• Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
  • Home
  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Wealth
  • Contact Us
No Result
View All Result
FinCore News
No Result
View All Result
Home Politics & News

EPS-95 ಪಿಂಚಣಿ ಹೆಚ್ಚಳಕ್ಕೆ ಹಿರಿಯ ನಾಗರಿಕರ ಪರದಾಟ, ರಾಷ್ಟ್ರಪತಿಗೆ ಪಿಂಚಣಿದಾರರ ಒಕ್ಕೂಟ ಪತ್ರ

fincorenews by fincorenews
October 26, 2026
in Politics & News
0
Pension

pension

189
SHARES
1.5k
VIEWS
Share on FacebookShare on Twitter

ಸಾರ್ವಜನಿಕ ವಲಯ (PSU) ಹಾಗೂ ಖಾಸಗಿ ವಲಯದ ಸುಮಾರು 10 ಲಕ್ಷ ಪಿಂಚಣಿದಾರರನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ‘ರಾಷ್ಟ್ರೀಯ ಪಿಂಚಣಿದಾರರ ಸಂಘಟನೆಗಳ ಒಕ್ಕೂಟ’ (NCPA), ಲಕ್ಷಾಂತರ ನೌಕರರ ಹೆಚ್ಚಿನ ಪಿಂಚಣಿ ಸಮಸ್ಯೆಯನ್ನು ಬಗೆಹರಿಸಲು ತಕ್ಷಣ ಮಧ್ಯಪ್ರವೇಶಿಸುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದೆ.

ಅಕ್ಟೋಬರ್ 23, 2026 ರಂದು ಬರೆದ ಈ ಪತ್ರದಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮತ್ತು ಕಾರ್ಮಿಕ ಸಚಿವಾಲಯವು ನ್ಯಾಯಾಲಯಗಳಲ್ಲಿ ಮಾಡುತ್ತಿರುವ ‘ಅನಗತ್ಯ’ ವ್ಯಾಜ್ಯಗಳನ್ನು (ಕೋಟ್ ಕೇಸ್‌ಗಳನ್ನು) ತಕ್ಷಣವೇ ಸ್ಥಗಿತಗೊಳಿಸಬೇಕು, ದಂಡದ ಬಡ್ಡಿಯನ್ನು ಮನ್ನಾ ಮಾಡಬೇಕು ಮತ್ತು ಬಾಕಿ ಇರುವ ಹಕ್ಕುಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು NCPA ರಾಷ್ಟ್ರಪತಿಗಳಿಗೆ ಮನವಿ ಮಾಡಿದೆ.

ಅಷ್ಟೇ ಅಲ್ಲದೆ, ಜನವರಿ 18, 2025 ರಂದು EPFO ಹೊರಡಿಸಿದ್ದ ವಿವಾದಾತ್ಮಕ ಸುತ್ತೋಲೆಯನ್ನು ಹಿಂಪಡೆಯುವಂತೆ ಸೂಚಿಸಬೇಕೆಂದು ಒತ್ತಾಯಿಸಿದೆ. ಆ ಸುತ್ತೋಲೆಯಲ್ಲಿ EPFO, ವಿನಾಯಿತಿ ಪಡೆದ ಸಂಸ್ಥೆಗಳ (Exempted Establishments) ಟ್ರಸ್ಟ್ ನಿಯಮಗಳ ಆಧಾರದ ಮೇಲೆಯೇ ಹೆಚ್ಚಿನ ವೇತನದ ಪಿಂಚಣಿ ಅರ್ಹತೆಯನ್ನು ನಿರ್ಧರಿಸಬೇಕು ಎಂದು ಹೇಳಿತ್ತು.

ಈ ಸುತ್ತೋಲೆಯನ್ನು ಗುರಾಣಿ ಮಾಡಿಕೊಂಡಿರುವ EPFO, ಸಂಸ್ಥೆಗಳ ಹಳೆಯ ಆಂತರಿಕ ಟ್ರಸ್ಟ್ ನಿಯಮಗಳನ್ನು ನೆಪವಾಗಿಟ್ಟುಕೊಂಡು ಲಕ್ಷಾಂತರ ಹಿರಿಯ ನಾಗರಿಕರ ಹೆಚ್ಚಿನ ಪಿಂಚಣಿ ಅರ್ಜಿಗಳನ್ನು ತಿರಸ್ಕರಿಸುತ್ತಿದೆ ಎಂದು NCPA ಆಕ್ರೋಶ ವ್ಯಕ್ತಪಡಿಸಿದೆ.

ಹೆಚ್ಚಿನ EPS ಪಿಂಚಣಿ ಬಗ್ಗೆ NCPA ಹೇಳುವುದೇನು?
ಸರ್ಕಾರವು 1995 ರಲ್ಲಿ EPS ಯೋಜನೆಯನ್ನು ಪ್ರಾರಂಭಿಸಿತು ಮತ್ತು ಫೆಬ್ರವರಿ 28, 1996 ರ ಅಧಿಸೂಚನೆಯ ಮೂಲಕ ಹೆಚ್ಚಿನ ವೇತನದ ಮೇಲಿನ ಪಿಂಚಣಿ (PoHW) ಚೌಕಟ್ಟನ್ನು ಜಾರಿಗೆ ತಂದಿತು.

ಸುಪ್ರೀಂ ಕೋರ್ಟ್‌ನ ಆರ್‌ಸಿ ಗುಪ್ತಾ (2016) ಮತ್ತು ಸುನಿಲ್ ಕುಮಾರ್ ಬಿ (2022) ಪ್ರಕರಣಗಳ ಮಹತ್ವದ ತೀರ್ಪುಗಳ ನಂತರ ಹೆಚ್ಚಿನ EPS ಪಿಂಚಣಿಯ ಹಕ್ಕು ಸಂಪೂರ್ಣವಾಗಿ ಇತ್ಯರ್ಥವಾಗಿದೆ. ಆದರೂ, “EPFO ಮಾತ್ರ ಸುಪ್ರೀಂ ಕೋರ್ಟ್ ತೀರ್ಪನ್ನೇ ಧಿಕ್ಕರಿಸುವ ಹಾದಿಯನ್ನು ಆಯ್ದುಕೊಂಡಿದೆ” ಎಂದು NCPA ಬೇಸರ ವ್ಯಕ್ತಪಡಿಸಿದೆ.

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲೂ NCPA ಈ ವಿಷಯವನ್ನು ಪ್ರಸ್ತಾಪಿಸಿತ್ತು. 2022 ರ ಸುನಿಲ್ ಕುಮಾರ್ ಬಿ. ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಪಿಂಚಣಿ ಉದ್ದೇಶಕ್ಕಾಗಿ ವಿನಾಯಿತಿ ಪಡೆದ ಮತ್ತು ವಿನಾಯಿತಿ ಪಡೆಯದ ಸಂಸ್ಥೆಗಳ ಉದ್ಯೋಗಿಗಳಿಬ್ಬರೂ ‘ಒಂದೇ ವರ್ಗ’ ಎಂದು ಸ್ಪಷ್ಟವಾಗಿ ತೀರ್ಪು ನೀಡಿತ್ತು ಎಂಬುದನ್ನು ನೆನಪಿಸಿದೆ.

NCPA ಅಹವಾಲುಗಳೇನು?

1. ಜನವರಿ 18, 2025 ರ EPFO ಸುತ್ತೋಲೆಗೆ ತೀವ್ರ ವಿರೋಧ
ಟ್ರಸ್ಟ್ ನಿಯಮಗಳನ್ನು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ತಿದ್ದುಪಡಿ ಮಾಡಿದ್ದರೆ, ಅಂತಹ ಟ್ರಸ್ಟ್‌ಗಳ ಸದಸ್ಯರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಸುತ್ತೋಲೆ ಹೇಳುತ್ತದೆ.

ಆದರೆ, ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು (ಜುಲೈ 9, 2026) ಆಂತರಿಕ ಟ್ರಸ್ಟ್ ನಿಯಮಗಳು ಕೇವಲ ಭವಿಷ್ಯ ನಿಧಿಯ ಆಡಳಿತಾತ್ಮಕ ವ್ಯವಸ್ಥೆಯಷ್ಟೇ, ಅವು ಸಂಸತ್ತು ಜಾರಿಗೆ ತಂದ ಮೂಲ ಕಾಯ್ದೆಯನ್ನು (EPS-95) ಮೀರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ EPFO ಸುತ್ತೋಲೆಯು ಹೈಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎಂದು NCPA ಪ್ರತಿಪಾದಿಸಿದೆ.

2. ತಾರತಮ್ಯ ಮತ್ತು ಅರ್ಧಂಬರ್ಧ ಪಿಂಚಣಿ ನೀಡಿಕೆ!
ಕೆಲವು ವಿನಾಯಿತಿ ಪಡೆದ ಸಂಸ್ಥೆಗಳ ನೌಕರರಿಗೆ ಹೆಚ್ಚಿನ ಪಿಂಚಣಿ ನೀಡಲಾಗುತ್ತಿದ್ದರೆ, ಇನ್ನು ಕೆಲವು ಸಂಸ್ಥೆಗಳ ನೌಕರರ ಅರ್ಜಿಗಳನ್ನು ಸಾರಾಸಾಗಟಾಗಿ ತಿರಸ್ಕರಿಸಲಾಗುತ್ತಿದೆ. (ಆಗಸ್ಟ್ 10, 2026 ರಂದು ಸಂಸತ್ತಿನಲ್ಲಿ ಕಾರ್ಮಿಕ ಸಚಿವಾಲಯವು 1,49,806 ಕ್ಕೂ ಹೆಚ್ಚು ಹಿರಿಯ ಪಿಂಚಣಿ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಒಪ್ಪಿಕೊಂಡಿತ್ತು).

ಇದರಿಂದಾಗಿ ಒಂದೇ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ (ಉದಾಹರಣೆಗೆ SAIL, HAL, BHEL, IOCL, HMT, BEL, ITI ಮುಂತಾದ ಸಂಸ್ಥೆಗಳು) ಕೆಲಸ ಮಾಡುವ ನೌಕರರಲ್ಲಿಯೇ, ಅವರು ಕಾರ್ಯನಿರ್ವಹಿಸುವ ಭೌಗೋಳಿಕ ಘಟಕಗಳ ಆಧಾರದ ಮೇಲೆ ತಾರತಮ್ಯ ಉಂಟಾಗಿದೆ! ಒಂದು ಕೇಂದ್ರದಲ್ಲಿ ಸಿಗುವ ಪಿಂಚಣಿ ಸೌಲಭ್ಯ, ಇನ್ನೊಂದು ಕೇಂದ್ರದ ನೌಕರರಿಗೆ ಸಿಗುತ್ತಿಲ್ಲ.

“ಇದು ಭಾರತದ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 21 (ಜೀವಿಸುವ ಹಕ್ಕು) ಗಳ ನೇರ ಉಲ್ಲಂಘನೆಯಾಗಿದೆ,” ಎಂದು NCPA ಕಳವಳ ವ್ಯಕ್ತಪಡಿಸಿದೆ.

3. ಕೈಯಲ್ಲಿ ಅಲ್ಪ ಪಿಂಚಣಿ, ಕೋರ್ಟ್ ಅಲೆದಾಟಕ್ಕೆ ಭಾರಿ ವೆಚ್ಚ!
ಇಂದಿಗೂ ಅನೇಕ ಪಿಂಚಣಿದಾರರು ತಿಂಗಳಿಗೆ ಕೇವಲ ₹2,000 ದಿಂದ ₹5,000 ರಷ್ಟು ಅಲ್ಪ ಪಿಂಚಣಿ ಪಡೆಯುತ್ತಾ, ತಮ್ಮ ನ್ಯಾಯಯುತ ಪಿಂಚಣಿಗಾಗಿ ಕೋರ್ಟ್‌ಗಳ ಮೆಟ್ಟಿಲೇರಿ ಕಷ್ಟಪಡುತ್ತಿದ್ದಾರೆ.

“EPFO ಬಳಿ ₹11 ಲಕ್ಷ ಕೋಟಿಗೂ ಮೀರಿದ ಬೃಹತ್ ಪಿಂಚಣಿ ನಿಧಿ (Corpus) ಇದೆ. ಆದರೂ ಅದು ಈ ರೀತಿ ದೀರ್ಘ ಕಾನೂನು ಸಮರ ನಡೆಸುವ ಮೂಲಕ ವಯೋವೃದ್ಧ ಪಿಂಚಣಿದಾರರು ಕೋರ್ಟ್ ಅಲೆದು ಬಳಲುವಂತೆ ಮಾಡುತ್ತಿದೆ,” ಎಂದು ಒಕ್ಕೂಟ ತೀವ್ರ ತರಾಟೆಗೆ ತೆಗೆದುಕೊಂಡಿದೆ.

4. ಸಾಲು ಸಾಲು ಕೇಸ್‌ಗಳು – ಸಿಗದ ಒಮ್ಮತ
2022 ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ದೇಶದ 18 ಹೈಕೋರ್ಟ್‌ಗಳಲ್ಲಿ 400 ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. ಈಗಾಗಲೇ 10 ಹೈಕೋರ್ಟ್‌ಗಳು 200 ಕ್ಕೂ ಹೆಚ್ಚು ಅರ್ಜಿಗಳಿಗೆ ಸಂಬಂಧಿಸಿದಂತೆ 26 ತೀರ್ಪುಗಳನ್ನು ಪಿಂಚಣಿದಾರರ ಪರವಾಗಿಯೇ ನೀಡಿದ್ದರೂ EPFO ತನ್ನ ಪಟ್ಟು ಸಡಿಲಿಸಿಲ್ಲ.

ರಾಷ್ಟ್ರಪತಿಗಳ ಮುಂದೆ NCPA ಇಟ್ಟಿರುವ 3 ಪ್ರಮುಖ ಬೇಡಿಕೆಗಳು:
ಎ) ಅನ್ಯಾಯದ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಿರಿ:
ಜನವರಿ 18, 2025 ರಂದು ಹೊರಡಿಸಲಾದ ಕಾನೂನುಬಾಹಿರ ಹಾಗೂ ಶೋಷಣಾತ್ಮಕ EPFO ಸುತ್ತೋಲೆಯನ್ನು ಯಾವುದೇ ಷರತ್ತಿಲ್ಲದೆ ತಕ್ಷಣ ಹಿಂಪಡೆಯಬೇಕು.

ಬಿ) ನಕಲಿ ವ್ಯಾಜ್ಯಗಳನ್ನು ನಿಲ್ಲಿಸಿ – ಸಮಾನತೆ ತನ್ನಿ:
ತಕ್ಷಣವೇ ಕಾನೂನು ಸಮರದ ಪರಿಶೀಲನೆ (Litigation Audit) ನಡೆಸಿ, ಇತ್ಯರ್ಥಗೊಂಡ ತೀರ್ಪುಗಳ ವಿರುದ್ಧ EPFO ಹಾಕಿರುವ ಎಲ್ಲಾ ಅನಗತ್ಯ ಮೇಲ್ಮನವಿಗಳನ್ನು ವಾಪಸ್ ಪಡೆಯಬೇಕು. ಯಾವುದೇ ನೌಕರನಿಗೆ ಕಾರ್ಯವಿಧಾನದ ಹೆಸರಿನಲ್ಲಿ ತಾರತಮ್ಯವಾಗದಂತೆ ನೋಡಿಕೊಳ್ಳಬೇಕು.

ಸಿ) ದಂಡದ ಬಡ್ಡಿ ಮನ್ನಾ ಮಾಡಿ – ತಕ್ಷಣ ಇತ್ಯರ್ಥಗೊಳಿಸಿ:
EPFO ನಡಸಿಕೊಂಡ ಆಡಳಿತಾತ್ಮಕ ವಿಳಂಬದಿಂದಾಗಿ ಬಿದ್ದಿರುವ ದಂಡದ ಬಡ್ಡಿಯನ್ನು ಮನ್ನಾ ಮಾಡಿ, ಹೆಚ್ಚಿನ ಪಿಂಚಣಿಯ ಜಂಟಿ ಆಯ್ಕೆಗಳನ್ನು (Joint Options) ತಕ್ಷಣ ಅಂಗೀಕರಿಸಬೇಕು. ವೃದ್ಧಾಪ್ಯದಲ್ಲಿರುವ ಪಿಂಚಣಿದಾರರಿಗೆ ತಕ್ಷಣದ ಪರಿಹಾರ ನೀಡಲು ಕಾಲಮಿತಿಯ ವ್ಯವಸ್ಥೆಯನ್ನು ರೂಪಿಸಬೇಕು.

Tags: #EPS95PensionersJustice#EPS95PensionIncrease#EPS95PensionRights#IncreaseEPS95Pension#SupportSeniorCitizens
Share76Tweet47
  • Trending
  • Comments
  • Latest
microsoft

60,000 ಟೆಕ್ಕಿಗಳಿಗೆ ತಾವಾಗಿಯೇ ಕೆಲಸ ಬಿಡಲು ಮೈಕ್ರೊಸಾಫ್ಟ್‌ ಆಫರ್!

October 27, 2026
Dhee masala

ಅಡುಗೆಮನೆಯಲ್ಲೇ ಹುಟ್ಟಿಕೊಂಡ ಬೆಂಗಳೂರಿನ ಹೆಮ್ಮೆಯ ಧೀ ಮಸಾಲ! Business Success

October 30, 2026
jio ipo

ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಎಂಟ್ರಿ! ಲಿಸ್ಟಿಂಗ್‌ನಲ್ಲಿ ಪ್ರತಿ ಷೇರಿಗೆ 239/- ಲಾಭ!

October 28, 2026
ನಂದಿನಿ ಹಾಲಿನ ದರ ಲೀಟರ್‌ಗೆ 8 ರೂಪಾಯಿ ಹೆಚ್ಚಳ, ನವೆಂಬರ್‌ 1ರಿಂದಲೇ ಜಾರಿ

ನಂದಿನಿ ಹಾಲಿನ ದರ ಲೀಟರ್‌ಗೆ 8 ರೂಪಾಯಿ ಹೆಚ್ಚಳ, ನವೆಂಬರ್‌ 1ರಿಂದಲೇ ಜಾರಿ

October 29, 2026
EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

EPFO ಹೊಸ ಆಫರ್!, 15,000/- ಸಹಾಯಧನ ಘೋಷಣೆ, ಯಾರಿಗೆ ಸಿಗಲಿದೆ?

0
ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ  ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

ಗೋಲ್ಡ್‌ ಫಂಡ್‌ ಆಫ್‌ ಫಂಡ್‌ ಹೊಸ ಹೂಡಿಕೆ ಸ್ಥಗಿತ ಕಾರಣವೇನು? ಪರಿಣಾಮ?

0
ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

ಚೀನಾ ಇತ್ತೀಚೆಗೆ ಬಂಗಾರವನ್ನು ಹೆಚ್ಚು ಖರೀದಿಸುತ್ತಿರುವುದೇಕೆ?

0
ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

ಎಲ್‌ ಐಸಿಯಿಂದ ಹೊಸ 3 ವಿಮೆ, ಪಿಂಚಣಿ, ಕ್ಯಾನ್ಸರ್‌ ಕವರೇಜ್‌, ಹೆಲ್ತ್‌ ಇನ್ಷೂರೆನ್ಸ್‌ ಬಿಡುಗಡೆ

0
US ELECTION

USMidterms2026 : ಅಮೆರಿಕದಲ್ಲಿ ಮಧ್ಯಂತರ ಚುನಾವಣೆಯ ಮತದಾನ ಆರಂಭ: ಟ್ರಂಪ್‌ ಸೋಲ್ತಾರಾ?

November 3, 2026
gold rate

ಅಕ್ಟೋಬರ್‌ನಲ್ಲಿ ಚಿನ್ನದ ಬೆಲೆ 7% ಕುಸಿತ, ಬೆಳ್ಳಿ 20% ಅಗ್ಗ

November 3, 2026
salary

ಸಂಬಳ ಸಾಲುತ್ತಿಲ್ಲ, ಆದಾಯದ ಮೂಲ ಹೆಚ್ಚಿಸಲು ಭಾರತೀಯರ ಪ್ರಯತ್ನ

November 2, 2026
sebi

ವಿದೇಶಿ ಹೂಡಿಕೆದಾರರಿಗೆ LTCG ತೆರಿಗೆ ರದ್ದುಗೊಳಿಸಲು ಸೆಬಿ ಸಲಹೆ

November 2, 2026
FinCore News




Trusted Financial News & Market Insights. Empowering Smarter Investments for a Wealthier Tomorrow





Categories tes

  • Business
  • Companies
  • Gold/Silver
  • IPO/FPO
  • Market
  • Mutual Fund
  • Opinion
  • Politics & News
  • Stocks
  • Uncategorized
  • Wealth

USMidterms2026 : ಅಮೆರಿಕದಲ್ಲಿ ಮಧ್ಯಂತರ ಚುನಾವಣೆಯ ಮತದಾನ ಆರಂಭ: ಟ್ರಂಪ್‌ ಸೋಲ್ತಾರಾ?

ಅಕ್ಟೋಬರ್‌ನಲ್ಲಿ ಚಿನ್ನದ ಬೆಲೆ 7% ಕುಸಿತ, ಬೆಳ್ಳಿ 20% ಅಗ್ಗ

ಸಂಬಳ ಸಾಲುತ್ತಿಲ್ಲ, ಆದಾಯದ ಮೂಲ ಹೆಚ್ಚಿಸಲು ಭಾರತೀಯರ ಪ್ರಯತ್ನ

Copyright © 2026 Fincore News. Designed by KIPL

No Result
View All Result
  • Contact Us
  • Homepages

Copyright © 2026 Finecore News. Designed by KIPL