಥಿಯಂತೆ ಕಲಿತು ಆಹಾರೋದ್ಯಮಿಯಾದರು. ಆಹಾರ ಸಂಸ್ಕರಣೆಯ ಯಂತ್ರೋಪಕರಣಗಳ ಬಗ್ಗೆ ತಿಳಿದುಕೊಳ್ಳಲು ಒಂದೆರಡು ತಿಂಗಳು ಶ್ರಮಿಸಿದ್ದರು. ಘಟಕಗಳಿಗೆ ಭೇಟಿ ಕೊಟ್ಟಿದ್ದರು. ಆಗ ಅವರಿಗೆ ರೋಸ್ಟರ್, ಬ್ಲೆಂಡರ್, ಪಲ್ವರೈಸರ್, ಮಿಕ್ಸರ್ ಬೇಕು ಎಂಬುದನ್ನು ತಿಳಿದುಕೊಂಡರು. ಯಂತ್ರೋಪಕರಣಗಳ ತಯಾರಕರನ್ನು ಭೇಟಿಯಾದರು. ಸಿಎಫ್ಟಿಆರ್ಐನಲ್ಲಿ ಮಾರ್ಗದರ್ಶನ ಪಡೆದರು. ಚಾರ್ಟರ್ಡ್ ಅಕೌಟೆಂಟ್ ಸಹಾಯದಿಂದ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಿದರು. ಕೇಂದ್ರ ಸರಕಾರದ ಪ್ರಾಯೋಜಿತ ಪಿಎಂಇಜಿಪಿ ಸಾಲ, ಸಬ್ಸಿಡಿ ಸಿಕ್ಕಿತು. ಹೀಗೆ ಎಲ್ಲ ಹಂತಗಳಲ್ಲೂ ಬೆವರು ಸುರಿಸಿ ಕಲಿತರು. ಅವರಲ್ಲೊಂದು ಗುರಿ ಸ್ಪಷ್ಟವಾಗಿತ್ತು. ಜೀವನದಲ್ಲಿ ಏನಾದರೂ ಮಾಡೋದಿದ್ರೆ ಫುಡ್ ಬಿಸಿನೆಸ್ ಮಾತ್ರ ಎಂಬ ಅಚಲ ನಿಲುವು ಇತ್ತು. ಜತೆಗೆ ಕುಟುಂಬ ಸಾಥ್ ನೀಡಿತು. ರಂಜಿತ್ ಅವರು ಇದುವರೆಗೆ ಒಂದು ಗ್ರಾಮ್ ಸಾಂಬಾರ್ ಪುಡಿಯನ್ನೂ ವ್ಯರ್ಥಪಡಿಸಿಲ್ಲ. ಐದು ಕೆಜಿಯಿಂದ ಆರಂಭವಾದ ಬಿಸಿನೆಸ್ ಇವತ್ತು ನೂರಾರು ಕೆಜಿ ಲೆಕ್ಕದಲ್ಲಿ ಬೆಳೆದಿದೆ. ಹೋಟೆಲ್ಗಳು, ರೆಸ್ಟೊರೆಂಟ್ಗಳು ಧೀ ಮಸಾಲಾ ಉತ್ಪನ್ನಗಳನ್ನು ಬಳಸುತ್ತಿವೆ. ವಾಟ್ಸ್ ಆಪ್ ಗ್ರೂಪ್ ಸೇರಿದಂತೆ ಜಾಲತಾಣಗಳ ಮೂಲಕ 16 ಸಾವಿರಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರ ನೇರ ಸಂಪರ್ಕವನ್ನು ಹೊಂದಿದ್ದಾರೆ.
ಬಿಸಿನೆಸ್ ಸಕ್ಸೆಸ್ ಸೀಕ್ರೆಟ್ಸ್ ಮಂತ್ರ!
ಅನೇಕ ಮಂದಿ ಗುಣಮಟ್ಟದ ಉತ್ಪನ್ನವನ್ನು ತಯಾರಿಸಿದರೂ, ಮಾರುಕಟ್ಟೆಯಲ್ಲಿ ವಿಫಲರಾಗುತ್ತಾರೆ. ಒಂದು ವರ್ಷ ಅಥವಾ ಎರಡು ವರ್ಷದ ಬಳಿಕ ಸೋತು ಕೈಚೆಲ್ಲುತ್ತಾರೆ. ಹೀಗೆ ಆಗದಂತೆ ನೋಡಿಕೊಳ್ಳೋದು ಹೇಗೆ? ಫುಡ್ ಬಿಸಿನೆಸ್ ಸಕ್ಸೆಸ್ ಸೀಕ್ರೆಟ್ಸ್ ಮಂತ್ರ ಏನು? ಉತ್ತಮವಾದ ಉತ್ಪನ್ನವನ್ನು ತಯಾರಿಸುವುದು ಮೊದಲ ಹಂತ. ಎರಡನೆಯದ್ದು ಮಾರುಕಟ್ಟೆಯಲ್ಲಿ ಗೆಲ್ಲೋದು. ಜನರಿಗೆ ಉತ್ಪನ್ನವನ್ನು ತಲುಪಿಸುವ ಸವಾಲು. ಜನರು ಖರೀದಿಸುವ ಜಾಗದಲ್ಲಿ ನಿಮ್ಮ ಉತ್ಪನ್ನ ಸಿಗಬೇಕು. ನೀವು ಯಾವ ಉತ್ಪನ್ನ ಮಾಡುತ್ತಿದ್ದೀರಿ ಮತ್ತು ಅದನ್ನು ಯಾವ ಗ್ರಾಹಕರಿಗೆ ಮಾರುತ್ತೀರಿ ಎನ್ನುವುದು ಸ್ಪಷ್ಟವಾಗಿರಬೇಕು. ಯಾವ ದರದಲ್ಲಿ ಕೊಡಬೇಕು ಎನ್ನುವುದಕ್ಕಿಂತ ಪ್ರಾಡಕ್ಟ್ನ ಗುಣಮಟ್ಟಕ್ಕೆ ಎಷ್ಟು ಇರಬೇಕೊ ಅಷ್ಟು ದರವನ್ನು ಇಡಬಹುದು. 100 ಗ್ರಾಮ್ನಿಂದ ಒಂದು ಕೆಜಿ ತನಕ ಉತ್ಪನ್ನವನ್ನು ಭಿನ್ನ ತೂಕಗಳಲ್ಲಿ ಕೊಡುವುದರಿಂದ ಗ್ರಾಹಕರಿಗೂ ಹೊರೆಯಾಗುವುದಿಲ್ಲ.
ಪ್ಯಾಕೇಜಿಂಗ್ ಎಂಬ ಸೈಲೆಂಟ್ ಸೇಲ್ಸ್ಮ್ಯಾನ್!
ಹೋಮ್ ಮೇಡ್ ಪ್ರಾಡಕ್ಟ್ ಅನ್ನು ಕೂಡ ಜಾಗತಿಕ ಬ್ರ್ಯಾಂಡ್ ಆಗಿಸಬಹುದು. ಎಷ್ಟೋ ಮಂದಿ ಗುಣಮಟ್ಟದ ಉತ್ಪನ್ನ ತಯಾರಿಸಿದರೂ, ಪ್ಯಾಕೇಜಿಂಗ್ಗೆ ಗಮನ ಕೊಡದ ಕಾರಣ ಮಾರುಕಟ್ಟೆಯಲ್ಲಿ ವಿಫಲವಾಗುವ ಅಪಾಯ ಇರುತ್ತದೆ. ಆದ್ದರಿಂದ ಪ್ಯಾಕೇಜಿಂಗ್ಗೆ ಆದ್ಯತೆ ನೀಡಬೇಕು. ಪ್ಯಾಕೇಜಿಂಗ್ ಅನ್ನು ಮಾರುಕಟ್ಟೆಯ ಪರಿಭಾಷೆಯಲ್ಲಿ ಸೈಲೆಂಟ್ ಸೇಲ್ಸ್ ಮ್ಯಾನ್ ಎನ್ನುತ್ತಾರೆ. ಪ್ಯಾಕೇಜಿಂಗ್ನಲ್ಲಿ ಅಗತ್ಯವಾದ ಎಲ್ಲ ವಿವರಗಳು ಇರಬೇಕು. ಉತ್ಪನ್ನದ ವಿಶೇಷತೆ, ಬಳಸುವ ವಿಧಾನ ಎಲ್ಲ ಮಾಹಿತಿ ಅದರಲ್ಲಿ ಇರಬೇಕು. ಒಂದು ಆಕರ್ಷಕ ಬ್ರ್ಯಾಂಡ್ ಹೆಸರೂ ಇರಲಿ. ಅದರ ವಿಶೇಷತೆಯನ್ನು ಬಿಂಬಿಸುವ ಘೋಷಾ ವಾಕ್ಯ ಇರಲಿ.
ನುಗ್ಗೆ ಸೊಪ್ಪಿನ ಪುಡಿ, ಚಟ್ನಿ ಪುಡಿ, ಸೂಪ್ನ ಸ್ವಾರಸ್ಯ!
ಧೀ ಮಸಾಲದ ಯಶಸ್ಸಿನ ಗುಟ್ಟುಗಳಲ್ಲಿ ಸದಾ ಹೊಸತನ, ಸೃಜನಶೀಲತೆ ಮತ್ತು ಸಂಶೋಧನೆ. ಒಂದಿಲ್ಲೊಂದು ಹೊಸ ಆರೋಗ್ಯಕರ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ರಂಜಿತ್. ಪರಂಪರಾನುಗತವಾಗಿರುವ ಆಹಾರೋತ್ಪನ್ನಗಳಿಗೆ ಆಧುನಿಕತೆಯ ಮತ್ತು ಈಗಿನ ಪೀಳಿಗೆಯ ಜನರ ಅನುಕೂಲಕ್ಕೆ ತಕ್ಕಂತೆ ಸಿದ್ಧಪಡಿಸಿ ಯಶಸ್ವಿಯಾಗಿ ತಲುಪಿಸುವುದು ಅವರ ಜಾಣ್ಮೆಯಾಗಿದೆ. ಉದಾಹರಣೆಗೆ ನುಗ್ಗೆ ಸೊಪ್ಪಿನಲ್ಲಿಯೇ ಮೂರು ಬಗೆಯ ನವೀನ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ್ದಾರೆ. ನುಗ್ಗೆ ಸೊಪ್ಪು ಹೇರಳವಾಗಿ ಸಿಗುತ್ತದೆ. ಜತೆಗೆ ಅತ್ಯಂತ ಆರೋಗ್ಯದಾಯಕ. ಇದನ್ನು ರುಚಿಕರವಾಗಿ ಕೊಡುವ ಕಲೆಯನ್ನು ಧೀ ಮಸಾಲ ಕರಗತ ಮಾಡಿಕೊಂಡಿದೆ. ಬೇರೆಲ್ಲೂ ಈ ರೀತಿಯ ನುಗ್ಗೆ ಸೊಪ್ಪಿನ ಸೂಪ್ ಸಿಗದಿದ್ದಾಗ ಜನರು ಸಹಜವಾಗಿ ಧೀ ಮಸಾಲದತ್ತ ಆಕರ್ಷಿತರಾಗುತ್ತಾರೆ. ಬಿಸಿನೆಸ್ ವೃದ್ಧಿಸುತ್ತದೆ. ಗುಣಮಟ್ಟಕ್ಕೆ ರಾಜಿ ಆಗದಿರುವುದು, ಸದಾ ಅನ್ವೇಷಣೆಯೇ ಧೀ ಮಸಾಲದ ಸಕ್ಸೆಸ್ ಮಂತ್ರವಾಗಿದೆ. ” ನೋಡಿ, ಕರಿಬೇವಿನ ಎಲೆಯನ್ನು ತಟ್ಟೆಯಲ್ಲಿದ್ದರೂ, ಜನ ಅದನ್ನು ಬಳಸದೆ ಬದಿಗಿಡುತ್ತಾರೆ. ಆದರೆ ಕರಿಬೇವನ್ನೇ ಚಟ್ನಿಪುಡಿಯಾಗಿ ಕೊಟ್ಟರೆ ಸೇವಿಸುತ್ತಾರೆ. ಅದು ಆರೋಗ್ಯದಾಯಕ ಕೂಡ. ಆರಂಭದಲ್ಲಿ ನುಗ್ಗೆ ಸೊಪ್ಪಿನಿಂದ ಇಷ್ಟೊಂದು ಆರೋಗ್ಯ ಲಾಭ ಇದೆ ಎಂದು ಗೊತ್ತಿರಲಿಲ್ಲ. ಸ್ನೇಹಿತರೊಬ್ಬರು ಇದರ ಬಗ್ಗೆ ತಿಳಿಸಿದರು. ನಾನೂ ಸ್ವತಃ ಅದನ್ನು ಸೇವಿಸಿದೆ. ಎರಡೇ ದಿನದಲ್ಲಿ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತಿರುವ ಭಾವನೆ ಅನುಭವಕ್ಕೆ ಬಂತು. ಬಳಿಕ ಅದನ್ನೇ ಸಂಶೋಧನೆ ಮಾಡಿ ಸೂಪ್, ಚಟ್ನಿಪುಡಿಯಾಗಿ ಅಭಿವೃದ್ಧಿಪಡಿಸಿದೆವುʼʼ ಎಂದು ವಿವರಿಸುತ್ತಾರೆ ರಂಜಿತ್.
ಸರಕಾರದ ಯೋಜನೆ, ಸಬ್ಸಿಡಿಗಳನ್ನು ಬಳಸಿಕೊಳ್ಳಿ :
ಹೊಸತಾಗಿ ಬಿಸಿನೆಸ್ ಮಾಡುವವರಿಗೆ ಕೇಂದ್ರ ಸರಕಾರದ ಪ್ರಾಯೋಜಿತ ಹಣಕಾಸು ನೆರವು, ಸಬ್ಸಿಡಿ ಯೋಜನೆಗಳು ಇವೆ. ಅವುಗಳನ್ನು ಪಡೆಯುವುದರ ಜತೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಎಫ್ಎಸ್ಎಸ್ಎಐ ಲೈಸೆನ್ಸ್ ಪಡೆದುಕೊಳ್ಳಬೇಕು. ಲೇಬರ್ ಲೈಸೆನ್ಸ್ ಇರಬೇಕು. ಟ್ರೇಡ್ ಲೈಸೆನ್ಸ್ ಅಗತ್ಯ. ಮಾಪನ ಮೆಶೀನ್ ಸಲುವಾಗಿ ಪರವಾನಗಿ ಪಡೆಯಬೇಕು. ಪ್ರತಿಯೊಂದು ಪರವಾನಗಿಯನ್ನೂ ಪ್ರತಿ ವರ್ಷ ನವೀಕರಿಸಬೇಕು. ನಿಮ್ಮ ಉತ್ಪನ್ನವನ್ನು ರಫ್ತು ಮಾಡುವ ಉದ್ದೇಶ ಇದ್ದರೆ ಎಫ್ಎಸ್ಎಸ್ ಎಐನ ಕೇಂದ್ರೀಯ ಲೈಸೆನ್ಸ್ ಕೂಡ ಅವಶ್ಯಕ. ನಿಮ್ಮದೇ ಫುಡ್ ಬ್ರ್ಯಾಂಡ್ ಹೆಸರು ನೋಂದಣಿ ಮಾಡುವುದಿದ್ದರೆ, ಟ್ರೇಡ್ ಮಾರ್ಕ್ ನೋಂದಣಿ ಮಾಡಿಕೊಳ್ಳಬೇಕು. ನಿಮ್ಮ ಫುಡ್ ಬ್ರ್ಯಾಂಡ್ ಹೆಸರಿಡುವಾಗ ಅಂಥದ್ದೇ ಬೇರೆ ಇದೆಯೇ ಎಂಬುದನ್ನು ವೆಬ್ ಪೋರ್ಟಲ್ ಮೂಲಕ ಪರಿಶೀಲಿಸಬೇಕು. ನೀವು ಅಮೆಜಾನ್, ಫ್ಲಿಪ್ ಕಾರ್ಟ್ ಮುಂತಾದ ಇ-ಕಾಮರ್ಸ್ ತಾಣಗಳಲ್ಲಿ ಮಾರಾಟ ಮಾಡುವಾಗ ಟ್ರೇಡ್ ಮಾರ್ಕ್ ನೋಂದಣಿ ಅಗತ್ಯ. ಇದಕ್ಕೆ ಕನ್ಸಲ್ಟೆನ್ಸಿಗಳ ನೆರವು ಪಡೆಯಬುದು. ಸೂಪರ್ ಮಾರ್ಕೆಟ್ನಲ್ಲಿ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಆಲೋಚನೆ ಇದ್ದರೆ ಬಾರ್ಕೋಡ್ ಕೂಡ ಮಾಡಿಸಿಕೊಳ್ಳಬೇಕು. ಇದನ್ನೂ ಆನ್ಲೈನ್ ಮೂಲಕ ಮಾಡಿಕೊಳ್ಳಬಹುದು.
ಧೀ ಮಸಾಲ ತನ್ನದೇ ಇ-ಕಾಮರ್ಸ್ ವೆಬ್ ಸೈಟ್ ಅನ್ನು ಒಳಗೊಂಡಿದೆ. ಇದರಿಂದಾಗಿ ದೇಶ-ವಿದೇಶಗಳ ಗ್ರಾಹಕರು ಧೀ ಮಸಾಲದ ಉತ್ಪನ್ನಗಳನ್ನು ತರಿಸಿಕೊಳ್ಳಬಹುದು. ಧೀ ಮಸಾಲ ತನ್ನ ಗ್ರಾಹಕರ ಅನುಕೂಲಕ್ಕೆ ವಾಟ್ಸ್ ಆಪ್ ಮೂಲಕ ಪ್ರತ್ಯೇಕ ಗ್ರೂಪ್ ಮಾಡಿದ್ದು, ಅದರ ಮೂಲಕವೇ ಧೀ ಮಸಾಲದ ಪ್ರಾಡಕ್ಟ್ಗಳನ್ನು ಕೊಳ್ಳಬಹುದು. ಹದಿನೈದು ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಒಳಗೊಳ್ಳಲು ಇಂಥ ತಂತ್ರಜ್ಞಾನ ನೆರವಾಗಿದೆ. ಗ್ರಾಹಕರಿಗೆ ಏನು ಬೇಕೋ ಅಂಥ ಉತ್ಪನ್ನವನ್ನು ಕೊಡಬೇಕು. ನಿಮಗೆ ಬೇಕಾದ್ದನ್ನು ಕೊಡುವುದಲ್ಲ ಎನ್ನುವ ರಂಜಿತ್ ಅವರು, ತ್ವರಿತವಾಗಿ ಉತ್ಪನ್ನಗಳು ಗ್ರಾಹಕರಿಗೆ ಸಿಗುವಂತೆ ವ್ಯವಸ್ಥೆ ಮಾಡಿದ್ದಾರೆ. “ಧೀ ಮಸಾಲದ ಉತ್ಪಾದನಾ ಘಟಕ ಇರುವುದು ರಾಜರಾಜೇಶ್ವರಿ ನಗರದಲ್ಲಿ. ಈ ಬಡಾವಣೆಯಲ್ಲಿ 5-7 ಕಿಲೋಮೀಟರ್ ಪ್ರದೇಶದಲ್ಲಿ ಗ್ರಾಹಕರು ಆರ್ಡರ್ ಮಾಡಿದ 30 ನಿಮಿಷದಲ್ಲಿ ಸಿಗುತ್ತದೆ. 7 ಕಿಮೀಗಿಂತ ಹೆಚ್ಚು ದೂರವಿದ್ದರೆ 24 ಗಂಟೆಯಲ್ಲಿ ನೀಡುತ್ತದೆ. ಕರ್ನಾಟಕದ ಇತರ ಭಾಗದಲ್ಲಿದ್ದರೆ 2 ದಿನದಲ್ಲಿ ಡೆಲಿವರಿಯಾಗುತ್ತದೆ. ದೇಶದ ಇತರ ಭಾಗದಲ್ಲಿ ಇದ್ದರೆ 4 ದಿನದಲ್ಲಿ ಸಿಗುತ್ತದೆ. ವಿದೇಶವಾದರೆ ಒಂದು ವಾರದಲ್ಲಿ ಡೆಲಿವರಿಯಾಗುತ್ತದೆʼʼ ಎನ್ನುತ್ತಾರೆ ರಂಜಿತ್. ಹೀಗೆ ಅಚ್ಚುಕಟ್ಟಾದ ವ್ಯವಸ್ಥೆಯೊಂದನ್ನು ರೂಪಿಸಿದ್ದಾರೆ.
” ನಾಳೆಯ ದಿನ ಯಾವುದೇ ಎಐ ಟೆಕ್ನಾಲಜಿಯೇ ಬಂದ್ರೂ, ನೀವು ಊಟ ಮಾಡಲೇಬೇಕು. ಜಾಸ್ತಿ ಪ್ರೊಟೀನ್ ತಿನ್ನಬಹುದು, ಆದ್ರೆ ಕೊನೆಯಲ್ಲಿ ಹಸಿವಾಗಲೇಬೇಕು. ಆದ್ದರಿಂದ ಆಹಾರೋದ್ಯಮಕ್ಕೆ ಭವಿಷ್ಯ ಉಜ್ವಲವಾಗಿದೆ. ಆದ್ದರಿಂದ ಯಾರು ಬೇಕಾದರೂ ಧೈರ್ಯವಾಗಿ ಈ ಬಿಸಿನೆಸ್ ಮಾಡಬಹುದು, ಅತ್ಯುತ್ತಮ ಆದಾಯ ಮತ್ತು ಲಾಭ ಗಳಿಸಬಹುದು. ನೀವು ಸಂಬಾರ ಪದಾರ್ಥಗಳ ಬಿಸಿನೆಸ್ ಅನ್ನು ಕೇವಲ ಹತ್ತೇ ಸಾವಿರ ರುಪಾಯಿಯಿಂದಲೂ ಆರಂಭಿಸಬಹುದು. ನಿಮಗೆ ಬೇಕಾದಂತಹ ಹೆಸರಿನ ಬ್ರ್ಯಾಂಡ್ ನಲ್ಲಿ ತಯಾರಿಸಿಕೊಡುವ ಉತ್ಪಾದಕರಿದ್ದಾರೆ. ನೀವು ಮಾರುಕಟ್ಟೆಯನ್ನು ನಿರ್ವಹಿಸಿದರಾಯಿತು. ಬಳಿಕ ಎರಡನೇ ಹಂತದಲ್ಲಿ ನಿಮ್ಮದೇ ಬ್ರ್ಯಾಂಡ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಿ ಬಿಸಿನೆಸ್ ಮುಂದುವರಿಸಬಹುದು ಎಂಬ ಕಿವಿಮಾತನ್ನು ಆತ್ಮೀಯವಾಗಿ ಹೊಸ ಉತ್ಸಾಹಿ ಉದ್ಯಮಿಗಳಿಗೆ ಹೇಳುತ್ತಾರೆ ಧೀ ಮಸಾಲದ ರುವಾರಿ ರಂಜಿತ್! ಎಷ್ಟೊಂದು ಸ್ಪೂರ್ತಿದಾಯಕವಲ್ಲವೇ ಈ ಸಕ್ಸೆಸ್ ಸ್ಟೋರಿ!
===============
ಭಾರತದ ಆಹಾರೋದ್ಯಮವು (Indian Food Industry) ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ವೈವಿಧ್ಯಮಯವಾದ ವಲಯಗಳಲ್ಲಿ ಒಂದಾಗಿದೆ. ದೇಶದ ಕೃಷಿ ಉತ್ಪಾದನೆ, ಗ್ರಾಹಕರ ಅಭಿರುಚಿ ಮತ್ತು ಜಾಗತಿಕ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಈ ಉದ್ಯಮವು ನಿರಂತರವಾಗಿ ಪರಿವರ್ತನೆಗೊಳ್ಳುತ್ತಿದೆ. ಭಾರತೀಯ ಆರ್ಥಿಕತೆಯಲ್ಲಿ ಉದ್ಯೋಗ ಸೃಷ್ಟಿ, ಜಿಡಿಪಿ (GDP) ಕೊಡುಗೆ ಮತ್ತು ರಫ್ತಿನಲ್ಲಿ ಈ ವಲಯವು ನಿರ್ಣಾಯಕ ಪಾತ್ರ ವಹಿಸುತ್ತಿದೆ.
೧. ಭಾರತೀಯ ಆಹಾರೋದ್ಯಮದ ಪ್ರಸ್ತುತ ಸ್ವರೂಪ ಮತ್ತು ಬೆಳವಣಿಗೆ
ಭಾರತವು ವಿಶ್ವದ ಅತಿ ದೊಡ್ಡ ಆಹಾರ ಉತ್ಪಾದಕರಲ್ಲಿ ಒಂದಾಗಿದೆ. ಹಾಲು, ಹಣ್ಣುಗಳು, ತರಕಾರಿಗಳು, ಜೀರಿಗೆ, ಶುಂಠಿ ಮುಂತಾದ ಅನೇಕ ಉತ್ಪನ್ನಗಳ ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ ಅಗ್ರಸ್ಥಾನದಲ್ಲಿದೆ. ಸಾಂಪ್ರದಾಯಿಕ ಕೃಷಿಯಿಂದ ಹಿಡಿದು ಆಧುನಿಕ ಸಂಸ್ಕರಣಾ ಘಟಕಗಳವರೆಗೆ (Food Processing Units) ಈ ವಲಯವು ವಿಶಾಲವಾಗಿ ಹಬ್ಬಿದೆ.
ಆರ್ಥಿಕ ಕೊಡುಗೆ: ಭಾರತದ ಒಟ್ಟು ಜಿಡಿಪಿಗೆ ಮತ್ತು ಕೈಗಾರಿಕಾ ಉತ್ಪಾದನೆಗೆ ಆಹಾರ ಸಂಸ್ಕರಣಾ ವಲಯವು ಗಣನೀಯ ಕೊಡುಗೆಯನ್ನು ನೀಡುತ್ತಿದೆ.
ಉದ್ಯೋಗಾವಕಾಶಗಳು: ಪ್ರಾಥಮಿಕ ಕೃಷಿ ಕ್ಷೇತ್ರದಿಂದ ಹಿಡಿದು ಸಿದ್ಧ ಆಹಾರ ಉತ್ಪನ್ನಗಳ ಮಾರಾಟದವರೆಗೆ ಕೋಟ್ಯಂತರ ಜನರಿಗೆ ಈ ಉದ್ಯಮವು ನೇರ ಹಾಗೂ ಪರೋಕ್ಷ ಉದ್ಯೋಗವನ್ನು ಕಲ್ಪಿಸಿದೆ.
೨. ಆಹಾರ ಸಂಸ್ಕರಣಾ ವಲಯದ ಪಾತ್ರ (Food Processing Sector)
ಆಹಾರೋದ್ಯಮದ ಬೆನ್ನೆಲುಬು ಆಹಾರ ಸಂಸ್ಕರಣೆಯಾಗಿದೆ. ಕೃಷಿ ಉತ್ಪನ್ನಗಳನ್ನು ದೀರ್ಘಕಾಲದವರೆಗೆ ಕೆಡದಂತೆ ಕಾಪಾಡಲು, ಮೌಲ್ಯವರ್ಧನೆ (Value Addition) ಮಾಡಲು ಮತ್ತು ರೈತರಿಗೆ ಉತ್ತಮ ಬೆಲೆ ದೊರಕಿಸಿಕೊಡಲು ಸಂಸ್ಕರಣೆ ಅತ್ಯಾವಶ್ಯಕ.
ಮೌಲ್ಯವರ್ಧನೆ (Value Addition): ಕೇವಲ ಕಚ್ಚಾ ವಸ್ತುಗಳನ್ನು ಮಾರಾಟ ಮಾಡುವ ಬದಲು, ಅವುಗಳನ್ನು ಸಂಸ್ಕರಿಸಿ ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳನ್ನಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ ಉತ್ಪನ್ನದ ಮೌಲ್ಯ ಹೆಚ್ಚಾಗುತ್ತದೆ.
ನಷ್ಟ ತಡೆಯುವುದು: ಸರಿಯಾದ ಶೈತ್ಯೀಕರಣ (Cold Storage) ಮತ್ತು ಸಾರಿಗೆ ವ್ಯವಸ್ಥೆಯ ಕೊರತೆಯಿಂದಾಗಿ ಹಿಂದೆ ಲಕ್ಷಾಂತರ ಟನ್ ಹಣ್ಣು-ತರಕಾರಿಗಳು ಹಾಳಾಗುತ್ತಿದ್ದವು. ಈಗ ಆಧುನಿಕ ಸಂಸ್ಕರಣೆ ಮತ್ತು ಶೈತ್ಯಾಗಾರಗಳ ನೆರವಿನಿಂದ ಈ ವ್ಯರ್ಥವನ್ನು ಗಣನೀಯವಾಗಿ ತಗ್ಗಿಸಲಾಗಿದೆ.
೩. ಆಹಾರೋದ್ಯಮದ ಬೆಳವಣಿಗೆಗೆ ಪ್ರಮುಖ ಕಾರಣಗಳು
ಭಾರತದ ಆಹಾರೋದ್ಯಮದಲ್ಲಿ ಈ ಮಟ್ಟದ ಬದಲಾವಣೆ ಕಂಡುಬರಲು ಕೆಲವು ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಅಂಶಗಳು ಕಾರಣವಾಗಿವೆ:
ನಗರೀಕರಣ ಮತ್ತು ಬದಲಾದ ಜೀವನಶೈಲಿ: ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ನಗರೀಕರಣ ಹಾಗೂ ಬಿಡುವಿಲ್ಲದ ಜೀವನಶೈಲಿಯಿಂದಾಗಿ ಸಿದ್ಧ ಆಹಾರಗಳು (Ready-to-eat / Instant Foods) ಮತ್ತು ಪ್ಯಾಕ್ ಮಾಡಿದ ತಿಂಡಿಗಳಿಗೆ ಬೇಡಿಕೆ ಹೆಚ್ಚಿದೆ.
ಜನಸಂಖ್ಯೆ ಮತ್ತು ಕೊಳ್ಳುವ ಶಕ್ತಿ: ಭಾರತದಲ್ಲಿ ಯುವ ಜನಸಂಖ್ಯೆ ಹೆಚ್ಚಿದೆ ಮತ್ತು ಮಧ್ಯಮ ವರ್ಗದವರ (Middle Class) ಕೊಳ್ಳುವ ಶಕ್ತಿ ವೃದ್ಧಿಸಿದೆ. ಇದು ಹೊಸ ಬ್ರ್ಯಾಂಡ್ಗಳು ಮತ್ತು ವೈವಿಧ್ಯಮಯ ಆಹಾರಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸಿದೆ.
ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ಬೆಳವಣಿಗೆ: ಆನ್ಲೈನ್ ಆಹಾರ ವಿತರಣಾ ಆ್ಯಪ್ಗಳು, ಸೂಪರ್ಮಾರ್ಕೆಟ್ಗಳು ಮತ್ತು ತ್ವರಿತ ವಿತರಣಾ (Quick Commerce) ಸೇವೆಗಳು ಗ್ರಾಹಕರ ಮನೆ ಬಾಗಿಲಿಗೆ ಆಹಾರ ತಲುಪಿಸುವುದನ್ನು ಸುಲಭಗೊಳಿಸಿವೆ.
ಸರ್ಕಾರದ ಬೆಂಬಲ: ಭಾರತ ಸರ್ಕಾರವು ‘ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆ’ (PMKSY) ಮತ್ತು ‘ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆ’ (PLI Scheme) ಮುಂತಾದ ಉಪಕ್ರಮಗಳ ಮೂಲಕ ವಿದೇಶಿ ಮತ್ತು ದೇಶಿ ಹೂಡಿಕೆಯನ್ನು ಉತ್ತೇಜಿಸುತ್ತಿದೆ.
೪. ಪ್ರಮುಖ ಸವಾಲುಗಳು
ಉಜ್ಜ್ವಲ ಭವಿಷ್ಯವಿದ್ದರೂ, ಭಾರತದ ಆಹಾರೋದ್ಯಮವು ಕೆಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ:
ಸರಪಳಿ ನಿರ್ವಹಣೆ (Supply Chain Bottlenecks): ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮಾರ್ಗದಲ್ಲಿ ಇನ್ನೂ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆಯಿದೆ.
ಗುಮಮಟ್ಟ ಮತ್ತು ಸುರಕ್ಷತಾ ಮಾನದಂಡಗಳು (Quality & Safety): ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಕಟ್ಟುನಿಟ್ಟಾದ ಗುಣಮಟ್ಟ ಮತ್ತು ನೈರ್ಮಲ್ಯ ಮಾನದಂಡಗಳನ್ನು ಪಾಲಿಸುವುದು ಅನಿವಾರ್ಯ. ಸಣ್ಣ ಪ್ರಮಾಣದ ಉತ್ಪಾದಕರಿಗೆ ಇದು ಸವಾLವಾಗುತ್ತದೆ.
ಶೈತ್ಯೀಕರಣದ ಕೊರತೆ: ಹಣ್ಣು, ಹಾಲು ಮತ್ತು ತರಕಾರಿಗಳಂತಹ ಬೇಗನೆ ಹಾಳಾಗುವ ವಸ್ತುಗಳಿಗೆ ದೇಶಾದ್ಯಂತ ಇನ್ನೂ ಹೆಚ್ಚಿನ ಕೋಲ್ಡ್ ಚೈನ್ (Cold Chain) ಸೌಲಭ್ಯಗಳ ಅಗತ್ಯವಿದೆ.
೫. ಭವಿಷ್ಯದ ದೃಷ್ಟಿಕೋನ ಮತ್ತು ಅವಕಾಶಗಳು
ಭಾರತೀಯ ಆಹಾರೋದ್ಯಮದ ಮುಂದಿನ ದಾರಿ ಅತ್ಯಂತ ಆಶಾದಾಯಕವಾಗಿದೆ.
ಸಾವಯವ ಮತ್ತು ಆರೋಗ್ಯಕರ ಆಹಾರ (Organic & Health Foods): ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಿರುವುದರಿಂದ ಸಕ್ಕರೆ ರಹಿತ, ಸಿೋಗ ರಹಿತ, ಮಿಲೆಟ್ಸ್ (ಸಿರಿಧಾನ್ಯಗಳು) ಮತ್ತು ಸಾವಯವ ಆಹಾರಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಭಾರತವನ್ನು ‘ಜಾಗತಿಕ ಸಿರಿಧಾನ್ಯಗಳ ರಾಜಧಾನಿ’ (Global Hub for Millets) ಎಂದು ಗುರುತಿಸುತ್ತಿರುವುದು ಈ ಉದ್ಯಮಕ್ಕೆ ಹೊಸ ತಿರುವು ನೀಡಿದೆ.
ರಫ್ತು ಸಾಮರ್ಥ್ಯ: ಭಾರತೀಯ ಮಸಾಲೆ ಪದಾರ್ಥಗಳು, ಸಮುದ್ರಾಹಾರ, ಸಂಸ್ಕರಿಸಿದ ಆಹಾರ ಮತ್ತು ಸಿದ್ಧ ತಿಂಡಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆಯಿದ್ದು, ರಫ್ತು ವಲಯದಲ್ಲಿ ದೇಶವು ಮುಂಚೂಣಿಗೆ ಬರುತ್ತಿದೆ.
ಭಾರತದ ಆಹಾರೋದ್ಯಮವು ಕೇವಲ ವಾಣಿಜ್ಯ ಚಟುವಟಿಕೆಯಲ್ಲ, ಬದಲಿಗೆ ದೇಶದ ಆಹಾರ ಭದ್ರತೆ ಮತ್ತು ಆರ್ಥಿಕ ಪ್ರಗತಿಯ ಜೀವನಾಡಿಯಾಗಿದೆ. ಸರ್ಕಾರ, ರೈತರು, ಕೈಗಾರಿಕೋದ್ಯಮಿಗಳು ಮತ್ತು ಗ್ರಾಹಕರ ಸಮನ್ವಯತೆಯಿಂದ ಈ ವಲಯವು ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಕರ್ನಾಟಕದ ಆಹಾರೋದ್ಯಮವು (Food Industry in Karnataka) ವೈವಿಧ್ಯಮಯ ಕೃಷಿ-ವಾತಾವರಣ, ಆಧುನಿಕ ಸಂಶೋಧನಾ ಸಂಸ್ಥೆಗಳು, ಬಲವಾದ ಕೈಗಾರಿಕಾ ಮೂಲಸೌಕರ್ಯ ಮತ್ತು ತಾಂತ್ರಿಕ ನಾವೀನ್ಯತೆಯಿಂದಾಗಿ ಭಾರತದ ಆಹಾರೋದ್ಯಮದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಮತ್ತು ದಕ್ಷಿಣ ಒಳನಾಡಿನ ವಿಶಿಷ್ಟ ವಾತಾವರಣವು ವಿವಿಧ ರೀತಿಯ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸೂಕ್ತವಾಗಿದ್ದು, ಆಹಾರ ಸಂಸ್ಕರಣಾ ವಲಯಕ್ಕೆ ಸಮೃದ್ಧ ಕಚ್ಚಾವಸ್ತುಗಳನ್ನು ಒದಗಿಸುತ್ತದೆ.
೧. ಕರ್ನಾಟಕದ ಆಹಾರೋದ್ಯಮದ ಪ್ರಮುಖ ವಿಭಾಗಗಳು
ಕರ್ನಾಟಕದ ಆಹಾರೋದ್ಯಮವು ಬಹುಮುಖಿ ಸ್ವರೂಪದ್ದಾಗಿದ್ದು, ಪ್ರಮುಖವಾಗಿ ಈ ಕೆಳಗಿನ ವಿಭಾಗಗಳಲ್ಲಿ ವಿಸ್ತರಿಸಿದೆ:
ತೋಟಗಾರಿಕೆ ಮತ್ತು ಹಣ್ಣು-ತರಕಾರಿ ಸಂಸ್ಕರಣೆ: ಕರ್ನಾಟಕವು ಮಾವು, ಬಾಳೆ, ದಾಳಿಂಬೆ, ಟೊಮೆಟೊ, ತೆಂಗು ಮತ್ತು ಅಡಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಕೋಲಾರ, ರಾಮನಗರ, ವಿಜಯಪುರ ಮತ್ತು ಚಿತ್ರದುರ್ಗ ಜಿಲ್ಲೆಗಳು ಸಂಸ್ಕರಣಾ ಘಟಕಗಳಿಗೆ ಪ್ರಮುಖ ಕಚ್ಚಾವಸ್ತು ಪೂರೈಕೆ ಕೇಂದ್ರಗಳಾಗಿವೆ.
ಹಾಲು ಮತ್ತು ಹಾಲಿನ ಉತ್ಪನ್ನಗಳು (KMF – ನಂದಿನಿ): ಕರ್ನಾಟಕ ಹಾಲು ಮಹಾಮಂಡಳ (KMF) ಮತ್ತು ಅದರ ‘ನಂದಿನಿ’ ಬ್ರ್ಯಾಂಡ್ ರಾಜ್ಯದ ಹಾಲಿನ ಉದ್ಯಮದ ಬೆನ್ನೆಲುಬು. ಇದು ದೇಶದಲ್ಲೇ ಎರಡನೇ ಅತಿ ದೊಡ್ಡ ಸಹಕಾರ ಹಾಲು ಒಕ್ಕೂಟವಾಗಿದ್ದು, ಹಾಲು, ಮೊಸರು, ಬೆಣ್ಣೆ, ತುಪ್ಪ ಮತ್ತು ವಿವಿಧ ಸಿಹಿತಿಂಡಿಗಳ ಬೃಹತ್ ಮಾರುಕಟ್ಟೆಯನ್ನು ಹೊಂದಿದೆ.
ಸಾಂಬಾರು ಪದಾರ್ಥಗಳು ಮತ್ತು ಕಾಫಿ: ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳು ಭಾರತದ ಒಟ್ಟು ಕಾಫಿ ಉತ್ಪಾದನೆಯ ಶೇ. 70ಕ್ಕೂ ಹೆಚ್ಚು ಪಾಲನ್ನು ಹೊಂದಿವೆ. ಉತ್ತರ ಕನ್ನಡ, ಶಿವಮೊಗ್ಗ ಮತ್ತು ಮಲೆನಾಡು ಭಾಗಗಳು ಏಲಕ್ಕಿ, ಮೆಣಸು, ಶುಂಠಿ ಮತ್ತು ಅರಿಶಿನದ ಸಂಸ್ಕರಣೆಗೆ ಹೆಸರಾಗಿವೆ.
ಸಮುದ್ರಾಹಾರ ಮತ್ತು ಮೀನುಗಾರಿಕೆ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ 300 ಕಿ.ಮೀ ಗಿಂತಲೂ ಹೆಚ್ಚಿನ ಕರಾವಳಿ ತೀರವು ಸಮುದ್ರಾಹಾರ (Seafood) ಸಂಸ್ಕರಣೆ ಮತ್ತು ರಫ್ತು ಉದ್ಯಮಕ್ಕೆ ಭಾರಿ ನೆರವು ನೀಡಿದೆ.
ಸಿರಿಧಾನ್ಯಗಳು (Millets): ರಾಗಿ ಮತ್ತು ಜೋಳದಂತಹ ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯ ಆಧಾರಿತ ಸಿದ್ಧ ಆಹಾರಗಳು (Ready-to-eat millet products) ಮತ್ತು ಆರೋಗ್ಯಕರ ತಿಂಡಿಗಳ ಉದ್ಯಮ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿದೆ.
೨. ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ (R&D Hub)
ಕರ್ನಾಟಕದ ಆಹಾರೋದ್ಯಮಕ್ಕೆ ಜಾಗತಿಕ ಮಟ್ಟದ ಸಂಶೋಧನಾ ಸಂಸ್ಥೆಗಳು ಪ್ರಮುಖ ಶಕ್ತಿಯಾಗಿವೆ:
CFTRI (ಮೈಸೂರು): ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾಲಯ (Central Food Technological Research Institute) ಆಹಾರ ಸಂಸ್ಕರಣೆ, ಸಂರಕ್ಷಣೆ ಮತ್ತು ಗುಣಮಟ್ಟ ನಿಯಂತ್ರಣದಲ್ಲಿ ಜಾಗತಿಕ ಮಟ್ಟದ ಸಂಶೋಧನೆಗಳನ್ನು ನಡೆಸುತ್ತದೆ.
DFRL (ಮೈಸೂರು): ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (Defence Food Research Laboratory) ಮಿಲಿಟರಿ ಮತ್ತು ತುರ್ತು ಸಂದರ್ಭಗಳಿಗೆ ಅಗತ್ಯವಾದ ಸಿದ್ಧ ಆಹಾರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತದೆ.
ಫುಡ್ ಟೆಕ್ ಸ್ಟಾರ್ಟ್ಅಪ್ಗಳು (Bengaluru as FoodTech Hub): ಬೆಂಗಳೂರು ನಗರವು ದೇಶದ ಪ್ರಮುಖ ‘ಫುಡ್ ಟೆಕ್’ ಕೇಂದ್ರವಾಗಿದೆ. Swiggy, Zomato ಗಳಂತಹ ವಿತರಣಾ ವೇದಿಕೆಗಳಿಂದ ಹಿಡಿದು, ನವೀನ ಸಂಸ್ಕರಿಸಿದ ಆಹಾರ ತಯಾರಿಸುವ ಫುಡ್ ಸ್ಟಾರ್ಟ್ಅಪ್ಗಳಿಗೆ ಬೆಂಗಳೂರು ನೆಲೆ ಒದಗಿಸಿದೆ.
೩. ಸರ್ಕಾರದ ನೀತಿಗಳು ಮತ್ತು ಮೂಲಸೌಕರ್ಯ
ಕರ್ನಾಟಕ ಸರ್ಕಾರವು ಆಹಾರ ಸಂಸ್ಕರಣಾ ವಲಯವನ್ನು ಉತ್ತೇಜಿಸಲು ಹಲವು ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ:
ಆಹಾರ ಸಂಸ್ಕರಣಾ ನೀತಿ (Karnataka Food Processing Policy): ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಉದ್ಯಮಿಗಳಿಗೆ ಬಂಡವಾಳ ಸಬ್ಸಿಡಿ, ತೆರಿಗೆ ವಿನಾಯಿತಿ ಮತ್ತು ವಿದ್ಯುತ್ ದರದಲ್ಲಿ ರಿಯಾಯಿತಿಗಳನ್ನು ನೀಡಲಾಗುತ್ತದೆ.
ಆಹಾರ ಪಾರ್ಕ್ಗಳು (Food Parks): ರಾಜ್ಯದ ವಿವಿಧ ಭಾಗಗಳಾದ ಬಾಗಲಕೋಟೆ, ಹಿರಿಯೂರು (ಚಿತ್ರದುರ್ಗ), ಮಂಡ್ಯ, ಕೋಲಾರ ಮತ್ತು ಜೆವರಗಿಯಲ್ಲಿ ‘ಫುಡ್ ಪಾರ್ಕ್’ಗಳನ್ನು ಸ್ಥಾಪಿಸಲಾಗಿದ್ದು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಒಂದೇ ಸೂರಿನಡಿ ಮೂಲಸೌಕರ್ಯ ಒದಗಿಸಲಾಗಿದೆ.
PMFME (ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮೀಕರಣ ಯೋಜನೆ): ರಾಜ್ಯದ “ಒಂದು ಜಿಲ್ಲೆ – ಒಂದು ಉತ್ಪನ್ನ” (ODOP) ಪರಿಕಲ್ಪನೆಯಡಿಯಲ್ಲಿ ಸ್ಥಳೀಯ ಬೆಳೆಗಳನ್ನು ಆಧರಿಸಿದ ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
೪. ಎದುರಿಸುತ್ತಿರುವ ಸವಾಲುಗಳು
ಬೆ ಬೆಳವಣಿಗೆಯ ಜೊತೆಗೆ ಕರ್ನಾಟಕದ ಆಹಾರೋದ್ಯಮವು ಕೆಲವು ತೊಡಕುಗಳನ್ನು ಎದುರಿಸುತ್ತಿದೆ:
ಶೈತ್ಯಾಗಾರಗಳ (Cold Storage) ಕೊರತೆ: ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಉತ್ಪನ್ನಗಳನ್ನು ಸಂರಕ್ಷಿಸಲು ಅಗತ್ಯವಿರುವ ಶೈತ್ಯಾಗಾರಗಳು ಮತ್ತು ಕೋಲ್ಡ್-ಚೈನ್ ಸಾರಿಗೆ ಸೌಲಭ್ಯಗಳ ಕೊರತೆ ಇಂದಿಗೂ ಇದೆ.
ಹವಾಮಾನ ವೈಪರೀತ್ಯ: ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದಾಗಿ ಕಚ್ಚಾವಸ್ತುಗಳ ಪೂರೈಕೆಯಲ್ಲಿ ಅಸ್ಥಿರತೆ ಉಂಟಾಗುತ್ತದೆ.
ಸಣ್ಣ ಉದ್ಯಮಿಗಳಿಗೆ ನಿಕಟ ತರಬೇತಿಯ ಕೊರತೆ: ಅತ್ಯಾಧುನಿಕ ಪ್ಯಾಕಿಂಗ್, ಗುಣಮಟ್ಟದ ಮಾನದಂಡ (FSSAI) ಮತ್ತು ರಫ್ತು ಪ್ರಕ್ರಿಯೆಗಳ ಬಗ್ಗೆ ಗ್ರಾಮೀಣ ಮಟ್ಟದ ಸಂಸ್ಕರಣಾಗಾರರಿಗೆ ಸಂಪೂರ್ಣ ಅರಿವಿನ ಕೊರತೆಯಿದೆ.
೫. ಭವಿಷ್ಯದ ದೃಷ್ಟಿಕೋನ
ಕರ್ನಾಟಕದ ಆಹಾರೋದ್ಯಮವು ಸಾಂಪ್ರದಾಯಿಕ ಆಹಾರ ತಯಾರಿಕೆಯಿಂದ ಆಧುನಿಕ, ತಂತ್ರಜ್ಞಾನ ಆಧಾರಿತ ಮೌಲ್ಯವರ್ಧಿತ ಉದ್ಯಮವಾಗಿ ರೂಪಾಂತರಗೊಳ್ಳುತ್ತಿದೆ.
ಸಿರಿಧಾನ್ಯ ಮತ್ತು ಬ್ರ್ಯಾಂಡಿಂಗ್: ಕರ್ನಾಟಕದ “ಸಿರಿಧಾನ್ಯ” (Millets) ಆಧಾರಿತ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ.
ಆರ್ಗಾನಿಕ್ ಮತ್ತು ನ್ಯೂಟ್ರಾಸ್ಯುಟಿಕಲ್ಸ್ (Nutraceuticals): ಸಾವಯವ ಆಹಾರ ಹಾಗೂ ಪೋಷಕಾಂಶಯುಕ್ತ ಆಯುರ್ವೇದ-ಆಧಾರಿತ ಆಹಾರ ಉತ್ಪನ್ನಗಳಿಗೆ ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಲ್ಲಿ ಹೊಸ ಮಾರುಕಟ್ಟೆ ರೂಪುಗೊಳ್ಳುತ್ತಿದೆ.
ಕರ್ನಾಟಕವು ಸಮೃದ್ಧ ಕೃಷಿ ಮೂಲಸೌಕರ್ಯ, ಆಧುನಿಕ ತಂತ್ರಜ್ಞಾನ ಮತ್ತು ಬೆಂಬಲಿತ ಸರ್ಕಾರಿ ನೀತಿಗಳನ್ನು ಹೊಂದಿರುವುದರಿಂದ, ಮುಂದಿನ ದಿನಗಳಲ್ಲಿ ಭಾರತದ ಪ್ರಮುಖ ಆಹಾರ ಸಂಸ್ಕರಣಾ ಮತ್ತು ರಫ್ತು ಹಬ್ ಆಗಿ ಹೊರಹೊಮ್ಮುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ.
ಕರ್ನಾಟಕದ ಆಹಾರೋದ್ಯಮದ ಯಾವುದೇ ನಿರ್ದಿಷ್ಟ ಭಾಗದ ಬಗ್ಗೆ (ಉದಾಹರಣೆಗೆ: ನಂದಿನಿ (KMF) ಮಾದರಿ, ಕಾಫಿ ಉದ್ಯಮ, ಅಥವಾ ಫುಡ್ ಪಾರ್ಕ್ಗಳ ವಿವರ) ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ತಿಳಿಸಿ!












